More

    ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!

    ನವದೆಹಲಿ: ನಾಯಿಗಳು ಮನುಷ್ಯನ ಅತ್ಯಂತ ಪ್ರೀತಿಪಾತ್ರವಾದ ಸಾಕುಪ್ರಾಣಿ. ತನ್ನೊಡೆಯನಿಗೆ ಅವು ಸದಾ ನಿಯತ್ತಾಗಿರುತ್ತವೆ. ಕೆಲವೊಮ್ಮೆ ತಮ್ಮ ಮಾಲೀಕರು ಸತ್ತಿದ್ದಾರೆ ಎಂದು ಗೊತ್ತಿದ್ದರೂ ಅವರಿಗಾಗಿ ಕಾಯುತ್ತಾ ಕುಳಿತ ಸಾಕಷ್ಟು ನಿದರ್ಶನಗಳು ನಮ್ಮೆದುರು ಇವೆ. ಆದರೆ ಈ ಪ್ರಕರಣ ಅವೆಲ್ಲವುಗಳಿಗಿಂತ ಕೊಂಚ ಭಿನ್ನ.

    12 ವರ್ಷಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರದ ರಸ್ತೆಯಲ್ಲಿ ಮೈಯೆಲ್ಲ ಕಜ್ಜಿ ಆಗಿ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಮರಿಯನ್ನು ಕಂಡು ಕನಿಕರ ಪಟ್ಟ ಮಲಿಕ್​ಪುರಂನ ನಿವಾಸಿ ಡಾ. ಅನಿತಾ ರಾಜ್​ ಸಿಂಗ್​ ಅದನ್ನು ಮನೆಗೆ ತಂದಿದ್ದರು. ಬಳಿಕ ಅದಕ್ಕೆ ಔಷಧೋಪಚಾರ ಮಾಡಿ ಕಜ್ಜಿಯನ್ನು ಗುಣಪಡಿಸಿದ್ದರು. ಅದಕ್ಕೆ ಜಯಾ ಎಂದು ಹೆಸರಿಟ್ಟು ಚೆನ್ನಾಗಿ ಸಾಕಿಸಲಹಿದ್ದರು.

    ಕೆಲದಿನಗಳಿಂದ ಡಾ. ಅನಿತಾ ರಾಜ್​ ಸಿಂಗ್​ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. ಆರೋಗ್ಯ ವಿಷಮಿಸಿದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಅವರು ಮೃತಪಟ್ಟಿದ್ದರು.

    ಇದನ್ನೂ ಓದಿ: ಅಧಿಕೃತ ವಾಹನದಲ್ಲೇ ಸೆಕ್ಸ್ ಮಾಡಿದ ಉದ್ಯೋಗಿಗಳಿಬ್ಬರಿಗೆ ವಿಶ್ವಸಂಸ್ಥೆ ಶಾಕ್!

    ಇವರ ಮೃತದೇಹವನ್ನು ಬುಧವಾರ ಆಸ್ಪತ್ರೆಯಿಂದ ಮನೆಗೆ ತರಲಾಗಿತ್ತು. ಇದನ್ನು ಕಂಡು ಜಯಾ ದುಃಖದಿಂದ ಬೊಗಳತೊಡಗಿತು. ಅದನ್ನು ಸಮಾಧಾನಿಸಲು ಎಷ್ಟೇ ಪ್ರಯತ್ನಿಸಿದರೂ ಅದೆಲ್ಲವೂ ವಿಫಲವಾಯಿತು ಎಂದು ಮೃತ ಡಾ. ಅನಿತಾ ರಾಜ್​ ಸಿಂಗ್​ ಅವರ ಪುತ್ರ ತೇಜಸ್​ ತಿಳಿಸಿದ್ದಾರೆ.

    ತಮ್ಮ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ ದಿನದಿಂದಲೂ ಜಯಾ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಅವರ ಶರೀರವನ್ನು ಮನೆಗೆ ತಂದ ನಂತರದಲ್ಲಂತೂ ಅದರ ತೊಳಲಾಟ ಮೇರೆಮೀರಿತು. ಇದೇ ದುಃಖದಲ್ಲಿ ಅದು ಮನೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿತು ಎಂದು ಹೇಳಿದ್ದಾರೆ.

    ತಮ್ಮ ಮಾಲೀಕರು ಸತ್ತರೆಂದು ನಾಯಿಗಳು ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದೇನಲ್ಲ. ಸ್ಕಾಟ್ಲೆಂಡ್​ ನಿವಾಸಿಯಾಗಿದ್ದ ಸ್ಟುವರ್ಟ್​ ಹಚಿನ್ಸನ್​ ಎಂಬ ಬಾಲಕ ಮಿದುಳಿನ ಕ್ಯಾನ್ಸರ್​ಗೆ ಬಲಿಯಾದ 15 ನಿಮಿಷಗಳಲ್ಲಿ ಆತನ ಸಾಕುನಾಯಿ ಫ್ರೆಂಚ್​ ಬುಲ್​ಡಾಗ್ ಕೂಡ ಆತ್ಮಹತ್ಯೆ ಮಾಡಿಕೊಂಡಿತ್ತು.

    ಈ ಬಾತ್‌ರೂಮ್‌ ನೋಡಿ ಏನೇನೋ ಆಗ್ತಿದೆಯಂತೆ, ನಿಮಗೇನು ಅನಿಸತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts