More

    ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ: ಮಂಡ್ಯದಲ್ಲಿ ಸಿಎಂ ಯೋಗಿ ಅಬ್ಬರದ ಪ್ರಚಾರ

    ಮಂಡ್ಯ: ಡಬಲ್​ ಇಂಜಿನ್​ ಸರ್ಕಾರ ಪಿಎಫ್​ಐ ಬ್ಯಾನ್​ ಮಾಡಿತ್ತು. ಆದರೆ, ಕಾಂಗ್ರೆಸ್​ ಅದನ್ನು ತೆರವು ಮಾಡುವ ಮಾತುಗಳನ್ನು ಆಡುತ್ತಿದೆ. ಧರ್ಮದ ಆಧಾರದ ಮೇಲೆ ರಕ್ಷಣೆ ಕೊಡುವುದು ಸಂವಿಧಾನಕ್ಕೆ ವಿರುದ್ಧ. ನಾವು ತುಷ್ಟೀಕರಣ ಮಾಡಲ್ಲ, ಸಶಕ್ತಿಕರಣ ನಂಬಿದ್ದೇವೆ. ಕಾಂಗ್ರೆಸ್​ನವರು ಪಿಎಫ್​ಐ ತುಷ್ಟೀಕರಣ ಮಾಡುತ್ತಿದ್ದಾರೆ. ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದರು.

    ಮಂಡ್ಯದಲ್ಲಿಂದು ರೋಡ್​ ಶೋ ನಡೆಸಿದ ಬಳಿಕ ಸಮಾವೇಶವನ್ನು ಉದ್ದೇಶಿಸಿ ಸಕ್ಕರೆ ನಾಡು ಮಂಡ್ಯ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಸಿಎಂ ಯೋಗಿ ಮಾತು ಆರಂಭಿಸಿದರು. ಇದೇ ಸಂದರ್ಭದಲ್ಲಿ ಬುಲ್ಡೋಜರ್ ಬಾಬಾ ಎಂದು ಕಾರ್ಯಕರ್ತರು ಘೋಷಣೆ ಕೂಗಿದಕ್ಕೆ ಯೋಗಿ ನಸುನಕ್ಕರು.

    ಹನುಮಂತನ ಜನ್ಮಭೂಮಿ

    ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಈಗಿನದ್ದಲ್ಲ, ಇಬ್ಬರ ಸಂಬಂಧ ತ್ರೇತಾಯುಗದ ಕಾಲದಿಂದಲೂ ಇದೆ. ಭಜರಂಗಿ ಹನುಮಂತನ ಜನ್ಮಭೂಮಿ ಇದೆ ಕರ್ನಾಟಕ. ಎಲ್ಲಿ ರಾಮ ಮಂದಿರ ಇರುತ್ತದೋ ಅಲ್ಲಿ ಹನುಮ ಮಂದಿರವೂ ಇರುತ್ತದೆ. ಮಂಜುನಾಥ್​ ಮತ್ತು ಕಾಲಭೈರವೇಶ್ವರ ಒಟ್ಟಿಗೆ ಇರುವ ನೆಲ ಇದು ಎಂದರು.

    ಕೈಜೋಡಿಸಿ

    ಈಗ ಜಗತ್ತಿನ ಎಲ್ಲೇ ಹೋದರು ಭಾರತೀಯರಿಗೆ ಗೌರವ ಇದೆ. ಈಗ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಜಿ-20 ರಾಷ್ಟ್ರಗಳ ನೇತೃತ್ವ ಈಗ ಭಾರತದ ಕೈಲಿ ಇದೆ. ಏಕ ಭಾರತ ಶ್ರೇಷ್ಠ ಭಾರತ ಪರಿಕಲ್ಪನೆಗೆ ಕೈಜೋಡಿಸಿ, ನಮ್ಮಲ್ಲಿ ಶಕ್ತಿ ಇದೆ ಮತ್ತು ಯುಕ್ತಿ ಇದೆ ಎಂದರು.

    ಉದ್ಘಾಟನೆಗೂ ಬರುತ್ತಾರೆ

    ಮೊದಲು ಪಂಚವಾರ್ಷಿಕ ಯೋಜನೆ ಮಾಡಲಾಗ್ತಿತ್ತು. ಅದು ಪೂರ್ಣ ಆಗುವ ಮೊದಲೇ ಮತ್ತೊಂದು ಶುರು ಆಗ್ತಿತ್ತು. ಯಾವ ಕಾಮಗಾರಿಯೂ ಪೂರ್ಣ ಆಗುತ್ತಿರಲಿಲ್ಲ. ಇದು ಕಾಂಗ್ರೆಸ್​ ನಿರ್ವಹಣೆಯ ಶೈಲಿ ಆಗಿತ್ತು. ಆದರೆ, ಈಗ ಮೋದಿಯೇ ಶಂಕುಸ್ಥಾಪನೆ ಮಾಡುತ್ತಾರೆ. ಅಲ್ಲದೆ, ಅವರೇ ಉದ್ಘಾಟನೆಗೂ ಬರುತ್ತಾರೆ ಎಂದು ಹೇಳಿದರು.

    ಸಂವಿಧಾನಕ್ಕೆ ವಿರುದ್ಧ

    ಡಬಲ್​ ಇಂಜಿನ್​ ಸರ್ಕಾರದಿಂದ ಶಕ್ತಿ, ಸಾಮರ್ಥ್ಯ ಹೆಚ್ಚು. ಉತ್ತರ ಪ್ರದೇಶದಲ್ಲಿ 6 ವರ್ಷದಿಂದ ಒಂದೇ ಒಂದು ಕರ್ಪ್ಯೂ ಜಾರಿ ಆಗಿಲ್ಲ. ಡಬಲ್​ ಇಂಜಿನ್​ ಸರ್ಕಾರ ಪಿಎಫ್​ಐ ಬ್ಯಾನ್​ ಮಾಡಿತ್ತು. ಆದರೆ, ಕಾಂಗ್ರೆಸ್​ ಅದನ್ನು ತೆರವು ಮಾಡುವ ಮಾತುಗಳನ್ನು ಆಡುತ್ತಿದೆ. ಧರ್ಮದ ಆಧಾರದ ಮೇಲೆ ರಕ್ಷಣೆ ಕೊಡುವುದು ಸಂವಿಧಾನಕ್ಕೆ ವಿರುದ್ಧ. ನಾವು ತುಷ್ಟೀಕರಣ ಮಾಡಲ್ಲ, ಸಶಕ್ತಿಕರಣ ನಂಬಿದ್ದೇವೆ. ಕಾಂಗ್ರೆಸ್​ನವರು ಪಿಎಫ್​ಐ ತುಷ್ಟೀಕರಣ ಮಾಡುತ್ತಿದ್ದಾರೆ. ಸುರಕ್ಷತೆಗೆ ಡಬಲ್​ ಇಂಜಿನ್​ ಸರ್ಕಾರವೇ ಗ್ಯಾರಂಟಿ ಎಂದರು. (ದಿಗ್ವಿಜಯ ನ್ಯೂಸ್​)

    ಮೋದಿ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳುವುದರಲ್ಲಿ ತಪ್ಪೇನು? ನಿರ್ಮಲಾ ಸೀತಾರಾಮನ್​ ಪ್ರಶ್ನೆ

    ಜೆಡಿಎಸ್ ಭದ್ರಕೋಟೆಯಲ್ಲಿ ಯೋಗಿ ಹವಾ; ರೋಡ್ ಶೋ ಮೂಲಕ ಭರ್ಜರಿ ಪ್ರಚಾರ

    ಚುನಾವಣಾ ಬಿಸಿಯ ನಡುವೆಯೂ ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts