More

    ತಾಯಿ ಭುವನೇಶ್ವರಿಗೆ ಚರಂಡಿ ನೀರಿನ ಅಭಿಷೇಕ!!

    ಸಿದ್ದಾಪುರ: ರಾಜ್ಯದ ಏಕೈಕ ಭುವನೇಶ್ವರಿ ದೇಗುಲವಾದ ಸಿದ್ದಾಪುರದ ಭುವನಗಿರಿಯ ದೇವಸ್ಥಾನದ ಪುಷ್ಕರಣಿಗೆ ಚರಂಡಿ ನೀರು ಸೇರುತ್ತಿದ್ದು, ಕ್ರಮ ವಹಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಮನವಿ ಮಾಡಿದ್ದಾರೆ.
    ತಹಸೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅವರು ಮನವಿ ಸಲ್ಲಿಸಿದ್ದಾರೆ. ಬಿಳಗಿ ಅರಸರ ಕಾಲದಲ್ಲಿ ಪುಷ್ಕರಣಿಯನ್ನು ನಿರ್ಮಿಸಲಾಗಿದೆ. ಪ್ರತಿ ದಿನ ತಾಯಿ ಭುವನೇಶ್ವರಿಯ ಅಭಿಷೇಕಕ್ಕೆ ಇದೇ ಪುಷ್ಕರಣಿಯ ನೀರನ್ನು ಬಳಸಲಾಗುತ್ತದೆ.

    ಇದನ್ನೂ ಓದಿ: ಕಾರವಾರ ಕಡಲಲ್ಲಿ ಅಪಾಯಕ್ಕೆ ಸಿಲುಕಿದ 8 ವಿಜ್ಞಾನಿಗಳು

    ಸುತ್ತಲಿನ ಚರಂಡಿ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿಕೊಡದ ಕಾರಣ ಮಳೆಗಾಲದಲ್ಲಿ ಚರಂಡಿಯ ನೀರು ಪುಷ್ಕರಣಿಯನ್ನು ಸೇರುತ್ತಿದೆ.

    ಪುಷ್ಕರಣಿಯ ನೀರು ಮಲಿನವಾಗುತ್ತಿದ್ದು, ಈ ಕುರಿತು ಕ್ರಮ ವಹಿಸುವಂತೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಇದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ. ಕೂಡಲೇ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

    ರಾಜ್ಯದ ಏಕೈಕ ದೇಗುಲ:

    ತಾಯಿ ಭುವನೇಶ್ವರಿಯನ್ನು ಕರ್ನಾಟಕ ಮಾತೆ ಎಂದು ನಂಬಲಾಗುತ್ತದೆ. ಭುವನೇಶ್ವರಿ ದೇವಿಗೆ ನಿತ್ಯ ಪೂಜೆ ನಡೆಯುವ ರಾಜ್ಯದ ಏಕೈಕ ದೇಗುಲ ಇದಾಗಿದೆ. ಕದಂಬರು ಈ ದೇವಾಲಯವನ್ನು ಪ್ರಾರಂಭಿಸಿದರು. ಆದರೆ, 1692 ರಲ್ಲಿ ಬಿಳಗಿ ಅರಸ ಬಸವಲಿಂಗರು ಇದನ್ನು ಪೂರ್ಣಗೊಳಿಸಿದರು ಎಂದು ಇತಿಹಾಸ ಹೇಳುತ್ತದೆ. 350 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನಕ್ಕೆ ಹೋಗಬೇಕು.

    ಇಲ್ಲಿ ಭುವನೇಶ್ವರಿಯ ಜತೆ,ಗಣಪತಿ, ಗೋಪಾಲಕೃಷ್ಣ, ನಂದಿಕೇಶ್ವರ, ಹಾಗೂ ನಾಗರ ದೇವರೂ ಇದೆ. ಇಲ್ಲಿ ಪ್ರತಿನಿತ್ಯ ಪೂಜೆ, ಮಂಗಳಾರತಿಗಳು ನಡೆಯುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts