More

    ಲೋಕಸಮರಕ್ಕೆ ಡ್ರ್ಯಾಗನ್ ಕಂಟಕ!: ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಕುತಂತ್ರ

    ನವದೆಹಲಿ: ಜಾಗತಿಕ ಮಟ್ಟದಲ್ಲಿ ಮೇಲೇರುತ್ತಿರುವ ಭಾರತದ ಖ್ಯಾತಿ, ಪ್ರತಿಷ್ಠೆಯಿಂದ ಇನ್ನಷ್ಟು ಮತ್ಸರಕ್ಕೀಡಾಗಿರುವ ಚೀನಾ, ಕೃತಕ ಬುದ್ಧಿಮತ್ತೆ (ಎಐ ತಂತ್ರಜ್ಞಾನ) ಬಳಸಿಕೊಂಡು ಭಾರತದ ಲೋಕಸಭಾ ಚುನಾವಣೆಗೆ ಕಂಟಕವೊಡ್ಡಲು ಸಂಚು ಹೆಣೆದಿದೆ. ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡ್ರಾ್ಯಗನ್ ರಾಷ್ಟ್ರದ ಈ ಮಹಾ ಷಡ್ಯಂತ್ರವನ್ನು ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ ಬಯಲಿಗೆಳೆದಿದೆ.

    ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ವರ್ಚಸ್ಸು ಹಾಗೂ ದಕ್ಷ ಆಡಳಿತದ ಮೂಲಕ ಭಾರತವನ್ನು ಜಾಗತಿಕವಾಗಿ ಉನ್ನತ ಸ್ಥರಕ್ಕೆ ಕೊಂಡೊಯ್ಯುವ ಜತೆಗೆ, ಚೀನಾದ ಪ್ರತಿಯೊಂದು ಕುತಂತ್ರಗಳಿಗೂ ಸೆಡ್ಡು ಹೊಡೆಯುತ್ತಿರುವುದು ಚೀನಾಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯನ್ನುಂಟು ಮಾಡಿದೆ. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಚೀನಾಗೆ ಇಷ್ಟವಿಲ್ಲ. ಏಷ್ಯಾದಲ್ಲಿ ಬಿಗಿಯಾಗುತ್ತಿರುವ ಭಾರತದ ಹಿಡಿತ, ಆರ್ಥಿಕತೆಯಲ್ಲಿ ಚೀನಾದ ಸರಿಸಮನಕ್ಕೆ ಭಾರತ ಬೆಳೆಯುತ್ತಿರುವುದು ಚೀನಾವನ್ನು ಕಂಗಾಲಾಗಿಸಿದೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶೀಘ್ರವೇ ಕಾಯಂ ಸ್ಥಾನ ಪಡೆಯಲಿದೆ ಎಂಬ ಕೇಂದ್ರ ಸಚಿವ ಜೈಶಂಕರ್ ಹೇಳಿಕೆ ಡ್ರಾ್ಯಗನ್ ರಾಷ್ಟ್ರಕ್ಕೆ ಕಸಿವಿಸಿ ಉಂಟುಮಾಡಿದೆ. ಹೀಗಾಗಿಯೇ ಭಾರತದ ಚುನಾವಣೆ ಸಂದರ್ಭದಲ್ಲಿ ‘ತಾಂತ್ರಿಕ ಸಮರ’ ಹೂಡುವ ಸಂಚು ಹಣೆದು ಎಐ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗಷ್ಟೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ರ್ಚಚಿಸಿದ್ದರು. ಈ ಬೆಳವಣಿಗೆ ಬಳಿಕ ಚೀನಾದ ಕುತಂತ್ರ ಬಯಲಾಗಿದೆ.

    PM Modi

    ದುರುಪಯೋಗ ತಡೆಗೆ ಕ್ರಮ: ಚಾಟ್ ಜಿಪಿಟಿ ಅಭಿವೃದ್ಧಿ ಮಾಡಿದ ಓಪನ್ ಎಐ ಕಂಪನಿಯ ಪ್ರತಿನಿಧಿಗಳು ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದರು. ಚುನಾವಣೆ ಆಯೋಗದ ಸದಸ್ಯರನ್ನು ಭೇಟಿಯಾಗಿ ಪ್ರಾತ್ಯಕ್ಷಿಕೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಎಐ ದುರುಪಯೋಗ ತಡೆಯಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಅದರಲ್ಲಿ ವಿವರಿಸಿದ್ದರು.

    ವಿದೇಶಿ ಕೈವಾಡ ಇದೇ ಮೊದಲಲ್ಲ: ಚೀನಾದ ಸರ್ಕಾರಿ-ಬೆಂಬಲಿತ ಸೈಬರ್ ಗುಂಪುಗಳು ಉತ್ತರ ಕೊರಿಯಾದೊಂದಿಗೆ ಸೇರಿಕೊಂಡೇ 2024ರ ಹಲವು ಚುನಾವಣೆ ಟಾರ್ಗೆಟ್ ಮಾಡಿವೆ. ಎಐ ತಂತ್ರಜ್ಞಾನ ಬಳಸಿಕೊಂಡು ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಈ ಕುತಂತ್ರಿಗಳ ಸಂಚಾಗಿದೆ. ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾದ ಬಳಿಕ ಚೀನಾ ಭಾರತವನ್ನು ಟಾರ್ಗೆಟ್ ಮಾಡಿದೆ. ಭಾರತದ ಬಳಿಕ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಚುನಾವಣೆ ಅಸ್ತವಸ್ತಗೊಳಿಸುವುದು ಚೀನಾದ ಸಂಚಾಗಿದೆ ಎಂದು ಮೈಕ್ರೋಸಾಫ್ಟ್ ವರದಿ ಹೇಳಿದೆ. ಇನ್ನು ಕಳೆದ ಸಲ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡವಿರುವ ಆರೋಪ ಕೇಳಿಬಂದಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ವಿರುದ್ಧ ನೇರ ಆರೋಪ ಮಾಡಿದ್ದರು.

    ಬೈಡೆನ್​ಗೂ ತಟ್ಟಿದ ಬಿಸಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇದಿಕೆಗೂ ಚೀನಾದ ಕುತಂತ್ರದ ಬಿಸಿ ತಟ್ಟಿದೆ. ಪೂರ್ವಭಾವಿ ಚುನಾವಣೆಯೊಂದರಲ್ಲಿ ಭಾಗವಹಿಸದಂತೆ ಅಧ್ಯಕ್ಷ ಜೋ ಬೈಡೆನ್​ರ ಅನುಕರಣೆಯ ಧ್ವನಿಯಲ್ಲಿ ಸಂದೇಶವೊಂದು ರವಾನೆಯಾಗಿತ್ತು. ಚೀನಾದ ಎಐ-ಸೃಷ್ಟಿತ ಕಂಟೆಂಟ್​ಗಳ ದುರುಪಯೋಗಕ್ಕೆ ಇದು ಒಂದು ಸಾಕ್ಷ್ಯ ಎಂದು ಮೈಕ್ರೋಸಾಫ್ಟ್ ಹೇಳಿದೆ.

    ಲೋಕಸಮರಕ್ಕೆ ಡ್ರ್ಯಾಗನ್ ಕಂಟಕ!: ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಕುತಂತ್ರ

    ಚೀನಾದ ಸಂಚೇನು?
    • ಶತ್ರು ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವುದು
    •  ಭಾರತ ತನಗಿಂತ ಶಕ್ತಿಶಾಲಿ ಆಗಬಾರದೆಂಬ ಕುತಂತ್ರ
    • ಮೋದಿ ಮತ್ತೆ ಪ್ರಧಾನಿಯಾದರೆ ತನ್ನ ಆಟ ನಡೆಯಲ್ಲ
    • ತನ್ನ ಹಿತಾಸಕ್ತಿ ಪರ ಇರುವವರಿಗೆ ಬೆಂಬಲ
    • ಎಐ ಸೃಷ್ಟಿತ ಆಡಿಯೋ, ವಿಡಿಯೋ ತಿರುಚುವ ಸಂಚು
    • ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರಿಸುವುದು
    • ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ತರುವುದು

    ಮೋದಿ ಟಾರ್ಗೆಟ್ ಏಕೆ?

    • ಕೋವಿಡ್ ಬಳಿಕ ಭಾರತದ ಖ್ಯಾತಿ ಜಾಗತಿಕ ಹೆಚ್ಚಳ
    • ಸಂಕಷ್ಟದಲ್ಲೂ ಆರ್ಥಿಕತೆಯಲ್ಲಿ ಮುನ್ನಡೆಯ ಗರಿ
    • ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ವರ್ಚಸ್ಸು ಏರಿಕೆ
    • ಆರ್ಥಿಕತೆಯಲ್ಲಿ ಸವಾಲು ಮೆಟ್ಟಿನಿಲ್ಲುತ್ತಿರುವ ಭಾರತ
    • ಏಷ್ಯಾದಲ್ಲಿ ಚೀನಾ ಸ್ಥಾನ ಭಾರತ ಅತಿಕ್ರಮಿಸಿದ್ದು
    • ಪಾಕ್ ಮೇಲೆ ಭಾರತ ಸಾಧಿಸುತ್ತಿರುವ ನಿಯಂತ್ರಣ
    • ಮೋದಿ ಮತ್ತೆ ಗೆದ್ದರೆ ಚೀನಾ ಹಿಂದಿಕ್ಕುವ ಭಯ
    • ಅಮೆರಿಕ, ಭಾರತದ ಸ್ನೇಹ ವೃದ್ಧಿ ಸಹಿಸಲಾಗುತ್ತಿಲ್ಲ

    ಹೇಗೆಲ್ಲ ಅಪಪ್ರಚಾರ?

    • ತೈವಾನ್ ಎಲೆಕ್ಷನ್​ನಲ್ಲಿ ಚೀನಾದ ಕುತಂತ್ರ ಯಶಸ್ವಿ
    • ಡೀಪ್ ಫೇಕ್​ನಿಂದ ಭಾಷಣ ನಕಲು ಮಾಡುವುದು
    • ನಡೆಯದ ಘಟನೆ ನಡೆದಿದ್ದಾಗಿ ಬಿಂಬಿಸುವುದು
    • ರಾಜಕಾರಣಿಗಳ ಹೇಳಿಕೆಯನ್ನೇ ಬದಲಿಸುವುದು
    • ಸುಳ್ಳು ಕಂಟೆಂಟ್​ಗಳ ಜಾಹೀರಾತು ನೀಡುವುದು
    • ಮತದಾನ ಮುನ್ನ ಜನಾಭಿಪ್ರಾಯ ಬದಲಿಸುವುದು

    ಕಳ್ಳ ಹೆಜ್ಜೆಯ ಗುರುತು

    • ಭಾರತದ ದೂರ ಸಂಪರ್ಕ ವಲಯದ ಮೇಲೆ ಕಣ್ಣು
    • ಚೀನಾ ಸಂಸ್ಥೆ ಫ್ಲಾಕ್ಸ್ ಟೈಫೂನ್ ದಾಳಿ ನಿರಂತರ
    • ಭಾರತ, ಫಿಲಿಪ್ಪೀನ್ಸ್, ಹಾಂಕಾಂಗ್ ಟಾರ್ಗೆಟ್ಅ
    • ಮೆರಿಕದ ದೂರ ಸಂಪರ್ಕ ವಲಯ ಗುರಿ
    • ಭಾರತದ ಪ್ರಧಾನಿ ಕಚೇರಿಯ ಮೇಲೂ ದಾಳಿ
    • ಗೃಹ ಸಚಿವಾಲಯ, ಏರ್ ಇಂಡಿಯಾ ಟಾರ್ಗೆಟ್ಸ
    • ರ್ಕಾರದ 95.2 ಜಿಬಿ ವಲಸಿಗರ ಡೇಟಾ ಹ್ಯಾಕ್
    • ಗಿಟ್ ಹಬ್​ನಲ್ಲಿ ಫೈಲ್ ಪೋಸ್ಟ್ ಮಾಡಿದ್ದ ಹ್ಯಾಕರ್
    • ಮಯನ್ಮಾರ್ ಅಶಾಂತಿ ಹೊಣೆ ಭಾರತದ ತಲೆಗೆ
    • ಎಐ ರಚಿತ ವಿಡಿಯೋ ಪೋಸ್ಟ್ ಮಾಡಿದ್ದ ಚೀನಾ

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts