More

    ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

    ದಾವಣಗೆರೆ: ರಾಜ್ಯದ ಕೆಲವು ಕೋ-ಆಪರೇಟಿವ್ ಬ್ಯಾಂಕ್​ಗಳಲ್ಲಿನ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬಂದು, ಖಾತೆದಾರರು ಸಂಕಷ್ಟದಲ್ಲಿರುವ ಬೆನ್ನಿಗೇ ಇಲ್ಲೊಂದು ಕಡೆ ಖಾತೆದಾರರು ಆತಂಕಕ್ಕೆ ಒಳಗಾಗಿ, ಪಿಗ್ಮಿ ಕಟ್ಟಲಾಗಿದ್ದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮುಗಿಬಿದ್ದ ಪ್ರಕರಣ ವರದಿಯಾಗಿದೆ.

    ದಾವಣಗೆರೆ ಜಿಲ್ಲೆ ಹರಿಹರದ ಮಸೀದಿ ಕಾಂಪ್ಲೆಕ್ಸ್​​ನಲ್ಲಿರುವ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ ಶಾಖೆಯಲ್ಲಿ ಖಾತೆದಾರರು ಮುಗಿಬಿದ್ದು, ಠೇವಣಿ, ಉಳಿತಾಯ ಹಾಗೂ ಪಿಗ್ಮಿ ಹಣವನ್ನು ಕೂಡ ಹಿಂದಿರುಗಿಸುವಂತೆ ಪಟ್ಟು ಹಿಡಿದರು. ಕಳೆದ ಎರಡು ವರ್ಷಗಳಿಂದ ಠೇವಣಿ, ಉಳಿತಾಯ, ಪಿಗ್ಮಿ ಹಣ ಹಿಂದಿರುಗಿಸಲು ಈ ಬ್ಯಾಂಕ್​ ಸಿಬ್ಬಂದಿ ಪೀಡಿಸುತ್ತಿದ್ದರು. ಬ್ಯಾಂಕ್ ನಷ್ಟದಲ್ಲಿರುವ ಕುರಿತು ಶಾಖಾ ವ್ಯವಸ್ಥಾಪಕ ಸಾದಿಕ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಬ್ಯಾಂಕ್ ಶಾಖಾ ಕಚೇರಿಯನ್ನು ಸ್ಥಳಾಂತರಿಸಲು ಸಿಬ್ಬಂದಿ ಸಿದ್ಧತೆ ನಡೆಸಿದ್ದು, ಬ್ಯಾಂಕ್​ ವ್ಯವಹಾರದ ಕುರಿತು ಖಾತೆದಾರರಲ್ಲಿ ಅನುಮಾನ ಹಾಗೂ ಆತಂಕ ಮೂಡಿದೆ.

    ಹೀಗಾಗಿ ಬ್ಯಾಂಕ್​ ಕಚೇರಿಯತ್ತ ಧಾವಿಸಿದ ಖಾತೆದಾರರು ಕೂಡಲೇ ಠೇವಣಿ ಪಾವತಿಸಲು ಪಟ್ಟು ಹಿಡಿದಿದ್ದಲ್ಲದೆ, ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸಲು ಒತ್ತಾಯಿಸಿದರು. ಆದರೆ ಬ್ಯಾಂಕ್ ಅಧ್ಯಕ್ಷ ಎಸ್​. ಖಾಲಿದ್ ಮೂರು ದಿನಗಳ ನಂತರ ಬರುವುದಾಗಿ ಫೋನ್​ ಮೂಲಕ ಖಾತೆದಾರರಿಗೆ ಮಾಹಿತಿ ರವಾನಿಸಿದ್ದಾರೆ. ಇದರಿಂದ ಖಾತೆದಾರರು ಮತ್ತಷ್ಟು ಸಿಟ್ಟುಹೊಂಡಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಪೆಟ್ರೋಲ್‌ ಬೆಲೆ ಏರಿತು ಅಂತ ಬೈಯೋದೇಕೆ? ಎಲ್ಲದಕ್ಕೂ ಸೊಲ್ಯೂಷನ್‌ ಇದೆ ಎಂದವ ಮಾಡಿದ ಈ ಪ್ಲ್ಯಾನ್‌ ಈಗ ಸಕತ್‌ ವೈರಲ್‌!

    ಸೆಕ್ಸ್ ವಿಡಿಯೋ ಬಹಿರಂಗ: ಜಾರಕಿಹೊಳಿ ಪರ ವಾಲ್ಮೀಕಿ ಪೀಠದ ಸ್ವಾಮೀಜಿ ಬ್ಯಾಟಿಂಗ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts