ಬಾಲಿವುಡ್​ ತಾರೆ ಕತ್ರೀನಾ ಕೈಫ್​​ಗೆ ಕರೊನಾ

ಮುಂಬೈ : ಬಾಲಿವುಡ್ ತಾರೆ ಕತ್ರೀನಾ ಕೈಫ್ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ಬಗ್ಗೆ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಕೈಫ್ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕತ್ರೀನಾ ಕೈಫ್ ಅವರ ಬಾಯ್​​ಫ್ರೆಂಡ್ ಎಂದು ಹೇಳಲಾಗುತ್ತಿರುವ ನಟ ವಿಕಿ ಕೌಶಲ್​ರಿಗೆ ಕರೊನಾ ಸೋಂಕು ದೃಢಪಟ್ಟ ವಿಷಯ ತಿಳಿದ ಮರುದಿನವಾದ ಇಂದು ಈ ಸುದ್ದಿ ಬಂದಿದೆ. ಇತ್ತೀಚೆಗೆ ಕರೊನಾ ಪಾಸಿಟೀವ್ ಬಂದಿರುವ ಬಾಲಿವುಡ್ ನಟ-ನಟಿಯರ ಪಟ್ಟಿಯಲ್ಲಿ ಅಕ್ಷಯ್​ಕುಮಾರ್, ಗೋವಿಂದ, ಆಲಿಯ ಭಟ್​, ಆಮೀರ್ ಖಾನ್​, ಆರ್​.ಮಾಧವನ್​​ ಸೇರಿದ್ದಾರೆ. (ಏಜೆನ್ಸೀಸ್)