More

    ನಾಯಿ ಕಡಿತ: ಹಲ್ಲಿನ ಪ್ರತಿ ಮಾರ್ಕ್​ಗೆ 10ಸಾವಿರ ರೂ. ಪರಿಹಾರ – ಹರಿಯಾಣ-ಪಂಜಾಬ್ ಹೈಕೋರ್ಟ್ ತೀರ್ಪು

    ಚಂಡೀಗಢ: ನಾಯಿ ಕಚ್ಚಿದ ಪ್ರಕರಣಗಳ ಕುರಿತು ಹರಿಯಾಣ-ಪಂಜಾಬ್ ಹೈಕೋರ್ಟ್ ಸಂವೇದನಾಶೀಲ ತೀರ್ಪು ನೀಡಿದೆ. ನಾಯಿ ಕಡಿತಕ್ಕೆ ರಾಜ್ಯ ಸರ್ಕಾರಗಳು ಪ್ರಾಥಮಿಕವಾಗಿ ಹೊಣೆಯಾಗಬೇಕು ಎಂದು ಪೀಠ ಹೇಳಿದೆ. ನಾಯಿ ಕಚ್ಚಿದ ಪ್ರತಿ ಗುರುತಿಗೆ 10 ಸಾವಿರ ರೂ.ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದೆ.

    ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆ: ಹಬ್ಬದಲ್ಲಿ ಪಾಲ್ಗೊಂಡ ಹೋರಿಯೇ ಪರಾರಿ; ಆಮೇಲೇನಾಯ್ತು!
    ನಾಯಿ ಕಚ್ಚಿದ ಘಟನೆಗಳಲ್ಲಿ 0.2 ಸೆಂ.ಮೀ ಕಡಿತವಾದರೆ ಸಂತ್ರಸ್ತರಿಗೆ 20,000 ರೂ.ಪಾವತಿಸಲು ಆದೇಶಿಸಿದೆ. ನಾಯಿ ಕಚ್ಚಿದ ಪ್ರಕರಣದಲ್ಲಿ ದಾಖಲಾಗಿರುವ 193 ಪ್ರಕರಣಗಳ ತನಿಖೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದೆ.

    ಬೀದಿ ನಾಯಿಗಳ ಹಾವಳಿ ಕುರಿತು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ. ವಾಘ್ ಬಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ 49 ವರ್ಷದ ಪರಾಗ್ ದೇಸಾಯಿ ಅಕ್ಟೋಬರ್‌ನಲ್ಲಿ ನಾಯಿಗಳಿಂದ ಅಟ್ಟಿಸಿಕೊಂಡು ಸಾವನ್ನಪ್ಪಿದ್ದರು. ಈ ದಾರುಣ ಘಟನೆಯ ನಂತರ ಬೀದಿನಾಯಿಗಳ ಸಮಸ್ಯೆ ಬಗೆಹರಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿತ್ತು.

    ಪಂಜಾಬ್, ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ವರದಿಯಾಗಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳ ಕುರಿತು ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಕೇಳಿದೆ. ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ನೀಡಬೇಕಾದ ಪರಿಹಾರವನ್ನು ನಿರ್ಧರಿಸಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ.. ನಾಯಿಗಳ ಜೊತೆಗೆ ಹಸು, ಗೂಳಿ, ಕತ್ತೆ, ಎಮ್ಮೆ, ಕಾಡು ಮತ್ತು ಸಾಕುಪ್ರಾಣಿಗಳೂ ಈ ಪಟ್ಟಿಯಲ್ಲಿ ಸೇರಿವೆ.

    ಮೃಣಾಲ್ ಠಾಕೂರ್ ಜತೆ ಖ್ಯಾತ ಗಾಯಕ ಡೇಟಿಂಗ್?; ವದಂತಿಗೆ ಸಿಂಗರ್​ ಕೊಟ್ಟ ಪ್ರತಿಕ್ರಿಯೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts