More

    ಅತಿವೃಷ್ಟಿಯಿಂದ 323 ಕೋಟಿ ರೂ. ನಷ್ಟ, ಕೇಂದ್ರದ ನೆರೆ ಹಾನಿ ಸಮೀಕ್ಷೆ ತಂಡಕ್ಕೆ ಉಡುಪಿ ಜಿಲ್ಲಾಧಿಕಾರಿ ಮಾಹಿತಿ

    ಉಡುಪಿ: ಜಿಲ್ಲೆಯಲ್ಲಿ ಈ ವರ್ಷ ಅತಿವೃಷ್ಟಿಯಿಂದಾಗಿ ಒಟ್ಟು 323.70 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ವರ್ಷ ಸಂಭವಿಸಿದ ಪ್ರವಾಹ ಹಾನಿ ಕುರಿತು ಸಮೀಕ್ಷೆ ನಡೆಸಲು ಕೇಂದ್ರದಿಂದ ಆಗಮಿಸಿದ ತಂಡ ಸೋಮವಾರ ಜಿಲ್ಲೆಯ ವಿವಿಧ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಮತ್ತು ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು.

    ಶಿವಳ್ಳಿಯ ಪಾಸ್ ಕುದ್ರು ಪ್ರದೇಶ ಹಾಗೂ ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂ, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಾಯಿಯಲ್ಲಿ ನೆರೆಯಿಂದ 3 ಮನೆಗಳು ಸಂಪೂರ್ಣ ಹಾಳಾಗಿದ್ದ ಪ್ರದೇಶವನ್ನು ವೀಕ್ಷಿಸಿದರು. ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದಲ್ಲಿ ಹಾನಿಯಾಗಿರುವ ವೆಂಟೆಂಡ್ ಡ್ಯಾಂ, ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ಬಳಿಯ ಸೇತುವೆ ಹಾನಿ, ಬ್ರಹ್ಮಾವರ -ಜನ್ನಾಡಿ ರಸ್ತೆ ಹಾನಿ ಹಾಗೂ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿನ ಸೈಕ್ಲೋನ್ ಶೆಲ್ಟರ್ ಪರಿಶೀಲಿಸಿದರು.

    ಸ್ಥಳ ವೀಕ್ಷಣೆ ಮೊದಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಗ್ರಾಮೀಣ ಸಚಿವಾಲಯದ ಅಧೀನ ಕಾರ್ಯದರ್ಶಿ ದೀಪ್ ಶೇಖರ್ ಸಿಂಘ್ವಾಲ್, ಕಂದಾಯ ಇಲಾಖೆ ವೈಜ್ಞಾನಿಕ ಅಧಿಕಾರಿ ಸಿ.ಎನ್. ಪ್ರಭು ಸಭೆ ನಡೆಸಿದರು.

    ಶಾಸಕ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿ.ಪಂ. ಸಿಇಒ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

    — ಫೋಟೋ —
    ಯುಡಿಪಿ-14ಡಿಸೆ10-ಟೀಂ2:
    ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಗ್ರಾಮೀಣ ಸಚಿವಾಲಯದ ಅಧೀನ ಕಾರ್ಯದರ್ಶಿ ದೀಪ್ ಶೇಖರ್ ಸಿಂಘ್ವಾಲ್, ಕಂದಾಯ ಇಲಾಖೆ ವೈಜ್ಞಾನಿಕ ಅಧಿಕಾರಿ ಸಿ.ಎನ್. ಪ್ರಭು ನೇತೃತ್ವದ ಕೇಂದ್ರ ತಂಡ ಉಡುಪಿ ಜಿಲ್ಲೆಯಲ್ಲಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts