More

    ಮುಗಿಯದ ಒಳಚರಂಡಿ ಗೋಳು, ಸಮಸ್ಯೆಗೆ ಸ್ಪಂದಿಸದ ಜಿಲ್ಲಾಡಳಿತ

    ಆರ್.ಬಿ ಜಗದೀಶ್ ಕಾರ್ಕಳ
    ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಒಳಚರಂಡಿ ಯೋಜನೆ ಅನುಷ್ಠಾನಗೊಳ್ಳದೆ ಹೋದುದರಿಂದ ಒಳಚರಂಡಿ ತ್ಯಾಜ್ಯ ಜಲ ಸಂಪನ್ಮೂಲದೊಂದಿಗೆ ವಿಲೀನಗೊಳ್ಳುತ್ತಿದ್ದು ನಾಗರಿಕರು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ.

    ಎಂ.ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ತಂದ ಕೀರ್ತಿ ಕಾರ್ಕಳಕ್ಕೆ ಸಲ್ಲುತ್ತದೆ. ಜನಸಂಖ್ಯೆ ಹಾಗೂ ನಗರದ ಅಭಿವೃದ್ಧಿಯಿಂದ ಒಳಚರಂಡಿ ಯೋಜನೆಯಲ್ಲಿ ಮುಂದೆ ಹಲವು ತೊಂದರೆಗಳು ಎದುರಾಗಿ ನಗರದ ಬಹುತೇಕ ಬಾವಿಗಳಿಗೆ ಒಳಚರಂಡಿ ತ್ಯಾಜ್ಯ ಸೋರಿಕೆಯಾಗಿ ನೀರು ಕಲುಷಿತಗೊಳ್ಳುತ್ತಿತ್ತು.

    ಈ ಸಮಸ್ಯೆ ಪರಿಹಾರಕ್ಕೆ ಶಾಸಕ ವಿ.ಸುನೀಲ್‌ಕುಮಾರ್ ಪ್ರಸ್ತುತ ಇದ್ದ ಒಳಚರಂಡಿ ಯೋಜನೆಗೆ ಪರ್ಯಾಯವಾಗಿ ನೂತನ ಯೋಜನೆ ಅನುಷ್ಠಾನಗೊಳಿಸಿದ್ದಾರೆ. 13 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭಗೊಂಡು, ಮೂರು ಮಾರ್ಗದಿಂದ ಆಭರಣ ಚಿನ್ನಾಭರಣ ಮಳಿಗೆವರೆಗಿನ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಲಾಕ್‌ಡೌನ್ ಆಗಿದ್ದರಿಂದ ಕೆಲಸ ಸ್ಥಗಿತಗೊಂಡಿದೆ. ನೂತನವಾಗಿ ಅಳವಡಿಸಿದ ಒಳಚರಂಡಿ ಚೇಂಬರ್‌ಗಳಿಂದ ಮಳೆಗಾಲದಲ್ಲಿ ತ್ಯಾಜ್ಯ ನೀರು ಉಕ್ಕಿ ರಸ್ತೆ ಮೇಲ್ಘಾಗದಲ್ಲಿ ಹರಿಯುತ್ತಿರುವುದರಿಂದ ಪರಿಸರದಲ್ಲಿ ಅಸಹ್ಯ ವಾಸನೆ ಬೀರುತ್ತಿದೆ.

    ಪರಿಹಾರ ಕಂಡುಕೊಳ್ಳಲು ವಿಫಲ: ರಾಜ್ಯ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿಯಿಂದ ಕಾಮಗಾರಿ ನಡೆಯುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಕೆಲಸ ಅಪೂರ್ಣಗೊಂಡಿದೆ. ಮೂರು ಮಾರ್ಗದಿಂದ ಆಭರಣ ಮಳಿಗೆವರೆಗೆ ಒಳಚರಂಡಿ ಚೇಂಬರ್‌ಗಳಿಂದ ತ್ಯಾಜ್ಯ ಹೊರಗೆ ಹರಿಯುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಂಡಳಿ ಇಂಜಿನಿಯರ್‌ಗಳು ವಿಫಲರಾಗಿದ್ದಾರೆ. ಆನೆಕೆರೆ ಮಸೀದಿ ಪಕ್ಕ ಹಾದುಹೋಗಿರುವ ಒಳಚರಂಡಿ ಪೈಪ್ ಒಡೆದಿರುವುದರಿಂದ ಅಲ್ಲಿ ತ್ಯಾಜ್ಯ ನೀರು ಪರಿಸರ ವ್ಯಾಪ್ತಿ ಹರಿದು ಜಲಮೂಲ ಸೇರುತ್ತಿದೆ.

    ಪ್ರತಿವರ್ಷ ಎದುರಾಗುವ ಸಮಸ್ಯೆ: ಆನೆಕೆರೆ ಮಸೀದಿ ಪಕ್ಕ ಹಾದುಹೋಗುವ ಬೃಹತ್ ಗಾತ್ರದ ಒಳಚರಂಡಿಯ ಚೇಂಬರ್‌ನಿಂದ ಮಳೆಗಾಲ ಸಂದರ್ಭ ತ್ಯಾಜ್ಯ ನೀರು ಹರಿದು ಹೋಗುತ್ತಿರುವುದು ಸಾಮಾನ್ಯ. ಇದೇ ತ್ಯಾಜ್ಯ ನೀರು ಹರಿದು ಮುಂದೆ ನದಿಗೆ ಸೇರುತ್ತಿರುವ ಕುರಿತು ವಿಜಯವಾಣಿ ಪತ್ರಿಕೆ ಹಿಂದೆ ಸಚಿತ್ರ ವರದಿ ಪ್ರಕಟಿಸಿದ್ದು, ಪುರಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿತ್ತು. ಇದನ್ನೇ ಮುಂದಿಟ್ಟು ಅಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿಗಳ ತಂಡ ಅಧ್ಯಯನಕ್ಕಾಗಿ ಕಾರ್ಕಳಕ್ಕೆ ಆಗಮಿಸಿತ್ತು. ನದಿ ಹರಿದು ಹೋಗುವ ಭಾಗದ ಜನ ಕುಡಿಯಲು, ಕೃಷಿ ಚಟುವಟಿಕೆ, ಬಟ್ಟೆ ಒಗೆಯಲು ಇಲ್ಲಿಯ ನೀರನ್ನೇ ಬಳಸುತ್ತಿದ್ದಾರೆ. ಕೊಳಚೆ ನೀರು ಬಳಸುವುದರಿಂದ ರೋಗಗಳು ಹಬ್ಬುವ ಭೀತಿ ಇಲ್ಲಿನ ಜನರನ್ನು ಕಾಡುತ್ತಿದೆ. ನದಿ ದಡದಲ್ಲಿ ವಾಸಿಸುವವರ ಬಾವಿ, ಕೆರೆಗಳು ಮಲಿನಗೊಂಡು ಮಲೇರಿಯಾ, ಡೆಂೆ ಮೊದಲಾ ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ.

    ಮಳೆ ನೀರು ಸಂಪರ್ಕ: ತ್ಯಾಜ್ಯ ನೀರು ಹರಿದು ಹೋಗಲೆಂದು ನೂತನವಾಗಿ ನಿರ್ಮಿಸಿರುವ ಒಳಚರಂಡಿಗೆ ಮಳೆಗಾಲದಲ್ಲಿ ಮನೆ ಹಾಗೂ ಕಟ್ಟಡಗಳಿಂದ ಹೊರಹೋಗುವ ಮಳೆ ನೀರನ್ನೂ ಹರಿದು ಬಿಡಲಾಗಿದೆ. ಇದರಿಂದ ಪೈಪ್‌ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ತ್ಯಾಜ್ಯ ನೀರು ಚೇಂಬರ್ ಮೂಲಕ ಉಕ್ಕಿ ಹೊಸ ಸಮಸ್ಯೆ ಎದುರಾಗಿದೆ. ಈ ಕುರಿತು ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆ ಹೊರಡಿಸಿ ಮಳೆ ನೀರನ್ನು ಒಳಚರಂಡಿಗೆ ಬಿಡದಂತೆ ತಿಳಿವಳಿಕೆ ಹೊರಡಿಸಿದ್ದರೂ ಯಾರೂ ಗಮನ ಹರಿಸುತ್ತಿಲ್ಲ.

    ಒಳಚರಂಡಿ ಪೈಪ್ ಹಳೆಯದಾಗಿರುವ ಕಾರಣ ಒಡೆದಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲಿಸಿ, ಶೀಘ್ರ ದುರಸ್ತಿ ಪಡಿಸಿ, ಕ್ರಮ ಜರುಗಿಸುತ್ತೇವೆ.
    – ರೇಖಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

    ಒಳಚರಂಡಿ ಕಾಮಗಾರಿಯಲ್ಲಿ ಉಂಟಾಗಿರುವ ಲೋಪದೋಷದಿಂದ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಇದಕ್ಕೆ ನೇರವಾಗಿ ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತವೇ ಹೊಣೆ.
    – ಶುಭದ ರಾವ್, ಪುರಸಭಾ ಕೌನ್ಸಿಲರ್, ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts