- ಮೈಸೂರು: ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ವತಿಯಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶ್ರೀ ಅಡವಿಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ನಿರುಪಾಧೀಶ ಸ್ವಾಮೀಜಿ ಅವರಿಗೆ ‘ಡಾ.ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
- ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿಯನ್ನು ಶ್ರೀಗಳಿಗೆ ಪ್ರದಾನ ಮಾಡಿದರು.
- ಶ್ರೀ ನಿರುಪಾಧೀಶ ಸ್ವಾಮೀಜಿ ಮಾತನಾಡಿ, ಭಕ್ತರು ಬೆವರು ಸುರಿಸಿ ನೀಡುವ ದಾನವು ಸದುಪಯೋಗವಾಗಬೇಕು. ಹಾಗಾದಾಗ ಮಾತ್ರವೇ ಆ ಬೆವರಿಗೆ ಬೆಲೆ ನೀಡಿದಂತ್ತಾಗುತ್ತದೆ. ಹಣ, ದವಸ, ಧಾನ್ಯ ಯಾವುದಾದರು ಸರಿ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
- ಸುತ್ತಮುತ್ತಲಿನ ಪರಿಸರ, ಸಮಾಜ, ಒಡನಾಡಿಗಳು ಹೀಗೆ ಎಲ್ಲವೂ ನನ್ನ ಬರವಣಿಗೆಯಲ್ಲಿ ತೊಡಗುವಂತೆ ಮಾಡಿತು. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ತಲೆಗೆ ಏನಾದರು ಬಂದರೆ ಅದನ್ನು ಬಸ್ ಚೀಟಿಯಲ್ಲಿಯೇ ಬರೆದುಕೊಳ್ಳುತ್ತಿದ್ದೆ. ಬಳಿಕ ಅದನ್ನು ಪರಿಷ್ಕೃತ ಮಾಡಿ ಬೇರೆ ಪುಸ್ತಕದಲ್ಲಿ ದಾಖಲಿಸುತ್ತಿದೆ ಎಂದರು.
- ಸಾಹಿತಿ ಡಾ.ಪ್ರದೀಪ ಕುಮಾರ ಹೆಬ್ರಿ ಮಾತನಾಡಿದರು. ಶ್ರೀ ನಟರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಎಸ್.ರಾಮಪ್ರಸಾದ್, ಸದಸ್ಯ ಟ್ರಸ್ಟಿ ಪ್ರೊ.ನೀ.ಗಿರಿಗೌಡ ಇದ್ದರು.
ಶ್ರೀ ನಿರುಪಾಧೀಶ ಸ್ವಾಮೀಜಿಗೆ ಡಾ.ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ

ಮನೆಯಲ್ಲೇ ಮಾಡಿ ಟೇಸ್ಟಿ ಚಿಲ್ಲಿ ಚೀಸ್ ನೂಡಲ್ಸ್; ಇಲ್ಲಿದೆ ಸಿಂಪಲ್ ವಿಧಾನ | Recipe
ಫ್ಯಾಮಿಲಿ ಜತೆ ಹೋಟೆಲ್ಗೆ ಹೋದರೆ ಫ್ರೈಡ್ರೈಸ್, ನೂಡಲ್ಸ್, ಗೋಬಿ ಹೀಗೆ ಚೈನೀಸ್ ಫುಡ್ ಮೊದಲ ಆಯ್ಕೆಯಾಗಿರುತ್ತದೆ.…
ಈ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪಾಗಿಯೂ ಬೀಟ್ರೂಟ್ ಸೇವಿಸಬೇಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತರಕಾರಿಯಾಗಿದೆ. ಇದು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ…
ಗರ್ಭನಿರೋಧಕ ಮಾತ್ರೆಗಳಿಂದ ಅಪಾಯ ತಪ್ಪಿದ್ದಲ್ಲ; ಇಲ್ಲಿದೆ ಸಂಶೋಧನೆಯಲ್ಲಿ ಬಹಿರಂಗವಾದ ಅಸಲಿ ಸಂಗತಿ |Health Tips
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟುವುದು ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಪಂಚದಾದ್ಯಂತ ಅಂದಾಜು 250…