More

    ಡಾಲರ್​, ದಿರಹಮ್​, ಪೌಂಡ್​ ಕರೆನ್ಸಿ ಹೆಸರಲ್ಲ…, ಡ್ರಗ್ಸ್​ಗಳಿದ್ದ ಕೋಡ್​ ನೇಮ್​…!

    ಮುಂಬೈ: ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್​ನಲ್ಲಿ ಡ್ರಗ್​ ಬಳಕೆ ಅವ್ಯಾಹತವಾಗಿದೆ ಎಂಬುದನ್ನು ಪೊಲೀಸರು ಒಪ್ಪಿಕೊಳ್ತಾರೆ. ಅಲ್ಲೊಂದು, ಇಲ್ಲೊಂದು ಪ್ರಕರಣ ಆಗಾಗ ವರದಿಯಾದರೂ ಇನ್ನುಳಿದಂತೆ ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

    ಸದ್ಯ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯಲ್ಲೀಗ ನಾರ್ಕೋಟಿಕ್ಸ್​ ಅಪರಾಧ ನಿಗ್ರಹ (ಎನ್​ಸಿಬಿ) ತಂಡ ಕೂಡ ಸೇರಿಕೊಂಡಿದೆ. ದಿನೇದಿನೆ ಒಂದೊಂದೇ ಅಚ್ಚರಿಯ ಹೊಸ ಸಂಗತಿಗಳು ಹೊರ ಬೀಳುತ್ತಲೇ ಇವೆ.

    ಇದನ್ನೂ ಓದಿ; ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…! 

    ಡ್ರಗ್​ ವಿವಿಧ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಈ ತಂಡ ಪತ್ತೆ ಹಚ್ಚಿದೆ. ವಿವಿಧ ಮಾದಕ ವಸ್ತುಗಳಿಗೆ ಡಾಲರ್​, ದಿರಹಂ, ಪೌಂಡ್​ ಎಂದು ಕರೆಯುತ್ತಿದುದನ್ನು ಬಯಲಿಗೆಳೆದಿದೆ. ಡಾಲರ್​ ಎಂದರೆ ಗಾಂಜಾ, ದಿರಹಂ ಎಂದರೆ ಸ್ಟ್ರಾಬೆರ್ರಿ ಫ್ಲೇವರ್​ನ ಗಾಂಜಾ, ಬ್ರಿಟಿಷ್​ ಪೌಂಡ್​ ಬ್ಲ್ಯೂಬೆರ್ರಿ ಫ್ಲೇವರ್​ನದ್ದು ಎಂದು ಹೇಳಲಾಗಿದೆ. ಇನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಗಾಂಜಾವನ್ನು ಇಂಡಿಯನ್​ ರೂಪಿ ಎಂದು ಹೇಳುತ್ತಿದ್ದರು.

    ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ವಶಕ್ಕೆ ಪಡೆದಿರುವ ಎನ್​ಸಿಬಿ, ಬಾಲಿವುಡ್​ನಲ್ಲಿ ಯಾರಿಗೆಲ್ಲ ಡ್ರಗ್​ ಪೂರೈಸುತ್ತಿದ್ದರು ಎಂಬುದರ ಮಾಹಿತಿ ಸಂಗ್ರಹಿಸಿದ್ದಾರೆ. ಬಾಲಿವುಡ್​ ಮಂದಿಗೆ ಡ್ರಗ್​ ಪೂರೈಸುತ್ತಿದ್ದ ಪೆಡ್ಲರ್​ಗಳೇ ಬೆಂಗಳೂರಿನಲ್ಲಿಯೂ ಜಾಲ ಹೊಂದಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೂ ಇದು ವ್ಯಾಪಿಸಿರುವುದು ಸದ್ಯ ಸಂಚಲನ ಮೂಡಿಸಿದೆ.

    ಇದನ್ನೂ ಓದಿ; ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?

    ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಡ್ರಗ್​ ಪೆಡ್ಲರ್​ಗಳೊಂದಿಗೆ ನಡೆಸಿದ ವಾಟ್ಸ್​ಆ್ಯಪ್​ ಚಾಟ್​ ಬಹಿರಂಗಗೊಂಡ ಬಳಿಕ ಹಾಗೂ ಸುಶಾಂತ್​ ಬಳಿ ಕೆಲಸಕ್ಕಿದ್ದ ಹಲವರು ನೀಡಿದ ಹೇಳಿಕೆ ಆಧರಿಸಿ ಎನ್​ಸಿಬಿ ಈ ಪ್ರಕರಣದ ತನಿಖೆಗೆ ಮುಂದಾಗಿದೆ.

    ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts