More

    ನಡು ರಸ್ತೆಯಲ್ಲೇ ಒದ್ದಾಡುತ್ತಿದ್ದ ತುಂಬು ಗರ್ಭಿಣಿಗೆ ಮನೆಯಲ್ಲೇ ಹರಿಗೆ ಮಾಡಿ ಮಾನವೀಯತೆ ಮೆರೆದ ಗ್ರಾಪಂ ಅಧ್ಯಕ್ಷೆ!

    ಬೀದರ್: ನಡು ರಸ್ತೆಯಲ್ಲೇ ಒದ್ದಾಡುತ್ತಿದ್ದ ತುಂಬು ಗರ್ಭಿಣಿಯನ್ನು ನೋಡಿ ಗ್ರಾಮ ಪಂಚಾಯತಿಯ ಅಧ್ಯಕ್ಷೆಯೊಬ್ಬರು ತನ್ನ ಮನೆಗೆ ಗರ್ಭಿಣಿಯನ್ನು ಕರೆದುಕೊಂಡು ಹೋಗಿ ಹೆರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.

    ಗರ್ಭಿಣಿ ಗ್ರಾಪಂ ಅಧ್ಯಕ್ಷೆಯ ಮನೆಯಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾಶ್ರಿ ಮೇತ್ರೆಗೆ ಸಹಾಯ ಮಾಡಿದ್ದಾರೆ.

    ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ಕಬ್ಬು ಕಟಾವಿಗೆ ಬಂದಿದ್ದರು. ತುಂಬು ಗರ್ಭಿಣಿಯಾಗಿದ್ದ ಮಹಿಳಗೆ ಹೊಟ್ಟೆ ನೋವು ಶುರುವಾಗಿದ್ದಾಗ ಸ್ಥಳೀಯರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾಶ್ರಿಗೆ ವಿಷಯ ತಿಳಿಸಿದರು. ಕೂಡಲೇ ಪಕ್ಕದಲ್ಲಿದ್ದ ತನ್ನ ಮನೆಯಲ್ಲೇ ಹೆರಿಗೆ ಮಾಡಿ ಆಕೆಯ ಆರೈಕೆ ಮಾಡಿದ್ದಾರೆ.

    ಇದಾದ ಬಳಿಕ ತಕ್ಷಣ 108 ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಬಸವಕಲ್ಯಾಣ ಆಸ್ಪತ್ರೆಗೆ ತಾಯಿ-ಮಗುವನ್ನು ದಾಖಲು ಮಾಡಿದ್ದಾರೆ, ಸದ್ಯ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ತಿಳಿದು ಬಂದಿದೆ.

    ಗೂಗಲ್​ ಮ್ಯಾಪ್​ ಬಳಸುವಾಗ ಎಚ್ಚರ! ಮದುವೆ ಹೊರಟ್ಟಿದ್ದ ಏಳು ಮಂದಿಯಲ್ಲಿ ಮೂವರು ದುರಂತ ಸಾವು

    ಹೈಕೋರ್ಟ್​ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ಹೊರಗಡೆ ಹೋಗಿ ಮನೆಗೆ ಬಂದಾಗ ಕಾದಿತ್ತು ಶಾಕ್​: ಮಗಳ ಸ್ಥಿತಿಯನ್ನು ಕಂಡು ಕುಸಿದುಬಿದ್ದ ಪಾಲಕರು

    ಹೊರ ಆವರಣದಲ್ಲಿ ಅರೆಬೆತ್ತಲೆ ಸ್ನಾನ: ವಿಡಿಯೋ ಶೇರ್​ ಮಾಡಿದ ನಟಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts