More

    ನೈಜತೆ ಮತ್ತು ವಿಶ್ವಾಸಾರ್ಹತೆಯೇ ಬಿಜೆಪಿ ಪ್ರಣಾಳಿಕೆಯ ಶಕ್ತಿ: ವಿಜಯವಾಣಿ ಸಂದರ್ಶನ

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ಮುಂದಿನ ಚುನಾವಣೆಯಲ್ಲೂ ಜನ ನಮ್ಮನ್ನು ಆಶೀರ್ವದಿಸುತ್ತಾರೆ. ಬಿಜೆಪಿಯ ಆಡಳಿತ ವಿಭಿನ್ನತೆಯಂತೆ ಪಕ್ಷದ ಪ್ರಣಾಳಿಕೆಯೂ ವಿಭಿನ್ನವಾಗಿರಲಿದೆ. ಪ್ರಣಾಳಿಕೆಯ ವಿಶೇಷತೆ ಬಗ್ಗೆ ಅದರ ಸಂಚಾಲಕರಾಗಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮನದ ಮಾತನ್ನು ಹಂಚಿಕೊಂಡಿದ್ದಾರೆ.
    • ಭಾರತೀಯ ಜನತಾ ಪಾರ್ಟಿ ಚುನಾವಣಾ ವಸ್ತುವನ್ನಾಗಿ ಪ್ರಣಾಳಿಕೆ ಸಿದ್ಧ ಮಾಡಿದೆಯೇ?

    ಖಂಡಿತವಾಗಿಯೂ ಇಲ್ಲ. ಪ್ರಣಾಳಿಕೆ ಎಂಬುದು ಬಿಜೆಪಿಗೆ ಚುನಾವಣಾ ಗಿಮಿಕ್ ಅಲ್ಲ. ಪ್ರಣಾಳಿಕೆ ಅಂದರೆ ಚುನಾವಣೆ ಗೆಲ್ಲುವ ಅಸ್ತ್ರವಲ್ಲ. ಪ್ರಣಾಳಿಕೆ ಅಂದರೆ ಭವಿಷ್ಯದ ಕರ್ನಾಟಕವನ್ನು ನಿರ್ವಿುಸುವ, ಆರೂವರೆ ಕೋಟಿ ಕನ್ನಡಿಗರ ಬದುಕು ಕಟ್ಟಿಕೊಡುವ ಸಂಕಲ್ಪ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಮಾಡಿದ ಸಾರ್ಥಕ ಜನಸೇವೆ ನಮ್ಮೆಲ್ಲರಿಗೂ ತೃಪ್ತಿ ತಂದಿದೆ.

    • ಪ್ರಣಾಳಿಕೆ ಜನರಿಗೆ ಹೇಗೆ ಹತ್ತಿರವಾಗಿದೆ? ಇದರಲ್ಲಿರುವ ವಿಶೇಷತೆಗಳೇನು?

    ಇದು ಬಿಜೆಪಿಯ ಪ್ರಣಾಳಿಕೆ ಅಲ್ಲ. ಇದು ಜನರ ಪ್ರಣಾಳಿಕೆ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾಡಲಾದ ಪ್ರಣಾಳಿಕೆ. ರಾಜ್ಯದ ಜನರ ಕನಸುಗಳಿಗೆ ರೂಪ ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ರಾಜ್ಯದ ಜನರಿಗೆ ಆಶೋತ್ತರಗಳನ್ನು ಅಭಿಪ್ರಾಯ ಸಂಗ್ರಹಣೆ ಮೂಲಕ ಪಡೆಯಲಾಗಿದೆ. ಇದು ಜನರ ಆಶಯದ ಪ್ರಣಾಳಿಕೆ. ಕೇವಲ ಪಕ್ಷದ ಹಾಗೂ ಚುನಾವಣಾ ದೃಷ್ಟಿಯಲ್ಲಿ ತಯಾರು ಮಾಡಲಾಗಿರುವ ಪ್ರಣಾಳಿಕೆಯಲ್ಲ.

    • ಜನರ ಅಭಿಪ್ರಾಯ ಪಡೆಯುವ ವೇಳೆ ರೆಸ್ಪಾನ್ಸ್ ಹೇಗಿತ್ತು? ಈ ವಿಭಿನ್ನತೆಗೆ ಜನ ಮೆಚ್ಚಿಕೊಂಡಿದ್ದಾರಾ?

    ಹೌದು, ಬೇರೆ ಪಕ್ಷಗಳ ಪ್ರಣಾಳಿಕೆ ಅಂದರೆ ಅದು ಪಕ್ಷದ ಸ್ಟ್ರಾಟಜಿ ಆಗಿರುತ್ತದೆ. ಮತ ಕದಿಯುವ ಆಕರ್ಷಣೆಯ ಒಂದು ಪುಸ್ತಕವಾಗಿರುತ್ತದೆ. ಆದರೆ ಬಿಜೆಪಿಯ ಪ್ರಣಾಳಿಕೆ ಸಂಪೂರ್ಣ ವಿಭಿನ್ನ. ಜನರಿಂದ ಬಂದ ಅಭಿಪ್ರಾಯಗಳನ್ನು ನೋಡಿದ ಮೇಲೆ ನಮಗೇ ಅಚ್ಚರಿಯಾಗಿತ್ತು. ವೆಬ್​ಸೈಟ್​ನಲ್ಲಿ 18000ಕ್ಕೂ ಅಧಿಕ, ವಾಟ್ಸ್​ಅಪ್​ನಲ್ಲಿ 5000ಕ್ಕೂ ಅಧಿಕ, ಮಿಸ್ಡ್ ಕಾಲ್ ಮೂಲಕ 5000 ಹೀಗೆ ವಿವಿಧ ರೀತಿ 29000 ಸಲಹೆಗಳು ಬಂದಿತ್ತು.

    • ಈ ಪ್ರಣಾಳಿಕೆಯಲ್ಲಿ ಜನರ ಜತೆ ಯಾರ್ಯಾರು ಭಾಗಿ ಆಗಿದ್ದರು? ಅವರ ಸಲಹೆಗಳನ್ನು ಸ್ವೀಕರಿಸಲಾಗಿದೆಯೇ?

    ಯುವಜನತೆ, ಮಹಿಳೆಯರು, ಕೃಷಿಕರು, ಉದ್ಯಮಿಗಳು, ನೌಕರರು, ಸಂಘ-ಸಂಸ್ಥೆಗಳು ಹೀಗೆ ಸುಮಾರು 50 ವಿವಿಧ ಕ್ಷೇತ್ರಗಳ ಜನರನ್ನು ಸಂರ್ಪಸಿ ಸಲಹೆ ಪಡೆಯಲಾಗಿದೆ. ಆಯಾ ವಿಭಾಗದ ಎಕ್ಸ್​ಪರ್ಟ್​ಗಳ ಜತೆ ಸಭೆ ನಡೆಸಲಾಗಿದೆ. ಕೇಂದ್ರ ನಾಯಕರು ಕೂಡ ಈ ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜನರ ಜತೆ ಎಕ್ಸ್​ಪರ್ಟ್​ಗಳ ಯೋಚನೆಗಳು ಹಾಗೂ ಅವರ ಸಲಹೆಗಳು ತುಂಬಾ ಅಮೂಲ್ಯವಾಗಿತ್ತು.

    • ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೊಷಿಸುತ್ತಿದೆ. ಜೆಡಿಎಸ್ ಪಂಚರತ್ನ ಯಾತ್ರೆ ಮೂಲಕ ಹಲವು ಘೊಷಣೆ ಮಾಡಿದೆ. ಇದು ಬಿಜೆಪಿ ಪ್ರಣಾಳಿಕೆ ಮೇಲೆ ಪ್ರಭಾವ ಬೀರುತ್ತಾ?

    ಕಾಂಗ್ರೆಸ್ ಬರೀ ಗ್ಯಾರೆಂಟಿಗಳನ್ನು ಘೊಷಿಸಿದೆಯೇ ಹೊರತು ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಜೆಡಿಎಸ್​ನ ಪಂಚರತ್ನ ಏನು ಎಂದು ಬಹುಶಃ ಅವರ ಪಕ್ಷದ ಕಾರ್ಯಕರ್ತರಿಗೂ ಸ್ಪಷ್ಟತೆ ಇಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣೆ ಮೇಲೆ ಕಣ್ಣಿಟ್ಟು ಪ್ರಣಾಳಿಕೆ, ಗ್ಯಾರೆಂಟಿ ನೀಡುತ್ತಿವೆ. ಆದರೆ ಬಿಜೆಪಿ ಮುಂದಿನ 25 ವರ್ಷಗಳ ವಿಕಾಸ ಯಾತ್ರೆ ದೃಷ್ಟಿಯಲ್ಲಿಟ್ಟುಕೊಂಡಿದೆ.

    • ಬಿಜೆಪಿ ಪ್ರಣಾಳಿಕೆ ಹೇಗೆ ನೈಜತೆಗೆ ಹತ್ತಿರವಾಗಿದೆ? ಭರವಸೆಗಳ ಈಡೇರಿಕೆ ಸಾಧ್ಯವಿದೆಯಾ?

    ಬಿಜೆಪಿಗೆ ಪ್ರಣಾಳಿಕೆ ಕೇವಲ ಘೊಷಣಾ ಪತ್ರವಲ್ಲ. ಪ್ರಣಾಳಿಕೆ ಎಂದರೆ ನಮಗೆ ಅದು ನಮಗೆ ಭಗವದ್ಗೀತೆಯಂತೆ ಪವಿತ್ರ. ನಾವು ಕೊಟ್ಟಿರುವ ಪ್ರತಿಯೊಂದು ಆಶ್ವಾಸನೆ ಹಿಂದೆಯೂ ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಮರ್ಶೆ ಮಾಡಿದ್ದೇವೆ. ಅದರ ಈಡೇರಿಕೆಯ ಮಾರ್ಗವನ್ನು ಕೂಡ ಕಂಡು ಕೊಂಡಿದ್ದೇವೆ.

    • ಪ್ರಣಾಳಿಕೆ ಕೆಲಸ ಕಾರ್ಯಗಳು ಹೇಗೆ ನಡೆದಿತ್ತು? ಇದಕ್ಕಾಗಿ ವಿಶೇಷ ಸಮಯವನ್ನು ನಿಗದಿ ಮಾಡಲಾಗಿತ್ತೆ? ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು?

    ಬಿಜೆಪಿ ತನ್ನ ಆಡಳಿತ ಮತ್ತು ಅಭಿವೃದ್ಧಿ ಕೆಲಸಗಳಿಂದ ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವ ಪಕ್ಷವನ್ನು ಜನರ ಪಕ್ಷವನ್ನಾಗಿ ಮಾಡಿದೆ. ಅದೇ ರೀತಿ ಪ್ರಣಾಳಿಕೆ ತಯಾರಿಕೆಯ ವೇಳೆ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜನರನ್ನು ಸಂರ್ಪಸಿ ಅಭಿಪ್ರಾಯ ಪಡೆಯಲಾಗಿತ್ತು.

    ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts