More

    ಶ್ವಾನಗಳ ಮೇಲೆ ಮಂಗಗಳ ಸೇಡು!; ಮಹಾರಾಷ್ಟ್ರದಲ್ಲಿ ಕೋತಿಮರಿಯ ಹತ್ಯೆಗೆ ನಾಯಿಮರಿಗಳ ಬೇಟೆ

    ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್​ನಲ್ಲಿ ಕೋತಿಗಳ ಹಿಂಡು ಈವರೆಗೆ ಸುಮಾರು 250 ನಾಯಿಮರಿಗಳನ್ನು ಸಾಯಿಸಿ, ಮರಿಯ ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತಿವೆ. ಕಳೆದ ತಿಂಗಳಿಂದ ಮಂಗಗಳು ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿವೆ. ಅವುಗಳನ್ನು ಕಟ್ಟಡದ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ ಬೀಳಿಸುತ್ತಿವೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಹಿಡಿದಿದ್ದಾರೆ. ಗ್ರಾಮದ ನಿವಾಸಿ ಸೀತಾರಾಂ ನೈಬಲ್ ಎಂಬುವರ ನಾಯಿಮರಿಯನ್ನು 15 ದಿನಗಳ ಹಿಂದೆ ಮಂಗವೊಂದು ಎಳೆದುಕೊಂಡು ಹೋಗುತ್ತಿತ್ತು. ನಾಯಿಮರಿ ಕಿರುಚಲು ಆರಂಭಿಸಿದಾಗ ನೈಬಲ್ ಅದನ್ನು ಉಳಿಸಿದ್ದು, ಆ ಸಮಯದಲ್ಲಿ ತಮ್ಮ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ, ಹಳ್ಳಿಯ ಕೆಲವು ನಾಯಿಗಳು ಒಂದು ಕೋತಿಮರಿಯನ್ನು ಸಾಯಿಸಿದ್ದವು. ಅದೇ ಕಾರಣದಿಂದ ಕೋತಿಗಳು ನಾಯಿಮರಿಗಳ ಪ್ರಾಣ ತೆಗೆಯುತ್ತಿವೆ. ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲದಂತಾಗಿದ್ದು, ಕೋತಿಗಳು ಮಕ್ಕಳ ಮೇಲೆರಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಸಾವಿರಕ್ಕೂ ಹೆಚ್ಚು ಕಾಲುಗಳ ಹುಳ!

    ಶ್ವಾನಗಳ ಮೇಲೆ ಮಂಗಗಳ ಸೇಡು!; ಮಹಾರಾಷ್ಟ್ರದಲ್ಲಿ ಕೋತಿಮರಿಯ ಹತ್ಯೆಗೆ ನಾಯಿಮರಿಗಳ ಬೇಟೆಆಸ್ಟ್ರೇಲಿಯಾದ ವಿಜ್ಞಾನಿಗಳು ನೆಲದಿಂದ 200 ಅಡಿ ಕೆಳಗೆ ವಾಸಿಸುವ, 1,306 ಕಾಲುಗಳನ್ನು ಹೊಂದಿರುವ ಹೊಸ ಜಾತಿಯ ಮಿಲ್ಲಿಪೀಡ್ (ಲ್ಯಾಟಿನ್ ಭಾಷೆಯಲ್ಲಿ ಸಾವಿರ ಕಾಲುಗಳುಳ್ಳ ಜೀವಿ) ಅನ್ನು ಪತ್ತೆ ಹಚ್ಚಿದ್ದಾರೆ. ಕಣ್ಣುಗಳಿಲ್ಲದ ಈ ಜೀವಿಗೆ ಗ್ರೀಕ್ ದೇವತೆ ಮತ್ತು ಭೂಗತ ಜಗತ್ತಿನ ರಾಣಿಯಾದ ’ಪರ್ಸೆಫೋನ್’ ಹೆಸರನ್ನು ಆಧರಿಸಿ, ‘ಯುಮಿಲ್ಲಿಪೆಸ್ ಪರ್ಸೆಫೋನ್’ ಎಂದು ಹೆಸರಿಟ್ಟಿದ್ದಾರೆ. ಈ ಹೊಸದಾಗಿ ಕಾಣಿಸಿಕೊಂಡಿರುವ ಈ ಅಕಶೇರುಕವು ಭೂಮಿಯ ಮೇಲೆ ವಾಸಿಸುವ ಅಥವಾ ವಾಸಿಸುತ್ತಿದ್ದ ಯಾವುದೇ ಜೀವಿಗಿಂತ ಹೆಚ್ಚಿನ ಕಾಲುಗಳನ್ನು ಹೊಂದಿದೆ. ಈ ಹೊಸ ಪ್ರಭೇದದ ಈ ಹೆಣ್ಣುಜೀವಿಯು ನಾಲ್ಕೇ ಇಂಚು ಉದ್ದ ಇದ್ದರೂ, 1,306 ಕಾಲುಗಳನ್ನು ಹೊಂದಿದೆ. ಈ ಮೂಲಕ 750 ಕಾಲುಗಳೊಂದಿಗೆ ದಾಖಲೆಗೈದಿದ್ದ ಕ್ಯಾಲಿಫೋರ್ನಿಯಾದ ಮಿಲ್ಲಿಪೀಡ್ ‘ಇಲ್ಲಾಕ್ಮೆ ಪ್ಲೆನಿಪೆಸ್’ ಅನ್ನು ಹಿಂದಿಕ್ಕಿದೆ.

    ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts