More

    ವದಂತಿಗಳಿಗೆ ಕಿವಿಗೊಡಬೇಡಿ.. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬದ್ಧ; ಸುಪ್ರೀಂಕೋರ್ಟ್ ಸಮಿತಿ ಭರವಸೆ

    ಬೆಂಗಳೂರು: ಬಿಡಿಎ ನಿರ್ಮಿಸಲಿರುವ ಡಾ. ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈಬಿಡುವ ಕುರಿತು ಯಾವುದೇ ಚಿಂತನೆಯಿಲ್ಲ. ಈ ಕುರಿತ ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷ ನ್ಯಾ.ಎ.ವಿ. ಚಂದ್ರಶೇಖರ್, ಸುಪ್ರೀಂಕೋರ್ಟ್ ಆದೇಶದಂತೆ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯವನ್ನು ಬಿಡಿಎ ಮುಂದುವರಿಸಲಿದೆ. ಬಡಾವಣೆ ನಿರ್ಮಾಣಕ್ಕೆ ನಿಗದಿ ಮಾಡಲಾಗಿರುವ 3,546.12 ಎಕರೆ ಜಮೀನಿನಲ್ಲಿ 2008ರಿಂದ 2018 ಆಗಸ್ಟ್​ 3ರ ಅವಧಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳ ದಾಖಲೆ ಸಂಗ್ರಹಿಸುವ ಕಾರ್ಯ ಚಾಲ್ತಿಯಲ್ಲಿದೆ. ಏ. 30ರವರೆಗೆ ದಾಖಲೆ ಸಂಗ್ರಹಿಸಲಾಗುವುದು ಎಂದು ಹೇಳಿದರು.

    ದಾಖಲೆ ಸಲ್ಲಿಸಲು ಅನುಕೂಲವಾಗಲೆಂದು ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ದೊಡ್ಡ ಬ್ಯಾಲಕೆರೆ ಹಾಗೂ ಸಿಂಗನಾಯಕನಹಳ್ಳಿಯಲ್ಲಿ ಬಿಡಿಎ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ ಕೇವಲ 350 ಮಂದಿ ಆನ್‌ಲೈನ್ ಹಾಗೂ 1,500 ಜನ ಸಹಾಯ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸೆಟಲೈಟ್ ಇಮೇಜಿಂಗ್‌ನಲ್ಲಿ ಅಧಿಸೂಚಿತ ಪ್ರದೇಶದಲ್ಲಿ 2018 ಆಗಸ್ಟ್ 3ಕ್ಕೆ ಮುಂಚೆ 7,500 ಕಟ್ಟಡ-ಮನೆಗಳಿರುವುದು ಪತ್ತೆಯಾಗಿದೆ. ಅದರಂತೆ ಇನ್ನೂ ಆರು ಸಾವಿರ ಕಟ್ಟಡ ನಿರ್ಮಿಸಿದವರು ಸೂಕ್ತ ದಾಖಲೆಗಳನ್ನು ಸಲ್ಲಿಸುವುದು ಬಾಕಿ ಇದೆ. ಏ.30ರವರೆಗೆ ಕಾಲಾವಕಾಶವಿದ್ದು ಕೂಡಲೇ ದಾಖಲೆ ಸಲ್ಲಿಸಬೇಕು ಎಂದರು.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಸಮಗ್ರ ಅಧ್ಯಯನ ವರದಿ: ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಕಳೆದುಕೊಳ್ಳುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಅಥವಾ ಬದಲಿ ನಿವೇಶನ ನೀಡುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಜತೆಗೆ ಬಿಡಿಎ ನಿರ್ಮಿಸಿರುವ ಬನಶಂಕರಿ, ಕೆಂಪೇಗೌಡ ಬಡಾವಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿರುವ ಬಗ್ಗೆ ಅಧ್ಯಯನ ನಡೆಸಲು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ. ಅದಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಸಹಕಾರದೊಂದಿಗೆ 17 ಗ್ರಾಮಗಳಲ್ಲಿನ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನಾಡ ಕಚೇರಿ ಸಿಬ್ಬಂದಿಗಳ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.

    ಕೋಡಿಹಳ್ಳಿ ಕುರಿತು ಸುಪ್ರೀಂಗೆ ಪತ್ರ: ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗೊಂದಲ ಉಂಟು ಮಾಡುವ ಹೇಳಿಕೆ ನೀಡಿದ್ದಾರೆ. ಲೇಔಟ್ ನಿರ್ಮಾಣ ಕಾರ್ಯ ಕೈಬಿಡಲಾಗಿದೆ ಎಂಬ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಗಮನಕ್ಕೆ ಬಂದಿದೆ. ಅದರಿಂದ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಗೆ, ಪ್ರಾಧಿಕಾರದಿಂದ ಅನುಮತಿ ಪಡೆದು ಕಟ್ಟಡ ಕಟ್ಟಿದವರು ದಾಖಲೆ ಮತ್ತು ಮಾಹಿತಿ ನೀಡಲು ಹಿಂದೇಟು ಹಾಕುವಂತಾಗಿದೆ. ಈ ಕುರಿತು ಉತ್ತರಿಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಮಿತಿ ನೋಟಿಸ್ ನೀಡಿತ್ತು. ಈವರೆಗೆ ಅವರು ಉತ್ತರ ನೀಡಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ಜಾರಕಿಹೊಳಿ ಹಾಸಿಗೆ ಮೇಲಿರುವ ವಿಡಿಯೋ ಬಿಡುಗಡೆ; ‘ಯಾವ ಮಂಚದ ಮೇಲೂ ಇಲ್ಲ..’ ಎಂದಿದ್ದಕ್ಕೆ ಉತ್ತರವೇ ಈ ವಿಡಿಯೋ?

    ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts