More

    ದುರ್ವರ್ತನೆ ತೋರಿದರೆಂದು ವೈದ್ಯರನ್ನು ಬಡಿದು, ರಸ್ತೆಯಲ್ಲಿ ಎಳೆದಾಡಿದರು…!

    ವಿಶಾಖಪಟ್ಟಣ: ಕೋವಿಡ್​ 19ನಂಥ ಸೂಕ್ಷ್ಮ ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ವೈದ್ಯರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ನೆರೆಯ ಆಂಧ್ರಪ್ರದೇಶದಲ್ಲಿ ಸಾರ್ವಜನಿಕವಾಗಿ ದುರ್ವರ್ತನೆ ತೋರಿದ್ದಲ್ಲದೆ, ಅನಗತ್ಯವಾಗಿ ರಂಪಾಟ ನಡೆಸಿದ ಆರೋಪದಲ್ಲಿ ವೈದ್ಯರೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಜತೆಗೆ ಕೈಗಳನ್ನು ಬೆನ್ನ ಹಿಂದೆ ಕಟ್ಟಿಹಾಕಿ ರಸ್ತೆಯಲ್ಲಿ ಎಳೆದಾಡಿದ್ದಾರೆ. ಬಳಿಕ ಅವರನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

    ಡಾ. ಕೆ. ಸುಧಾಕರ್​, ವಿಶಾಖಪಟ್ಟಣದ ಅಕ್ಕಯ್ಯಪಾಳ್ಯಂನಲ್ಲಿ ಪೊಲೀಸರಿಂದ ಅಮಾನುಷವಾಗಿ ಹಲ್ಲೆಗೆ ಒಳಗಾದವರು. ಇವರು ಆಂಧ್ರಪ್ರದೇಶದ ನರಸಿಪಟ್ಟಣದ ಸರ್ಕಾರ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದಾರೆ.

    ಸಾರ್ವಜನಿಕರೊಬ್ಬರು ಪೊಲೀಸರಿಂದ ವೈದ್ಯ ಹಲ್ಲೆಗೆ ಒಳಗಾಗುತ್ತಿರುವ ದೃಶ್ಯ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್​ ಆಗಿದೆ. ವೈದ್ಯರು ಹಲ್ಲೆಗೆ ಒಳಗಾದ ಸಂದರ್ಭದಲ್ಲಿ ಸಾಕಷ್ಟು ಜನರು ಸ್ಥಳದಲ್ಲಿದ್ದರು. ಆದರೆ ಅವರೆಲ್ಲರೂ ಮೂಕಪ್ರೇಕ್ಷಕರಾಗಿದ್ದರು ಎನ್ನಲಾಗಿದೆ.

    ಹೆದ್ದಾರಿಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರೊಂದಿಗೆ ಇವರು ದುರ್ವರ್ತನೆ ತೋರಿದರು. ಅಲ್ಲದೆ, ರಂಪಾಟ ನಡೆಸಿದರು. ಎಷ್ಟು ಸಮಾಧಾನಿಸಲು ಯತ್ನಿಸಿದರೂ ಕೇಳಲಿಲ್ಲ. ಹಾಗಾಗಿ ಸ್ಥಳದಲ್ಲಿದ್ದ ಸಿಬ್ಬಂದಿ ಇವರ ಮೇಲೆ ಹಲ್ಲೆ ಮಾಡಿದ್ದಾಗಿ ಆಂಧ್ರಪ್ರದೇಶ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ 4.0 ಮಾರ್ಗಸೂಚಿ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ

    ಆದರೆ, ವಿಡಿಯೋ ವೈರಲ್​ ಆದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ವೈದ್ಯರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಒಬ್ಬ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

    ರಾಜಕೀಯ ಕೆಸೆರೆಚಾಟ: ಡಾ. ಕೆ. ಸುಧಾಕರ್​ ಅವರು ಎರಡು ತಿಂಗಳ ಹಿಂದೆ ಕೋವಿಡ್​ 19 ಸೋಂಕು ಹರಡಲಾರಂಭಿಸಿದ್ದ ಸಂದರ್ಭದಲ್ಲಿ ಜನರಿಗೆ ಚಿಕಿತ್ಸೆ ನೀಡಲು ಅನುವಾಗುವಂತೆ ವೈದ್ಯರಿಗೆ ಪಿಪಿಇ ಮತ್ತು ಎನ್​95 ಮಾಸ್ಕ್​ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಜತೆಗೆ, ಅವನ್ನು ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

    ಸುಳ್ಳು ಆರೋಪ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿಸ್ತುಕ್ರಮವಾಗಿ ಆಂಧ್ರಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಗಳು ಇವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು.

    ಇದೀಗ ಪೊಲೀಸ್​ ಹಲ್ಲೆಯ ಮೂಲಕ ಸರ್ಕಾರ ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳಾದ ತೆಲುಗುದೇಶಂ ಮತ್ತು ಭಾರತೀಯ ಕಮ್ಯುನಿಸ್ಟ್​ ಪಾರ್ಟಿ ಆರೋಪಿಸಿವೆ. ವೈದ್ಯರ ಮೇಲಿನ ಪೊಲೀಸರ ಹಲ್ಲೆಯನ್ನು ಗಮನಿಸಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿವೆ.

    ಚಿತ್ರಮಂದಿರಗಳತ್ತ ಜನರನ್ನು ಸೆಳೆಯಲು ಹೀಗೆ ಮಾಡಬಹುದು ಎಂದದ್ದಕ್ಕೆ ನೆಟ್ಟಿಗರ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts