More

    ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ : ನ್ಯಾಯಾಧೀಶ ಮಹಾಂತೇಶ ಭೂಸಗೋಳ ಅಭಿಮತ

    ಸಿಂದಗಿ : ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೆ ಪರೀಕ್ಷೆ ಸಮಯದಲ್ಲಿ ಆಸಕ್ತಿಯಿಂದ ಅಭ್ಯಸಿಸಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.

    ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪಿಇಎಸ್ ಕಾಲೇಜು ಮತ್ತು ತಾಲೂಕು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಬಾರದು. ಒತ್ತಡ ಮುಕ್ತ ಜೀವನ ರೂಢಿಸಿಕೊಳ್ಳುವ ಮೂಲಕ ಮಾನಸಿಕ ಖಿನ್ನತೆ ದೂರ ಮಾಡಬೇಕು. ಮಾನಸಿಕ ರೋಗಕ್ಕೆ ಆಪ್ತ ಸಮಾಲೋಚನೆ ಬಹು ಉಪಕಾರಿ ಎಂದು ಹೇಳಿದರು.

    ಜಿಲ್ಲಾ ಮನೋರೋಗ ತಜ್ಞ ಮಂಜುನಾಥ ಮಸಳಿ ಮಾತನಾಡಿ, ಮಾನಸಿಕ ಕಾಯಿಲೆಗಳು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿರುತ್ತವೆ. ಖಿನ್ನತೆ, ಆತಂಕ, ಭಯ, ಆತ್ಮಹತ್ಯೆಯ ಆಲೋಚನೆ, ಜಿಗುಪ್ಸೆಯ ಲಕ್ಷಣಗಳು ಕಂಡು ಬಂದಾಗ ಮನೋರೋಗ ವೈದ್ಯರನ್ನು ಸಂಪರ್ಕಿಸಬೇಕು. ತಮ್ಮಲ್ಲಿರುವ ಖಿನ್ನತೆಗಳ ಕುರಿತು ಆಪ್ತರಲ್ಲಿ ಹಂಚಿಕೊಳ್ಳುವ ಮೂಲಕ ಒತ್ತಡದಿಂದ ಹೊರಬರಬೇಕು. ಪ್ರತಿ ತಿಂಗಳಿನ ಮೊದಲನೆಯ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಇಂತಹ ಮನೋರೋಗಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

    ಸಂಸ್ಥೆ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ವಕೀಲರ ಸಂಘದ ಅಧ್ಯಕ್ಷೃ ಎಸ್.ಬಿ. ದೊಡಮನಿ ಮಾತನಾಡಿದರು. ಆರೋಗ್ಯ ಇಲಾಖೆಯ ವೀರೇಂದ್ರ ಪವಾಡೆ, ಭಾಗ್ಯಶ್ರೀ, ಅಪರ ಸರ್ಕಾರಿ ವಕೀಲ ಎಂ.ಎಸ್. ಪಾಟೀಲ, ಸಹಾಯಕ ಸರ್ಕಾರಿ ವಕೀಲೆ ಎಫ್.ಜೆಡ್. ಖತೀಬ ಹಾಗೂ ಉಪನ್ಯಾಸಕರು ಇದ್ದರು.

    ಪ್ರಾಚಾರ್ಯ ರವಿ ಗೋಡಕರ ಸ್ವಾಗತಿಸಿದರು. ಉಪನ್ಯಾಸಕ ಗುರು ಕಡಣಿ ನಿರೂಪಿಸಿದರು. ತಾಲೂಕು ಆರೋಗ್ಯ ಶಿಕ್ಷೃಣಾಧಿಕಾರಿ ಎಸ್.ಡಿ. ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts