More

    ಮುರಿದ ಒಳಚರಂಡಿ ಕಾಂಕ್ರೀಟ್ ಸ್ಲಾೃಬ್ ಪಾದಚಾರಿಗಳಿಗೆ ಅಪಾಯಕಾರಿ

    ಉಡುಪಿ: ನಗರದ ವಿವಿಧೆಡೆ ಒಳಚರಂಡಿಗೆ ಮುಚ್ಚಿದ್ದ ಕಾಂಕ್ರಿಟ್ ಸ್ಲಾೃಬ್‌ಗಳು ಮುರಿದುಬಿದ್ದಿದ್ದು, ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಪಾದಚಾರಿಗಳಿಗೆ ಅಪಾಯ ಸಾಧ್ಯತೆಯಿದೆ. ಅಲ್ಲದೆ ತೆರೆದ ಚರಂಡಿ ದುರ್ವಾಸನೆಯನ್ನೂ ಬೀರುತ್ತಿದೆ.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬನ್ನಂಜೆ-ಉಡುಪಿ ಮಾರ್ಗ ಹಾಗೂ ಜೋಡುಕಟ್ಟೆ ಮೊದಲಾದ ಕಡೆ ಒಳಚರಂಡಿ ಹಾದು ಹೋಗುವ ಮಾರ್ಗದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಕಾಂಕ್ರೀಟ್ ಓವರ್ ಸ್ಲಾೃಬ್‌ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಇವು ತುಂಡಾಗಿ ಬಾಯ್ದೆರೆದುಕೊಂಡಿವೆ. ಇದು ಪಾದಚಾರಿಗಳ ಪ್ರಾಣಕ್ಕೆ ಸಂಚಕಾರ ತಂದಿದೆ. ರಾತ್ರಿ ವೇಳೆ ಜನರು ನಡೆದಾಡುವಾಗ ಸ್ಪಲ್ಪ ಎಡವಿದರೂ ನೇರ ಚರಂಡಿಗೆ ಬೀಳುವ ಅಪಾಯವಿದೆ. ಅನೇಕರು ಈಗಾಗಲೇ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

    ನಗರದಲ್ಲಿ ಸುಮಾರು 30 ಸ್ಲಾೃಬ್‌ಗಳು ತುಂಡಾಗಿದೆ. ಉಡುಪಿ-ಕಿದಿಯೂರು ಹೊಟೇಲ್ ಮಾರ್ಗವಾಗಿ ಕುಂದಾಪುರಕ್ಕೆ ತಿರುವು ಪಡೆಯುವ ಶಿರಿಬೀಡು-ಬನ್ನಂಜೆ ರಸ್ತೆ ಕ್ರಾಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಒಳಚರಂಡಿ ಕಾಂಕ್ರಿಟ್ ಓವರ್ ಸ್ಲಾೃಬ್ ಬಾಯ್ದೆರೆದುಕೊಂಡಿದೆ. ರಾತ್ರಿ ಸಂದರ್ಭ ತಿರುವಿನಲ್ಲಿ ತೆರೆದ ಚರಂಡಿ ಇರುವುದು ತಿಳಿಯದೆ ದ್ವಿಚಕ್ರವಾಹನಗಳು ಗುಂಡಿಗೆ ಬೀಳುತ್ತಿವೆ. ಈ ಮಾರ್ಗವಾಗಿ ನಿತ್ಯ ಸಂಚಾರಿಗಳಲ್ಲದೆ ಹೊಸಬರು ವಾಹನ ಚಲಾಯಿಸಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ.

    ಜೋಡುಕಟ್ಟೆಯ ಮೆಡಿಕಲ್ ಸೆಂಟರ್ ಸ್ವಲ್ಪ ಮುಂದೆ ಚರಂಡಿಗೆ ಆಳವಡಿಸಲಾದ ಕಾಂಕ್ರೀಟ್ ಸ್ಲಾೃಬ್ ಮುರಿದು ಬಿದ್ದು, 2-3 ತಿಂಗಳು ಕಳೆದು ಹೋಗಿದೆ. ಆದರೂ ನಗರಸಭೆ ಇದನ್ನು ಸರಿಪಡಿಸಿಲ್ಲ. ಈ ಮಾರ್ಗದಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಮಕ್ಕಳು, ವೃದ್ಧರು ಸ್ಲಾೃಬ್‌ನೊಳಗೆ ಬಿದ್ದರೆ ಅಪಾಯ ಗ್ಯಾರೆಂಟಿ.
    ಸುಬ್ರಹ್ಮಣ್ಯ ಉಡುಪ, ಸ್ಥಳೀಯರು

    ನಗರಸಭೆ ವ್ಯಾಪ್ತಿಯಲ್ಲಿ ಕಾಂಕ್ರೀಟ್ ಓವರ್ ಸ್ಲಾೃಬ್ ಮರು ಆಳವಡಿಕೆಗೆ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ. ಸುಮಾರು 500 ಸ್ಲಾೃಬ್‌ಗೆ ಟೆಂಡರ್ ಟೆಂಡರ್ ಕರೆದು ಆಗಸ್ಟ್‌ನಲ್ಲಿ ಸ್ಲಾೃಬ್ ಆಳವಡಿಕೆ ಕೆಲಸ ಮಾಡಲಾಗುತ್ತದೆ.
    ಮೋಹನ್‌ರಾಜ್, ಸಹಾಯಕ ಅಭಿಯಂತ, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts