More

    ಮೂರು ತಿಂಗಳ ಶುಲ್ಕ ಒಂದೇ ಕಂತಿನಲ್ಲಿ ಪಡೆಯಬೇಡಿ, ಹೆಚ್ಚಳವನ್ನೂ ಮಾಡಬೇಡಿ, ಖಾಸಗಿ ಶಾಲೆಗಳಿಗೆ ಕೇಂದ್ರದಿಂದಲೇ ನಿರ್ದೇಶನ ಜಾರಿ

    ನವದೆಹಲಿ: ಕರೊನಾ ಸೋಂಕು 40 ಕೋಟಿಗೂ ಅಧಿಕ ಭಾರತೀಯರನ್ನು ಬಡತನಕ್ಕೆ ತಳ್ಳಲಿದೆ ಎಂಬುದು ವಿಶ್ವಸಂಸ್ಥೆಯ ಅಂದಾಜು. ಜನರು ಈಗಾಗಲೇ ಎರಡು ತಿಂಗಳ ಆದಾಯ ಕಳೆದುಕೊಂಡಿದ್ದಾರೆ. ವೇತನ ಕಡಿತವಾಗುತ್ತಿದೆ. ಹಲವು ವಲಯಗಳಲ್ಲಿ ಉದ್ಯೋಗ ಕಡಿತವನ್ನೂ ಮಾಡಲಾಗುತ್ತದೆ. ಒಟ್ಟಾರೆ ಆರ್ಥಿಕ ವ್ಯವಸ್ಥೆ ಕುಸಿದಿದೆ.

    ಪ್ರಸ್ತುತ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಆದರೆ, ಪ್ರವೇಶ ಶುಲ್ಕಕ್ಕಾಗಿ ಖಾಸಗಿ ಶಾಲೆಗಳು ಒತ್ತಾಯಿಸುತ್ತಿರುವ ದೂರುಗಳು ಬಂದಿವೆ. ಮಕ್ಕಳನ್ನು ಮುಂದಿನ ತರಗತಿಗೆ ದಾಖಲಿಸಲು ಕೂಡಲೇ ಪ್ರವೇಶ ಶುಲ್ಕ ಪಾವತಿಸುವಂತೆ ಆಡಳಿತ ಮಂಡಳಿಗಳು ಪಾಲಕರಿಗೆ ಸಂದೇಶ ಕಳುಹಿಸುತ್ತಿವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

    ಯಾವುದೇ ಕಾರಣಕ್ಕೂ ಶಾಲಾ ಶುಲ್ಕವನ್ನು ಹೆಚ್ಚಿಸುವಂತಿಲ್ಲ, ಕಳೆದ ಮೂರು ತಿಂಗಳು ಶುಲ್ಕವನ್ನು ಒಂದೇ ಬಾರಿ ಪಡೆಯಬೇಡಿ ಎಂದು ಖಾಸಗಿ ಶಾಲೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಹಿತವನ್ನು ಕಾಪಾಡಲು ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

    ದೆಹಲಿ ಸರ್ಕಾರದಿಂದ ನಿರ್ದೇಶನ: ಶಾಲೆಗಳು ಕೇವಲ ಟ್ಯೂಷನ್​ ಶುಲ್ಕವನ್ನು ತಿಂಗಳ ಲೆಕ್ಕದಲ್ಲಿ ಪಡೆಯಬೇಕು. ಬೇರಾವ ಶುಲ್ಕವನ್ನು ಪಡೆಯುವಂತಿಲ್ಲ. ಸರ್ಕಾರದ ಆದೇಶವಿಲ್ಲದೆ ಯಾವುದೇ ಹೆಚ್ಚಳ ಮಾಡುವಂತಿಲ್ಲ ಎಂದು ದೆಹಲಿ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶಿಸಿದೆ.
    ಕರ್ನಾಟಕದಲ್ಲಿ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಶುಲ್ಕ ಪಾವತಿಸಲು ಪಾಲಕರನ್ನು ಒತ್ತಾಯಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಪ್ರವೇಶ ಶುಲ್ಕದಲ್ಲಿ ವಿನಾಯ್ತಿ ನೀಡುವಂತೆಯೂ ಪಾಲಕರು ಬೇಡಿಕೆ ಸಲ್ಲಿಸಿದ್ದಾರೆ. ಇದಕ್ಕೆ ಸರ್ಕಾರ ಹಾಗೂ ಖಾಸಗಿ ಶಾಲೆಗಳು ಯಾವ ರೀತಿ ಸ್ಪಂದಿಸುತ್ತವೆ ಂಬುದನ್ನು ಕಾದು ನೀಡಬೇಕಿದೆ.

    ಪಂಜಾಬ್​ನ ‘ತಬ್ಲಿಘಿ ಜಮಾತ್​’ ಎಂದು ಕರೆದಿದ್ದು ಯಾವ ವಿಶ್ವವಿದ್ಯಾಲಯವನ್ನು? ಆ ವಿವಿ ಮಾಡಿದ್ದಾದರೂ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts