More

    ‘ಡೊನಾಲ್ಡ್​ ಟ್ರಂಪ್​, ಯು ಆರ್​ ಫೈರ್ಡ್​’, ವೈರಲ್​ ಆಯ್ತು ಜಿಲ್​ ಬಿಡೆನ್​ ಭಾಷಣ

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್​ ಟ್ರಂಪ್​ ಹಿನ್ನೆಡೆ ಸಾಧಿಸಿದ್ದಾರೆ. ಅವರು ಅಧ್ಯಕ್ಷೀಯ ಸ್ಥಾನದಿಂದ ಕೆಳಗಿಳಿದು, ಜೋ ಬಿಡೆನ್​ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ. ಈ ಸಮಯದಲ್ಲಿ ಜೋ ಬಿಡೆನ್​ ಅವರ ಪತ್ನಿ ಜಿಲ್​ ಬಿಡೆನ್​ ಅವರ ಭಾಷಣ ಸಕತ್​ ವೈರಲ್​ ಆಗಿದೆ.

    ಇದನ್ನೂ ಓದಿ: ಸರ್ಕಾರ ಎಂದರೆ ಅಕ್ಷಯ ಪಾತ್ರೆಯಲ್ಲ: ಡಾ.ಸುಧಾಕರ್

    ಚುನಾವಣೆಗೂ ಮುನ್ನ ಭರ್ಜರಿ ಪ್ರಚಾರಗಳನ್ನು ಮಾಡಿದ್ದ ಬಿಡೆನ್​ ದಂಪತಿ, ಸಭೆಯೊಂದರಲ್ಲಿ ಮಾಡಿದ್ದ ಭಾಷಣದ ತುಣುಕು ಈಗ ವೈರಲ್​ ಪಟ್ಟಿ ಸೇರಿದೆ. ‘ ಆರ್​ ಯು ರೆಡಿ ಟು ಟೆಲ್​ ಡೊನಾಲ್ಡ್​ ಟ್ರಂಪ್​, ಯು ಆರ್​ ಫೈರ್ಡ್​” ಎಂದು ವಿಡಿಯೋದಲ್ಲಿ ಜಿಲ್​ ಬಿಡೆನ್​ ಹೇಳಿದ್ದಾರೆ. ಟ್ರಂಪ್​ ನೀವು ಅಧ್ಯಕ್ಷ ಸ್ಥಾನದಿಂದ ವಜಾವಾಗಿದ್ದೀರಿ ಎಂದು ಹೇಳುವುದಕ್ಕೆ ನೀವೆಲ್ಲರೂ ಸಿದ್ಧರಿದ್ದೀರಾ ಎನ್ನುವುದು ಇದರರ್ಥ.

    ಇದನ್ನೂ ಓದಿ: ‘ಕಾಗೆ ಹಾರಿಸಿ ಹೋದ್ಲು ಮಾಮ’ … ದುಃಖದಲ್ಲಿ ಲವ್​ಗುರು!

    ಈ ವಿಡಿಯೋವನ್ನು ಜಿಲ್​ ಬಿಡೆನ್​ ಅವರು ನವೆಂಬರ್​ 3ರಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಲಕ್ಷಾಂತರ ಜನರಿಂದ ವೀಕ್ಷಣೆಗೊಂಡಿದೆ. ಸಾವಿರಾರು ಜನರು ಟ್ರಂಪ್​ ಫೈರಡ್​ ಎಂದು ವಿಡಿಯೋವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್​)

    ಐಪಿಎಲ್​ ಫೈನಲ್ಸ್​ ಮಿಸ್ಸಾದ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್​ ಮ್ಯಾಚ್​ನ ಫೈನಲ್ಸ್​ನ್ನೂ ಮಿಸ್​ ಮಾಡಿಕೊಳ್ಳಲಿದ್ದಾರೆ ಕೊಹ್ಲಿ

    ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ ಶಾಸಕ; ವಿರೋಧ ಪಕ್ಷದ ನಾಯಕ ಈಗ ಜೈಲುಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts