More

    ಸುಶಾಂತ್ ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರಿಗೆ ಕೊಲೆ ಬೆದರಿಕೆ; ಫೋನ್​ ಮೂಲಕ ಕಿರುಕುಳ ಕೊಟ್ಟಿದ್ಯಾರು?

    ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ ಮತ್ತವರ ಕುಟುಂಬದ ವಿರುದ್ಧ ದೂರು ದಾಖಲಾಗಿದೆ ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ಸೋಷಿಯಲ್​ ಮೀಡಿಯಾದಲ್ಲಿ ಸುಶಾಂತ್​ ಅವರದ್ದು ಆತ್ಮಹತ್ಯೆ ಅಲ್ಲ ಅದೊಂದು ಕೊಲೆ ಎಂದು ಆರೋಪ ಮಾಡಲಾಗುತ್ತಿದೆ. ಈ ನಡುವೆ ಸುಶಾಂತ್​ ಸಿಂಗ್​ ಮರಣೋತ್ತರ ಪರೀಕ್ಷೆ ಮಾಡಿದವರಿಗೆ ಸಂಕಷ್ಟ ಎದುರಾಗಿದೆ.

    ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೆ ‘ಡಿ ಬಾಸ್​’ ಎಂದು ಹೆಸರಿಟ್ಟ ದರ್ಶನ್​ ಅಭಿಮಾನಿ

    ಈ ಹಿಂದೆ ಸುಶಾಂತ್​ ಸಾವಿನ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಆ ವೈದ್ಯರ ತಂಡದ ಪೂರ್ತಿ ವಿವರ ಬಹಿರಂಗವಾಗಿತ್ತು. ಫೋನ್​ ನಂಬರ್​ ಸಹ ಅದರಲ್ಲಿದ್ದವು. ಆ ಫೋನ್​ ನಂಬರ್​ಗಳನ್ನೇ ಬಳಸಿಕೊಂಡು ಕೆಲವರು ನೇರವಾಗಿ ವೈದ್ಯರಿಗೆ ಫೋನ್​ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಸೂಪರ್ ಸ್ಟಾರ್​ಗೆ ರಾಕಿಂಗ್​ ಸ್ಟಾರ್ ಧ್ವನಿ…

    ಐವರು ವೈದ್ಯರೊಂದಿಗೆ ಅನುಚಿತವಾಗಿ ಮಾತನಾಡುತ್ತಿರುವ ಕಿಡಿಗೇಡಿಗಳು, ಲೈಸನ್ಸ್ ರದ್ದು ಮಾಡುವ ಹೆದರಿಕೆವೊಡ್ಡುತ್ತಿದ್ದಾರೆ. ಕೊಲೆ ಬೆದರಿಕೆ ಇದು ವೈದರ ಆತಂಕಕ್ಕೆ ಕಾರಣವಾಗಿದ್ದು, ರಕ್ಷಣೆ ಕೋರಿದ್ದಾರೆ. ಸುಶಾಂತ್​ ವಿಚಾರದಲ್ಲಿ ವೈದ್ಯರು ಕೆಲ ವಿಚಾರಗಳನ್ನು ಗೌಪ್ಯವಾಗಿ ಇರಿಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತೋ ಅಂದಿನಿಂದ ಕಿರುಕುಳ ಹೆಚ್ಚಾಗಿದೆಯಂತೆ. (ಏಜೆನ್ಸೀಸ್​)

    ಸುಶಾಂತ್ ಸಿಂಗ್ ರಜಪೂತ್ ಕೇಸ್ ಸಿಬಿಐಗೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts