More

    ಈ ಕೊಲ್ಕತ್ತಾ ಹುಡುಗ ಮಾಡಿದ ಡೂಡಲ್​ ಇಂದು ಗೂಗಲ್​ನಲ್ಲಿ ಹೈಲೈಟ್!

    ಬೆಂಗಳೂರು: ನೀವು ಗೂಗಲ್​ ತೆರೆದಾಗ ಅಲ್ಲೊಂದು ಡೂಡಲ್​ ಕಾಣಿಸುತ್ತಲ್ವಾ? ಅದು ದಿನವೂ ಇರೋದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇರುವುದು. ಇವತ್ತು (ನ.14) ಗೂಗಲ್​ ನ ಡೂಡಲ್​ ಕೊಲ್ಕತ್ತಾದ ಹುಡುಗ ಬಿಡಿಸಿದ್ದು ಇಡೀ ದಿನ ಕಾಣಿಸಲಿದೆ.

    ಇತ್ತೀಚೆಗೆ ಗೂಗಲ್​ ಸಂಸ್ಥೆ ಮಕ್ಕಳ ದಿನಾಚರಣೆ ಅಂಗವಾಗಿ ಭಾರತದಲ್ಲಿ ‘Doodle For Google’ ಎನ್ನುವ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯ ವಸ್ತು ‘ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ…’ ಎನ್ನುವುದಾಗಿತ್ತು. ಈ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ದೇಶದ ನೂರಕ್ಕೂ ಹೆಚ್ಚು ನಗರಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಅಷ್ಟು ಕಠಿಣ ಸ್ಪರ್ಧೆಯಲ್ಲಿ ಕೊಲ್ಕತ್ತಾದ ಶ್ಲೋಕ್​ ಮುಖರ್ಜಿ ಎನ್ನುವ ಹುಡುಗ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.

    ಶ್ಲೋಕ್​ ಮುಖರ್ಜಿ ತಮ್ಮ ಚಿತ್ರದಲ್ಲಿ ಯೋಗ, ಮಾನವ ಮತ್ತು ತಂತ್ರಜ್ಞಾನ ನಡುವಿನ ಸಂಬಂಧ, ಬಾಹ್ಯಾಕಾಶದಲ್ಲಿ ಸಾಧನೆ, ಪ್ರಕೃತಿ, ಆಯುರ್ವೇದ ಮುಂತಾದ ವಿಷಯಗಳನ್ನು ತನ್ನ ಡೂಡಲ್​ನಲ್ಲಿ ಸೇರಿಸಿದ್ದಾನೆ.

    ‘ಟಿಂಕಲ್​ ಕಾಮಿಕ್ಸ್​ನ ಸಂಪಾದಕರೂ ಸೇರಿದ್ದ ತೀರ್ಪುಗಾರರ ತಂಡ ಇಪ್ಪತ್ತು ಡೂಡಲ್​ಗಳನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಿತ್ತು. ಕಡೆಗೆ ಆನ್​ಲೈನ್​ ವೋಟಿಂಗ್​ ಮುಖಾಂತರ ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡಲಾಯಿತು’ ಎಂದು ಗೂಗಲ್​ ಸಂಸ್ಥೆ ಮಾಹಿತಿ ನೀಡಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts