More

    ಅನುವಾದ ಪ್ರಕ್ರಿಯೆ ಸರಳವಲ್ಲ

    ಧಾರವಾಡ: ಅನುವಾದ ಪ್ರಕ್ರಿಯೆ ಸುಲಭ ಹಾಗೂ ಸರಳವಲ್ಲ. ಮೂಲ ಲೇಖಕರ ಭಾವನೆಗಳಿಗೆ ಚ್ಯುತಿ ಬರದಂತೆ ಅನುವಾದಿಸುವುದು ಅತಿ ಮುಖ್ಯ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಪಿ.ಜಿ.ಎಂ. ಪಾಟೀಲ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಡಾ. ಜೆ.ಪಿ. ದೊಡಮನಿ ಅವರ ಅನುವಾದ ಗ್ರಂಥ ‘ಡಾ. ಬಾಬಾಸಾಹೇಬ ಅಂಬೇಡ್ಕರ್ ಜೀವನ ಚರಿತ್ರೆ’ (ಮರಾಠಿ: ಶ್ರೀ ಧನಂಜಯ ಕೀರ) ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
    ಮೂಲ ಲೇಖಕರ ಶ್ರಮಕ್ಕಿಂತ ಅನುವಾದಕರ ಶ್ರಮ ಅಧಿಕವಾಗಿರುತ್ತದೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಓದುಗರ ಮನವನ್ನು ಗೆಲ್ಲುವಲ್ಲಿ ಬರವಣಿಗೆ ಇರಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅನುವಾದಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ. ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ ಎಂದರು.
    ಕೃತಿಯ ಕುರಿತು ಜೆ.ಎಸ್.ಎಸ್ ಪದವಿ ಕಾಲೇಜಿನ ರಾಜ್ಯಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಲಿಂಗಪ್ಪ ಅರವಳದ ಮಾತನಾಡಿ, ಕೃತಿಯಲ್ಲಿ ದಲಿತ ಭಾರತ, ಬಹಿಷ್ಕೃತ ಭಾರತದ ಸಮಸ್ಯೆಗಳ ದರ್ಶನವಾಗುತ್ತದೆ. ಆ ಸಮುದಾಯದ ವಸ್ತುನಿಷ್ಠ ಸ್ಥಿತಿಗತಿಗಳನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಅಂಬೇಡ್ಕರರ ಹೋರಾಟದ ಬದುಕನ್ನು ಕಟ್ಟಿಕೊಡುವಲ್ಲಿ  ಅನುವಾದ ಕೃತಿ ಸಮರ್ಥವಾಗಿದೆ ಎಂದರು.
    ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.
    ಬಸವಪ್ರಭು ಹೊಸಕೇರಿ, ನೀಲಮ್ಮ ಅರವಳದ, ಡಾ. ಭಗವತಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ಡಿ.ಬಿ. ಬಿರಾದಾರ, ಡಾ. ಮುದಕವಿ, ಮಾರ್ಕಂಡೇಯ ದೊಡಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts