More

    ದೊಡ್ಡ ಮಟ್ಟಕ್ಕೆ ಹರಡಬೇಡಿ: ಹಿಜಾಬ್​ ವಿವಾದ ಕುರಿತ ತುರ್ತು ವಿಚಾರಣೆ ತಿರಸ್ಕರಿಸಿದ ಸುಪ್ರೀಂಕೋರ್ಟ್​

    ನವದೆಹಲಿ: ರಾಜ್ಯದಲ್ಲಿ ಎಬ್ಬಿರುವ ಹಿಜಾಬ್​ ವಿವಾದ ಕುರಿತು ಹೈಕೋರ್ಟ್​ ವಿಸ್ತೃತ ಪೀಠ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ಅರ್ಜಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಉನ್ನತ ನ್ಯಾಯಾಲಯ ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸುತ್ತೇಬೆ ಎನ್ನುವ ಮೂಲಕ ತಕ್ಷಣ ವಿಚಾರಣೆಯನ್ನು ನಿರಾಕರಿಸಿದೆ.

    ಹೈಕೋರ್ಟ್​ ಏಕ ಸದಸ್ಯ ಪೀಠದಿಂದ ವಿಸ್ತೃತ ಪೀಠಕ್ಕೆ ಹಿಜಾಬ್​ ಪ್ರಕರಣ ವರ್ಗಾವಣೆ ಆಗಿದೆ. ಫೆ. 14ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ತಕ್ಷಣ ಶಾಲಾ-ಕಾಲೇಜು ತೆರೆಯುವಂತೆ ಮತ್ತು ಆದೇಶ ಬರುವವರೆಗೂ ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೈಕೋರ್ಟ್​ ವಿಸ್ತೃತ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

    ಇದೀಗ ಹೈಕೋರ್ಟ್​ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

    ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಈ ವಿಚಾರಗಳನ್ನು ರಾಷ್ಟ್ರೀಯ ಮಟ್ಟಕ್ಕೆ ಹರಡಬೇಡಿ. ಸೂಕ್ತ ಸಂದರ್ಭದಲ್ಲಿ ಮಾತ್ರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಎನ್​ ವಿ ರಮಣ ಅವರು ತಕ್ಷಣ ಅರ್ಜಿ ವಿಚಾರಣೆಯನ್ನು ನಿರಾಕರಿಸಿದೆ.

    ಈ ಪ್ರಕರಣವು “ದೂರಗಾಮಿ ಪರಿಣಾಮಗಳನ್ನು” ಹೊಂದಿದೆ ಮತ್ತು ವಿದ್ಯಾರ್ಥಿಗಳು ಕಳೆದ 10 ವರ್ಷಗಳಿಂದ ಹಿಜಾಬ್ ಅಥವಾ ಶಿರವಸ್ತ್ರವನ್ನು ಧರಿಸುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು ಮತ್ತು ಈ ಪ್ರಕರಣವನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯವನ್ನು ಒತ್ತಾಯಿಸಿದಾಗ, ಸುಪ್ರೀಂಕೋರ್ಟ್ ದೃಢವಾಗಿ ಒಪ್ಪಲಿಲ್ಲ.

    ದಯವಿಟ್ಟು ಇದನ್ನು ದೊಡ್ಡ ಮಟ್ಟಕ್ಕೆ ಹರಡಬೇಡಿ. ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಒಮ್ಮೆ ಯೋಚಿಸಿ, ಈ ವಿಚಾರಗಳನ್ನು ದೆಹಲಿಗೆ ತರುವುದು ಸರಿಯೇ? ಅದೂ ರಾಷ್ಟ್ರ ಮಟ್ಟದಲ್ಲಿ? ಏನಾದರೂ ತಪ್ಪಿದ್ದರೆ ನಾವು ರಕ್ಷಿಸುತ್ತೇವೆ ಎಂದು ನ್ಯಾಯಾಲಯ ತಿಳಿಸಿತು. (ಏಜೆನ್ಸೀಸ್​)

    ಜಿ‌ಟಿಡಿ ಹಣಿಯಲು ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್? ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎಂದ ದಳಪತಿ

    ಅಮೆರಿಕ ಹಾಗೂ ರಷ್ಯಾ ಪಡೆ ಗುಂಡಿನ ದಾಳಿ ಆರಂಭಿಸಿದಾಗ ಅದು ವಿಶ್ವಯುದ್ಧವಾಗುತ್ತದೆ: ಜೋ ಬೈಡೆನ್​

    ನಡು ರಸ್ತೆಯಲ್ಲೇ ಒದ್ದಾಡುತ್ತಿದ್ದ ತುಂಬು ಗರ್ಭಿಣಿಗೆ ಮನೆಯಲ್ಲೇ ಹರಿಗೆ ಮಾಡಿ ಮಾನವೀಯತೆ ಮೆರೆದ ಗ್ರಾಪಂ ಅಧ್ಯಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts