More

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಬೆಂಗಳೂರು: ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ. ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬಬೇಡಿ, ಇದು ಇಂಧನ ಟ್ಯಾಂಕ್​ನಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಮಾತ್ರ ಇಂಧನ ತುಂಬಿಸಿ, ಇನ್ನರ್ಧ ಟ್ಯಾಂಕ್​ ಗಾಳಿಗಾಗಿ ಇಡಿ. ಈ ವಾರ ಗರಿಷ್ಠ ಪೆಟ್ರೋಲ್​ ತುಂಬಿದ ಅಂದರೆ ಫುಲ್​ ಟ್ಯಾಂಕ್ ಪೆಟ್ರೋಲ್ ಹಾಕಿಸಿದ ಕಾರಣಕ್ಕೆ ಐದು ವಾಹನಗಳು ಬ್ಲಾಸ್ಟ್​ ಆಗಿವೆ. ದಯವಿಟ್ಟು ದಿನಕ್ಕೊಮ್ಮೆ ಪೆಟ್ರೋಲ್ ಟ್ಯಾಂಕ್ ತೆರೆದು, ಒಳಗಿರುವ ಅನಿಲ ಹೊರಬರುವಂತೆ ಮಾಡಿ. ಗಮನಿಸಿ: ಈ ಸಂದೇಶವನ್ನು ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ಕಳಿಸಿ, ಇದರಿಂದ ಅಂಥ ಅಪಘಾತವನ್ನು ತಪ್ಪಿಸಬಹುದು.

    – ಹೀಗೊಂದು ಸಂದೇಶ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಆ್ಯಪ್​ಗಳಲ್ಲಿ ರವಾನೆಯಾಗುತ್ತಿದ್ದು, ಇದು ಜನರಲ್ಲಿ ಆತಂಕ ಮೂಡಿಸುವಂತಿದೆ. ಈ ಸಲ ಮಾತ್ರವಲ್ಲ, ಹಿಂದೆಯೂ ಬೇಸಿಗೆ ಸಮಯದಲ್ಲಿ ಇಂಥದ್ದೊಂದು ಸಂದೇಶ ಹರಿದಾಡಿದ್ದಿದೆ.
    ಅದರಲ್ಲೂ ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಹೆಸರಿನಲ್ಲೇ ಇಂಥದ್ದೊಂದು ಸುದ್ದಿ ಹರಿದಾಡುತ್ತಿದ್ದು, ಹಲವರು ಇದನ್ನು ಸತ್ಯವೆಂದೇ ನಂಬುವಂತಿದೆ.

    ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

    ಅಸಲಿಗೆ ಇದೊಂದು ಸುಳ್ಳು ಸುದ್ದಿ. ಈ ಬಗ್ಗೆ ಹಿಂದೆಯೂ ಅಂದರೆ 2019ರಲ್ಲೇ ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ತನ್ನ ಅಧಿಕೃತ ಟ್ಟಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿತ್ತು. ಈ ಸಲ ತನ್ನ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದರೆ ವಾಹನ ಬ್ಲಾಸ್ಟ್ ಆಗುತ್ತದೆ ಎಂಬುದು ಸತ್ಯವಲ್ಲ ಎಂದು ತಿಳಿಸಿದೆ. ಮಾತ್ರವಲ್ಲ, ಬೇಸಿಗೆ-ಚಳಿ ಯಾವುದೇ ಕಾಲವಿರಲಿ, ಪೆಟ್ರೋಲ್​ ಟ್ಯಾಂಕ್​ ತುಂಬಾ ತುಂಬಿಸುವುದಕ್ಕೆ ಏನೂ ಅಪಾಯವಿಲ್ಲ ಎಂದು ಅದು ಹೇಳಿದೆ. ಅಲ್ಲದೆ ಈ ಕುರಿತು ನಡೆದ ಫ್ಯಾಕ್ಟ್​ಚೆಕ್​ನಲ್ಲಿ ಕೂಡ ಇತ್ತೀಚೆಗೆ ಅಂಥ ಐದು ಬ್ಲಾಸ್ಟ್ ಪ್ರಕರಣಗಳು ನಡೆದಿರುವುದು ಕಂಡುಬಂದಿಲ್ಲ.

    ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts