More

    ಲಾಕ್​ಡೌನ್​ ಬಳಿಕ ಮನೆಯಲ್ಲಿ ಇರುವ ಪುರುಷರು ಪತ್ನಿಯರಿಗೆ ಹಿಂಸೆ ನೀಡುತ್ತಿದ್ದಾರೆಯೇ? ಹೌದು ಅನ್ನುತ್ತಿದೆ ಮಹಿಳಾ ಆಯೋಗ

    ನವದೆಹಲಿ: ಕರೊನಾ ವೈರಸ್​ ಹರಡುವುದನ್ನು ತಡೆಯಲು ರಾಷ್ಟ್ರದಲ್ಲಿ ಲಾಕ್​ ಡೌನ್ ಘೋಷಿಸಿದ ನಂತರ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಅಧಿಕವಾಗಿವೆ.

    ಲಾಕ್​ಡೌನ್​ ವಿಧಿಸಿದಾಗಿನಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 250ಕ್ಕೂ ಅಧಿಕ ದೂರುಗಳು ಬಂದಿದ್ದು, ಅದರಲ್ಲಿ 69 ಕೌಟುಂಬಿಕ ಹಿಂಸಾಚಾರ ಪ್ರಕರಣಗಳಾಗಿವೆ ಎಂದು ಆಯೋಗ ತಿಳಿಸಿದೆ.

    ಲಾಕ್​ಡೌನ್​ ವಿಧಿಸಿದ ನಂತರ ಪುರುಷರು ಮನೆಯಲ್ಲಿ ಇರುವುದರಿಂದ ಮಹಿಳೆಯರ ಮೇಲೆ ದೌರ್ಜನ್ಯ ಅಧಿಕವಾಗಿದೆ. ಇದರಲ್ಲಿ ಕೆಲವು ಮಹಿಳೆಯರು ಮಾತ್ರ ಆಯೋಗಕ್ಕೆ ದೂರು ನೀಡಿದ್ದಾರೆ. ಕೆಲವರು ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

    ಕೌಟುಂಬಿಕ ದೌರ್ಜನ್ಯವನ್ನು ಬಹುತೇಕ ಮಹಿಳೆಯರು ಸಹಿಸಿಕೊಂಡು ಇದ್ದಾರೆ. ದೂರು ನೀಡಿದರೆ ಠಾಣೆಯಿಂದ ಹೊರ ಬಂದ ನಂತರ ಮತ್ತಷ್ಟು ದೌರ್ಜನ್ಯ ಅಧಿಕಗೊಳ್ಳುತ್ತದೆ ಎಂದು ಹೆದರಿ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದರು.

    ದೂರು ನೀಡಿದ ಮಹಿಳೆಯರಲ್ಲಿ ಕೆಲವರು ತವರು ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವರು ತವರು ತಲುಪಲು ಸಾಧ್ಯವಾಗುತ್ತಿಲ್ಲ. ಇಂತವರೊಂದಿಗೆ ಆಯೋಗ ನಿರಂತರ ಸಂಪರ್ಕದಲ್ಲಿ ಇದೆ. ಸದ್ಯ ಅವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    7, 8ನೇ ಕ್ಲಾಸ್​ಗೆ ಪರೀಕ್ಷೆ ಇರಲ್ಲ, ಏಪ್ರಿಲ್​ 14ರ ನಂತರ ಎಸ್​ಎಸ್ಎಲ್ಸಿ ವೇಳಾಪಟ್ಟಿ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts