More

    ಕಾಫಿ ಸೇವನೆಯು ಕಿಡ್ನಿ ಸ್ಟೋನ್​ ಅಪಾಯವನ್ನು ಹೆಚ್ಚಿಸುತ್ತದೆಯೇ? ಇಲ್ಲಿದೆ ಅಚ್ಚರಿ ಉತ್ತರ…

    ಮೂತ್ರಪಿಂಡ ಅಥವಾ ಕಿಡ್ನಿಯು ದೇಹದ ಪ್ರಮುಖ ಅಂಗಗಳಾಗಿವೆ. ರಕ್ತದಿಂದ ಕಲ್ಮಶವನ್ನು ತೆಗೆದುಹಾಕಲು ಮತ್ತು ದೇಹದಲ್ಲಿನ ದ್ರವದ ಮಟ್ಟವನ್ನು ನಿಯಂತ್ರಿಸುವ ಪ್ರಮುಖ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ. ಹೀಗಾಗಿ ಕಿಡ್ನಿಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಾದ್ದು ತುಂಬಾ ಅವಶ್ಯಕವಾಗಿದೆ.

    ದೇಹದಲ್ಲಿನ ರಕ್ತವು ಕೆಲ ತ್ಯಾಜ್ಯಗಳನ್ನು ಹೊಂದಿದ್ದರೆ ಮತ್ತು ದೇಹದಲ್ಲಿ ಸಾಕಷ್ಟು ದ್ರವವನ್ನು ಹೊಂದಿಲ್ಲದಿದ್ದರೆ, ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಇನ್ನೂ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮತ್ತು ಹೊರತೆಗೆಯಲು ಹಲವು ವಿಭಿನ್ನ ಚಿಕಿತ್ಸೆಗಳಿವೆ. ಕಾಫಿ ಕುಡಿಯುವುದು ಮತ್ತು ಕಿಡ್ನಿ ಸ್ಟೋನ್​ ರಚನೆಯ ನಡುವಿನ ಸಂಬಂಧದ ಕುರಿತು ಸಂಶೋಧನೆಯನ್ನು ಸಹ ನಡೆಸಲಾಗುತ್ತಿದೆ. ಇತ್ತೀಚಿನ ಅಧ್ಯಯನವು ಕಾಫಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಬಹುದು ಎಂದು ಸೂಚಿಸುತ್ತದೆ.

    ಕಾಫಿ ಕುಡಿಯುವುದರಿಂದ ನಿರ್ಜಲೀಕರಣ (ಡಿಹೈಡ್ರೇಷನ್​) ಉಂಟಾಗುತ್ತದೆ ಎಂಬ ನಂಬಿಕೆ ಇದೆ. ನಿರ್ಜಲೀಕರಣವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಕಿಡ್ನಿ ಸ್ಟೋನ್​ ಮೇಲೆ ನಡೆದ ಇತ್ತೀಚಿನ ಅಧ್ಯಯನಗಳ ಪ್ರಕಾರ ಕೆಫಿನ್​ ಸೇವನೆಯು ಕಿಡ್ನಿ ಸ್ಟೋನ್​ ರೂಪಿಸುವುದನ್ನು ತಡೆಯುತ್ತದೆ ಎಂದು ಸೂಚಿಸುತ್ತದೆ.

    ಚಹಾ, ಸೋಡಾ, ಕಾಫಿ ಅಥವಾ ಆಲ್ಕೋಹಾಲ್‌ನಲ್ಲಿ ಕಂಡುಬರುವ ಕೆಫಿನ್ ಅಂಶವು ರಕ್ಷಣಾತ್ಮಕ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ರಾಷ್ಟ್ರೀಯ ಕಿಡ್ನಿ ಫೌಂಡೇಶನ್ ವರದಿ ಮಾಡಿದೆ. ಕೆಫಿನ್ ಸೇವನೆಯಲ್ಲಿ ಸ್ವಲ್ಪ ಹೆಚ್ಚಳವಾದರೂ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಬಹುದು. ಅಲ್ಲದೆ, ನಿಯಮಿತವಾಗಿ ಕಾಫಿ ಸೇವನೆಯು ಟೈಪ್ 2 ಮಧುಮೇಹ ಮತ್ತು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

    ಅಂದಹಾಗೆ ವ್ಯಕ್ತಿಯ ಆಹಾರ ಶೈಲಿಯ ಮೇಲೆ ಮೂತ್ರಪಿಂಡದ ಕಲ್ಲುಗಳನ್ನು ರಚನೆ ನಿರ್ಧಾರವಾಗಿರುತ್ತದೆ. ನೀವು ಏನು ತಿನ್ನುತ್ತೀರಿ? ನೀವು ಎಷ್ಟು ನೀರು ಕುಡಿಯುತ್ತೀರಿ? ಎಂಬುದು ಕಿಡ್ನಿ ಸ್ಟೋನ್​ ರಚನೆಗೆ ಮೂಲವಾಗಿರುತ್ತದೆ. ನೀರಿನ ಅಂಶವು ಕಡಿಮೆಯಾದರೆ ತುಂಬಾ ಡೇಂಜರ್​. ಹೀಗಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. (ಏಜೆನ್ಸೀಸ್​)

    ಊಟದ ನಂತರ ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ… ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts