More

    ಪಠ್ಯದಲ್ಲಿ ವಚನ ಸಾಹಿತ್ಯ ಅಳವಡಿಕೆ ಅಗತ್ಯ

    ಕಂಪ್ಲಿ: ಶಾಲಾ-ಕಾಲೇಜು ಪಠ್ಯದಲ್ಲಿ ವಚನ ಸಾಹಿತ್ಯವನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಮೂಡಿಸಬೇಕಿದೆ ಎಂದು ರಾಮಸಾಗರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುಗ್ಗೇನಹಳ್ಳಿ ರಮೇಶ ಹೇಳಿದರು.

    ಇಲ್ಲಿನ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ 163ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಮೌಢ್ಯ ವಿರೋಧ’ ಕುರಿತು ಉಪನ್ಯಾಸ ನೀಡಿದರು.

    ಭವಿಷ್ಯದಲ್ಲಿ ವೈಚಾರಿಕ ಸಮಾಜ ನಿರ್ಮಾಣಕ್ಕಾಗಿ ಇಂದಿನ ಪಠ್ಯಗಳಲ್ಲಿ ವಚನ ಸಾಹಿತ್ಯ ಹಾಸುಹೊಕ್ಕಾಗಬೇಕಿದೆ. ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣ, ಲಿಂಗ ಸಮಾನತೆ ಪ್ರತಿಪಾದನೆಯೊಂದಿಗೆ ಅಜ್ಞಾನ, ಭ್ರಷ್ಟಾಚಾರ, ಡಾಂಭಿಕತೆ, ಸಮಾಜದಲ್ಲಿ ಅನಿಷ್ಠ, ಮೂಢನಂಬಿಕೆಗಳ ವಿರುದ್ಧ ನಿಷ್ಠುರ ಭಾವ ವ್ಯಕ್ತವಾಗಿದೆ ಎಂದರು.

    ಲಕ್ಷ್ಮೀಶ್ವರದ ಸಾಹಿತಿ ಡಾ.ಸಂಗಮೇಶ ವೆಂಕನಗೌಡ ತಮ್ಮನಗೌಡ್ರ ಮಾತನಾಡಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಪ್ರಕಾಶ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ರಾಮಸಾಗರ ಟಿ.ನಿರಂಜನಸ್ವಾಮಿ, ಬಂಗಿ ದೊಡ್ಡ ಮಂಜುನಾಥ, ಎಸ್.ಡಿ.ಬಸವರಾಜ, ಅಂಬಿಗರ ಮಂಜುನಾಥ, ಎಚ್.ನಾಗರಾಜ, ಘನಮಠದಯ್ಯ ಹಿರೇಮಠ, ಎಲಿಗಾರ ವೆಂಕಟರೆಡ್ಡಿ, ಬಡಿಗೇರ ಜಿಲಾನ್‌ಸಾಬ್, ಸಂತೋಷ ಸೋಗಿ, ಅಶೋಕ ಕುಕನೂರು, ಬಂಗಿ ಸರೋಜ, ಬೂದಗುಂಪಿ ಹುಸೇನಸಾಬ್, ಕವಿತಾಳ ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts