More

    ಕರೊನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಕಾಡಲಿದೆ!: ಇದೆಷ್ಟು ಸತ್ಯ?

    ನವದೆಹಲಿ: ಕರೊನಾ ಮೊದಲ ಅಲೆಯಲ್ಲಿ ವಯಸ್ಸಾದವರಿಗೆ ಹೆಚ್ಚು ಸಮಸ್ಯೆ ಆಯಿತು. ಕರೊನಾ ಎರಡನೇ ಅಲೆಯಲ್ಲಿ ಯುವಕರಿಗೂ ಹೆಚ್ಚು ಸಮಸ್ಯೆ ಕಾಡಿತು, ಸೋಂಕಿಗೆ ಒಳಗಾಗಿ ಸತ್ತವರಲ್ಲಿ ಯುವಜನತೆ ಕೂಡ ದೊಡ್ಡ ಪ್ರಮಾಣದಲ್ಲಿದ್ದರು. ಮುಂದೆ ಕರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚ ಬಾಧಿಸಲಿದೆ ಎಂಬ ಮಾತು ಈಗಾಗಲೇ ಕೇಳಿಬಂದಿದೆ.

    ಕರೊನಾ ವೈರಸ್​ ರೂಪಾಂತರಗೊಂಡು ಹೊಸ ಅಲೆಗಳನ್ನೇ ಸೃಷ್ಟಿಸುತ್ತಿದ್ದು, ಸೋಂಕಿನ ತೀವ್ರತೆ ಕೂಡ ಹೆಚ್ಚುತ್ತಲಿದೆ. ಹೀಗಿರುವ ಮುಂದೆ ಬರಲಿದೆ ಎನ್ನಲಾದ ಕರೊನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಕಾಡಲಿದೆ ಎಂಬ ಮಾತುಗಳು ಹಲವರನ್ನು ಆತಂಕಕ್ಕೆ ಒಳಗಾಗಿಸಿದೆ.

    ಇದನ್ನೂ ಓದಿ: ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!

    ಈ ನಡುವೆ ಇದರ ಬಗ್ಗೆ ಸ್ಪಷ್ಟನೆಯೊಂದು ಹೊರಹೊಮ್ಮಿದೆ. ‘ಕರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ಅದು ಮಕ್ಕಳನ್ನು ಬಾಧಿಸುವ ಸಾಧ್ಯತೆ ಕಡಿಮೆ, ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮಕ್ಕಳವೈದ್ಯರ ಸಂಘ ಹೇಳಿದೆ’ ಎಂದು ಎಐಐಎಂಎಸ್​ ದೆಹಲಿ ನಿರ್ದೇಶಕ ಡಾ.ರಣದೀಪ್​ ಗುಲೇರಿಯಾ ಸ್ಪಷ್ಟನೆ ನೀಡಿದ್ದಾರೆ.
    ಅಂದಹಾಗೆ ಮಕ್ಕಳನ್ನು ಸೋಂಕು ಲಘುವಾಗಿ ಸೋಂಕಬಹುದು ಆದರೆ ಅವರಲ್ಲಿ ಮರಣಪ್ರಮಾಣ ತುಂಬಾ ಕಡಿಮೆ ಎಂಬುದಾಗಿ ನೀತಿ ಆಯೋಗ (ಆರೋಗ್ಯ) ನಿರ್ದೇಶಕ ಡಾ.ವಿ.ಕೆ. ಪೌಲ್ ಈಗಾಗಲೇ ಹೇಳಿದ್ದಾರೆ. ಭಾರತದಲ್ಲಿ ಒಟ್ಟು ಜನಸಂಖ್ಯೆಯ ಪೈಕಿ ಶೇ. 26 ಮಂದಿ 14 ವರ್ಷಕ್ಕಿಂತ ಕಡಿಮೆಯವರು ಇದ್ದು, ಅದರಲ್ಲೂ ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನವರೇ ಶೇ. 7ರಷ್ಟಿದ್ದಾರೆ.

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts