More

    VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

    ಕೊಲಂಬೊ : ಮಿಸಸ್ ಶ್ರೀಲಂಕಾ ಬ್ಯೂಟಿ ಪೆಜೆಂಟ್​ ಗೆದ್ದ ಮಹಿಳೆಯ ತಲೆ ಮೇಲಿಂದ ಮುಕುಟವನ್ನು ಕಿತ್ತು ಫಸ್ಟ್ ರನ್ನರ್​ಅಪ್​ನ ತಲೆಗೆ ಏರಿಸಿದ ವಿಚಿತ್ರ ಪ್ರಸಂಗವೊಂದು ಕೊಲೊಂಬೊದಲ್ಲಿ ನಡೆದಿದೆ. ಏಪ್ರಿಲ್ 5 ರಂದು ನಡೆದ ಮಿಸಸ್ ಶ್ರೀಲಂಕಾ 2020 ಕ್ರೌನಿಂಗ್ ಸೆರೆಮೊನಿಯಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ಇದೆಲ್ಲಾ ನೇರ ಪ್ರಸಾರವಾಗಿದೆ.

    ಏಪ್ರಿಲ್ 5 ರಂದು ನಡೆದ ಮಿಸಸ್ ಶ್ರೀಲಂಕಾ ಸ್ಪರ್ಧೆಯ ಅಂತಿಮ ಸುತ್ತಿನ ನಂತರ ಪುಷ್ಪಿಕಾ ಡಿ ಸಿಲ್ವಾ ಅವರನ್ನು ಮಿಸಸ್ ಶ್ರೀಲಂಕಾ ಆಗಿ ಘೋಷಿಸಲಾಯಿತು. ತದನಂತರ ಮಿಸಸ್ ವರ್ಲ್ಡ್ ಮತ್ತು 2019 ಮಿಸಸ್ ಶ್ರೀಲಂಕಾ ಆದ ಕರೊಲೀನ್ ಜ್ಯೂರಿ ಅವರು ಶ್ರೀಮತಿ ಡಿ ಸಿಲ್ವಾ ಅವರಿಗೆ ಮುಕುಟವನ್ನು ತೊಡಿಸಿದರು. ಶ್ರೀಮತಿ ಡಿ ಸಿಲ್ವಾ ಅವರು ಮುಕುಟ ತೊಟ್ಟು ವೇದಿಕೆಯ ಮೇಲೆ ವಿಕ್ಟರಿ ವಾಕ್​ ಕೂಡ ಪೂರೈಸಿದರು.

    ಇದನ್ನೂ ಓದಿ: ಮಾಸ್ಕ್​ ಸರಿಯಾಗಿ ಧರಿಸದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ: ಅಪ್ಪನನ್ನು ಬಿಟ್ಬಿಡಿ ಎಂದು ಮಗ ಗೋಗರೆದ್ರು ಬಿಡದ ಪೊಲೀಸರು!

    ಆದರೆ ಅಷ್ಟರಲ್ಲಿ ಜ್ಯೂರಿ ಅವರು ಮೈಕ್ ತೆಗೆದುಕೊಂಡು “ಮಿಸಸ್ ವರ್ಲ್ಡ್ ಇನ್ಕ್​ ನಿಯಮದ ಪ್ರಕಾರ ಅಭ್ಯರ್ಥಿಯು ವಿವಾಹಿತರಾಗಿರಬೇಕು ಮತ್ತು ವಿಚ್ಛೇದನ ಆಗಿರಬಾರದು. ಆದ್ದರಿಂದ ನಾನು ಈ ಕ್ರೌನ್ ಫಸ್ಟ್ ರನ್ನರ್​ ಅಪ್​ಗೆ ಸಲ್ಲಬೇಕು ಎಂದು ಹೇಳಲಿಚ್ಛಿಸುತ್ತೇನೆ” ಎಂದು ಘೋಷಿಸಿದರು. ತದನಂತರ ಪುಷ್ಪಿಕಾ ಡಿ ಸಿಲ್ವಾ ಕಡೆಗೆ ಹೆಜ್ಜೆ ಹಾಕಿದ ಜ್ಯೂರಿ ಮುಕುಟವನ್ನು ಸಿಕ್ಕಿಹಾಕಿಕೊಂಡಿದ್ದ ಕೂದಲನ್ನೂ ಲೆಕ್ಕಿಸದೆ ಕಿತ್ತುತೆಗೆದರು. ಫಸ್ಟ್ ರನ್ನರ್​ಅಪ್​ಗೆ ತೊಡಿಸಿ ಸಂತಸಪಟ್ಟರು. ಶಾಕ್​​ಗೆ ಒಳಗಾದ ಪುಷ್ಪಿಕಾ ವೇದಿಕೆ ಬಿಟ್ಟು ಹೋದರೆ, ಮುಕುಟ ತೊಟ್ಟ ಫಸ್ಟ್ ರನ್ನರ್​ ಅಪ್​ ವಿಕ್ಟರಿ ಸ್ಪೀಚ್ ಮಾಡಿದರು.

    ಈ ಘಟನೆಯ ವಿಡಿಯೋ ತುಣುಕನ್ನು ಕೊಲಂಬೊ ಗೆಜೆಟ್​ ಯೂಟ್ಯೂಬ್​ನಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ.

    ಇದೆಲ್ಲ ನಡೆದ ಮಾರನೇ ದಿನ ಶ್ರೀಮತಿ ಡಿ ಸಿಲ್ವಾ ಅವರು, ಫೇಸ್​ಬುಕ್​ನಲ್ಲಿ ಈ ಘಟನೆಯಿಂದ ತಮ್ಮ ನೆತ್ತಿಗೆ ಏಟಾಗಿದೆ ಎಂದು ಹೇಳಿದ್ದಲ್ಲದೆ, “ನಾನು ವಿಚ್ಛೇದಿತ ಮಹಿಳೆ ಅಲ್ಲ. ಅವರ ಬಳಿ ಹಾಗೆ ಹೇಳಲು ಪುರಾವೆ ಇದ್ದರೆ ತೋರಿಸಲಿ” ಎಂದು ಚ್ಯಾಲೆಂಜ್ ಮಾಡಿದರು. “ಸಾಂಕೇತಿಕವಾದ ಮುಕುಟವನ್ನು ನನ್ನ ತಲೆಯಿಂದ ಕಿತ್ತುಕೊಳ್ಳಲಾಗಿದ್ದರೂ ಈ ಅನ್ಯಾಯ ಮತ್ತು ಅವಮಾನವನ್ನು ಸರಿಪಡಿಸಲು ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬರೆದರು.

    ಇದನ್ನೂ ಓದಿ: ₹26 ಸಾವಿರ ಮಾಸ್ಕ್​ ಧರಿಸಿ ಸ್ಪೆಷಲ್​ ಮೆಸೇಜ್​ ನೀಡಿದ್ರು ಕರೀನಾ… ಮಾಸ್ಕ್​ ಸೋಲ್ಡ್​ ಔಟ್​!

    ತದನಂತರ ಸ್ಪರ್ಧೆಯ ಅಧಿಕಾರಿಗಳು ‘ಶ್ರೀಮತಿ ಡಿ ಸಿಲ್ವಾ ವಿಚ್ಛೇದನ ಹೊಂದಿದವರಲ್ಲ ಮತ್ತು ಮುಕುಟವನ್ನು ಅವರಿಗೆ ಹಿಂತಿರುಗಿಸಲಾಗುವುದು’ ಎಂದು ದೃಢಪಡಿಸಿದರು. ಈ ನಿಟ್ಟಿನಲ್ಲಿ, ಮಿಸಸ್​ ಶ್ರೀಲಂಕಾ ವರ್ಲ್ಡ್ ನ ರಾಷ್ಟ್ರೀಯ ನಿರ್ದೇಶಕ ಚಂಡಿಮಾಲ್ ಜಯಸಿಂಗೆ ಅವರು ಈ ಘಟನೆಯ ಬಗ್ಗೆ ನಿರಾಶರಾಗಿರುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದು, “ಕರೋಲಿನ್ ಜೂರಿ ವೇದಿಕೆಯಲ್ಲಿ ವರ್ತಿಸಿದ ರೀತಿ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಹೇಳಿಕೆ ನೀಡಿದರು. ಘಟನೆಯ ಬಗ್ಗೆ ಮಿಸಸ್ ವರ್ಲ್ಡ್ ಸಂಸ್ಥೆ ತನಿಖೆ ಪ್ರಾರಂಭಿಸಿದೆ ಎನ್ನಲಾಗಿದೆ.

    ಮತ್ತೆ ಮುಕುಟವನ್ನು ತೊಡಿಸಲ್ಪಟ್ಟಿರುವ ಶ್ರೀಮತಿ ಪುಷ್ಪಿಕಾ ಡಿ ಸಿಲ್ವಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಪ್ರಶಸ್ತಿಯನ್ನು ಶ್ರೀಲಂಕಾದ ಎಲ್ಲಾ ಸಿಂಗಲ್ ಮದರ್​ಗಳಿಗೆ ಡೆಡಿಕೇಟ್​ ಮಾಡುತ್ತಿರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್)

    ಬಾಲಿವುಡ್​ ತಾರೆ ಕತ್ರೀನಾ ಕೈಫ್​​ಗೆ ಕರೊನಾ

    ‘ನಾನು ಬಂಗಾಳಿ ಮಾತನಾಡುವುದರ ಬಗ್ಗೆಯೂ ದೀದಿ ಸಿಟ್ಟಾಗ್ತಿದ್ದಾರೆ’ : ಮೋದಿ

    ‘ಕರೊನಾ ಸೋಂಕು ನಿವಾರಣೆಯಾದವರ ಬೆನ್ನುಹತ್ತುವ ಮೆದುಳು ಸಂಬಂಧಿ ಖಾಯಿಲೆಗಳು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts