More

    ಪ್ರಧಾನಿಯವರ ಆಗಮನವನ್ನು ಪ್ರಶ್ನಿಸುವವರು ಯಾವ ಪ್ರಜಾಪ್ರಭುತ್ವದಲ್ಲಿದ್ದಾರೆ: ಸಚಿವ ಡಾ.ಅಶ್ವಥ್‌ ನಾರಾಯಣ

    ಹಾಸನ: ಪ್ರಧಾನಮಂತ್ರಿ ಬರುವುದನ್ನೇ ಪ್ರಶ್ನೆ ಮಾಡುವವರು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್‌ ನಾರಾಯಣ ತಿರುಗೇಟು

    ಪ್ರಧಾನಮಂತ್ರಿ ನರೇಂದ್ರಮೋದಿ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣದಲ್ಲಿ ಒಂದು ಗ್ರಾ.ಪಂ. ಉದ್ಧಾರ ಮಾಡಬಹುದಿತ್ತು ಎಂದು ಕುಮಾರಸ್ವಾಮಿ ಟೀಕಿಸಿದ್ದರು, ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು,ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟರೆ ಪ್ರತಿಕ್ರಿಯಿಸಬಹುದು, ಇಂತಹ ಹೇಳಿಕೆಗೆ ಏನು ಪ್ರತಿಕ್ರಿಯಿಸಲಿ. ಪ್ರಧಾನಮಂತ್ರಿಗಳು ಬರುವಂತಹದ್ದನ್ನೇ ಪ್ರಶ್ನೆ ಮಾಡುತ್ತಾರೆ. ಇವರು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದಾರೆ ಅಂತ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

    ನಾಡಿಗೆ ಗೊತ್ತಿದೆ ಪ್ರಧಾನಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ. ಇಡೀ ದೇಶದ ಸುಧಾರಣೆ, ಬದಲಾವಣೆಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ದೇವೇಗೌಡರಿಗೆ ಗೌರವ ಕೊಟ್ಟು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಾರೆ.ದೇವೇಗೌಡರ ಜೊತೆ ಆತ್ಮೀಯತೆ, ಗೌರವ, ವಿಶ್ವಾಸವನ್ನು ಕೊಟ್ಟು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಹೇಳಿಕೆಗೂ ವಾಸ್ತವಿಕತೆಗೂ ಸಂಬಂಧವಿಲ್ಲ.ಇಂತಹ ಹೇಳಿಕೆ ಕೊಡುವುದನ್ನು ಕುಮಾರಸ್ವಾಮಿ ಅವರು ನಿಲ್ಲಿಸಬೇಕು ಎಂದರು.

    ಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ಸಮಾಲೋಚನೆ ಮಾಡಿ ಸೂಕ್ತವಾದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದ ಅವರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿ, ಕಾನೂನು ಗೌರವಿಸುವಂತಹ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗಿಲ್ಲ, ಕಾನೂನಿಗಿಂತ ದೊಡ್ಡವರು ಯಾರು ಇದ್ದೀವಿ, ಕಾನೂನು ಪ್ರಕಾರ ನೊಟೀಸ್​ ಕೊಟ್ಟಿದ್ದಾರೆ.ತನಿಖೆ ನಡೆಯುತ್ತಿದೆ, ಸರಿಯೋ, ತಪ್ಪೋ ತನಿಖೆಯಿಂದ ಹೊರಬರುತ್ತೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಅತಂತ್ರ ಸ್ಥಿತಿಯಲ್ಲಿ “ಮಹಾ” ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts