More

    ದೊಡ್ಡನಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರ ಬಣ್ಣ ಬಣ್ಣದ ಹೂಗಳ ತೋಟ

    ಉಡುಪಿ: ಹೂವು ಚೆಲುವೆಲ್ಲಾ ನಂದಿಂದೆತು… ದೊಡ್ಡನಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರಕ್ಕೆ ಭೇಟಿ ನೀಡಿದರೆ ಈ ಗೀತೆಯ ಸಾಲುಗಳು ನೆನಪಾಗುತ್ತದೆ. ಅಷ್ಟರ ಮಟ್ಟಿಗೆ ಹೂವಿನ ಸೌಂದರ್ಯ ರಾಶಿ ಇಲ್ಲಿ ಕಣ್ತುಂಬಿಕೊಳ್ಳಬಹುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ, ಕೃಷಿ, ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರ, ರೈತ ಸೇವಾ (ಪುಷ್ಪ ಹರಾಜು) ಕೇಂದ್ರದ ಆವರಣದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಮಕ್ಕಳು, ಹಿರಿಯರು ಸೇರಿದಂತೆ ಯುವಜನರು ಪುಷ್ಪ ರಾಶಿ ಸೌಂದರ್ಯಕ್ಕೆ ಮನ ಸೋತಿದ್ದಾರೆ.

    ಪ್ರದರ್ಶನ ಆಕರ್ಷಣೀಯವಾಗಿಸಲು ಮೈಸೂರು ಮತ್ತು ಶಿವಮೊಗ್ಗದ 20 ಮಂದಿ ಡೆಕೊರೇಟರ್ಸ್ ಕಾರ್ಮಿಕ ವರ್ಗ ಎರಡು ದಿನ ಹಗಲು ರಾತ್ರಿ, ಶ್ರಮಿಸಿದೆ. ಉದ್ಘಾಟನೆ ಮುನ್ನವೇ ಸಾರ್ವಜನಿಕರು ಹೂವುಗಳು, ಕಲಾಕೃತಿಗಳ ಫೋಟೊ ತೆಗೆದು, ಸೆಲ್ಫಿಯೊಂದಿಗೆ ಸಂಭ್ರಮಿಸಿದರು. ತೋಟಗಾರಿಕೆ ಇಲಾಖೆ ವತಿಯಿಂದ ಹೈಡ್ರೋಪೋನಿಕ್ಸ್ ಹಾಗೂ ವರ್ಟಿಕಲ್ ಗಾರ್ಡನ್ ಮಾದರಿಗಳನ್ನು ತಯಾರಿಸಲಾಗಿದ್ದು, ಲಭ್ಯವಿರುವ ಜಾಗದ ವ್ಯವಸ್ಥಿತ ಬಳಕೆಗೆ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ನಡೆಸಲು ಮಾಹಿತಿ ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ಸಸ್ಯಾಗಾರಗಳಲ್ಲಿ ಬೆಳೆಸಿರುವ ಸಸಿಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ.

    24 ಅಡಿ ಉದ್ದದ ಹಡಗಿನ ಕಲಾಕೃತಿ: ಜಲಚರ ಜೀವಿಗಳನ್ನು ಹೂವಿನಿಂದ ರೂಪಿಸಿರುವುದು ಮತ್ತು 24 ಅಡಿ ಉದ್ದ ಹಡಗಿನ ಕಲಾಕೃತಿ, ಹೃದಯ ಆಕಾರದ ಫೋಟೊಫ್ರೇಮ್ ಹೂವಿನ ಕಲಾಕೃತಿ ವಿಶೇಷವಾಗಿದೆ. ಸೀ ಹಾರ್ಸ್‌, ಮೆಕೆರಲ್, ಸಾರ್ ಡೈನ್, ಅಕ್ಟೋಪಸ್, ಶೆಲ್ ಫಿಶ್, ಸ್ಟಾರ್ ಫಿಶ್ ಗಳನ್ನು ಗುಲಾಬಿ, ಸೇವಂತಿಗೆ, ಚೆಂಡು ಹೂವು, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪಗಳಿಂದ ಅಲಂಕೃತಗೊಂಡಿದ್ದು ಆಕರ್ಷಣೀಯವಾಗಿವೆ. ಒಟ್ಟು 30000 ಹೂವುಗಳನ್ನು ಮಾದರಿ ರಚನೆಗಳಿಗೆ ಬಳಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    6 ಸಾವಿರ ಅಲಂಕಾರಿಕ ಪುಷ್ಪ ಗಿಡಗಳು: 12 ವಿವಿಧ ಜಾತಿಯ ಅಲಂಕಾರಿಕ ಪುಷ್ಪಗಳ 6 ಸಾವಿರ ಗಿಡಗಳು ಪ್ರದರ್ಶನದಲ್ಲಿದೆ. ಕುಂಡಗಳಲ್ಲಿ, ಪಾಲಿಬ್ಯಾಗ್‌ಗಳಲ್ಲಿ ಪೆಟೋನಿಯ, ಸ್ಯಾಲ್ವಿಯಾ, ಸೆಲೋಶಿಯಾ, ಕಾಕ್ಸ್ ಕೂಂಬ್, ಗಾಝೀನಿಯಾ, ಡಯಾಂತಸ್, ಥೊರೇನಿಯಾ, ಗುಲಾಬಿ, ದಾಸವಾಳ, ಸೇವಂತಿಗೆ, ಚೆಂಡು ಹೂವು, ಕಳಂಚಿಯಾ ಹೀಗೆ ಒಟ್ಟು ಏಷ್ಯಾಟಿಕ್ ಲಿಲ್ಲಿ ಮತ್ತು ಆಲ್‌ಸ್ಟ್ರೋಮೇರಿಯಾ ಲಿಲ್ಲಿ ಜಾತಿಯ ಅಲಂಕಾರಿಕ ಗಿಡಗಳು ಹೆಚ್ಚಿನ ಆಕರ್ಷಣೆೆ ನೀಡುತ್ತಿವೆ. ತರಕಾರಿಯಲ್ಲಿ ವಿವಿಧ ದಾರ್ಶನಿಕರ ಮಾದರಿ ವಿಶೇಷ ಆಕರ್ಷಣೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts