More

    ಕೆಳಗೆ ಬಿದ್ದವರ ಕೈಹಿಡಿದು ನಡೆಸುವುದು ಅಗತ್ಯ

    ಘಟಪ್ರಭಾ: ಸಮಾಜದಲ್ಲಿ ಕೆಳಗೆ ಬಿದ್ದವರ ಕೈಹಿಡಿದು ಮುನ್ನಡೆಸುವುದು ಅತಿ ಅಗತ್ಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ಪಟ್ಟಣದ ಬಸವ ನಗರದಲ್ಲಿ ಮಹಿಳಾ ಅಭಿವದ್ಧಿ ಮತ್ತು ಸಂರಕ್ಷಣಾ ಸಂಸ್ಥೆಗೆ 2021-22ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

    ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ಸೀತವ್ವ ಜೋಡಟ್ಟಿ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಶೋಷಿತ ವರ್ಗದವರನ್ನು ರಕ್ಷಣೆ ಮಾಡುತ್ತಿರುವ ಸಂಸ್ಥೆ 25 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಅವರಿಗಾಗಿ ಇಂದು ಸ್ವಂತ ಕಟ್ಟಡ ನಿರ್ಮಾಣವಾಗಿದ್ದು ಸಂತಸದ ವಿಷಯ ಎಂದರು.

    ರಾಜ್ಯಸಭಾ ಸದಸ್ಯರ ಅನುದಾನ ಬಳಕೆ ಹಾಗೂ ಉತ್ತಮ ಕಾರ್ಯ ನಿರ್ವಹಣೆಯಲ್ಲಿ ನಾನು 1ನೇ ಸ್ಥಾನದಲ್ಲಿದ್ದೇನೆ. ದೇಶದ ಬಿಜೆಪಿಯ 400 ಸಂಸದರಲ್ಲಿ 63ನೇ ಸ್ಥಾನದಲ್ಲಿ ಇದ್ದೇನೆ. ನನ್ನ ಕಾರ್ಯನಿರ್ವಹಣೆ ನನಗೆ ಸಂತೋಷ ನೀಡಿದೆ ಎಂದರು.

    ಮಾಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೀತವ್ವ ಜೋಡಟ್ಟಿ, ಸುರೇಶ ಪಾಟೀಲ, ರಾಜು ಕತ್ತಿ, ಜಿ.ಎಸ್.ರಜಪೂತ, ಮಹಾಂತೇಶ ಊದಗಟ್ಟಿಮಠ, ಮಲ್ಲಪ್ಪ ಹುಕ್ಕೇರಿ, ಶ್ರೀಕಾಂತ ಕುಲಕರ್ಣಿ, ಗುರುಬಸಯ್ಯ ಕರ್ಪೂರಮಠ, ಪರಪ್ಪ ಗಿರೆಣ್ಣನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts