More

    ನಂಜನಗೂಡು ಪ್ರಭಾರ ಟಿಎಚ್‌ಒ ಆತ್ಮಹತ್ಯೆ ಪ್ರಕರಣ: ವೈದ್ಯರ ಪ್ರತಿಭಟನೆಗೆ ನಾಟಕೀಯ ತಿರುವು

    ಮೈಸೂರು: ನಂಜನಗೂಡು ಪ್ರಭಾರ ಟಿಎಚ್‌ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆಗೆ ಇದೀಗ ನಾಟಕೀಯ ತಿರುವು ಪಡೆದುಕೊಂಡಿದೆ.

    ಡಾ.ನಾಗೇಂದ್ರ ಕುಟುಂಬಸ್ಥರು ಪ್ರತಿಭಟನೆಗೆ ಅಸಹಕಾರ ತೋರಿದ್ದಾರೆ ಎನ್ನಲಾಗಿದೆ. ಗಲಾಟೆ ಹಾಗೂ ಮುಷ್ಕರಗಳಿಗೆ ಕುಟುಂಬಸ್ಥರ ನಿರಾಸಕ್ತಿ ಹೊಂದಿದ್ದಾರೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡವಲ್ಲ ಎಂಬ ಸಾವಿನ ನೋವಿನಲ್ಲಿ ಕುಟುಂಬ ಮುಳುಗಿದೆ.

    ಇದನ್ನೂ ಓದಿ: ಇಷ್ಟವಿದ್ದರೆ ಕೆಲಸ ಮಾಡಲಿ, ಇಲ್ಲದಿದ್ದರೆ ಅವರ ದಾರಿ ನೋಡಿಕೊಳ್ಳಲಿ: ಸಚಿವ ಸುಧಾಕರ್​

    ಈ ಬಗ್ಗೆ ಸೂಕ್ಷ್ಮವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವೈದ್ಯರ ಸಂಘದ ಮಾಜಿ ಅಧ್ಯಕ್ಷ. ಡಾ.ರವೀಂದ್ರ, ಕುಟುಂಬಸ್ಥರು ಬರಲಿ ಅಥವಾ ಬಿಡಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಸದ್ಯ ಮೈಸೂರಿನಲ್ಲಿ ಹೋರಾಟ ತೀವ್ರಗೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಎರಡು ದಿನಗಳಿಂದ ಸರ್ಕಾರಕ್ಕೆ ಕೋವಿಡ್ ವರದಿಯನ್ನೂ ಸಹ ಸಲ್ಲಿಸಿಲ್ಲ. ಇದಲ್ಲದೆ ಸೋಮವಾರದಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಚಿಂತನೆ ನಡೆಸಿದ್ದಾರೆ.

    ಇಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘದ ತುರ್ತು ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಹೋರಾಟದ ರೂಪುರೇಷೆ ಬಗ್ಗೆ‌ ಚರ್ಚೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಪ್ರಶಾಂತ್ ಕುಮಾರ್ ಮಿಶ್ರ ಅಮಾನತಿಗೆ ವೈದ್ಯರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದರೂ ಅಮಾನತ್ತಿಗೆ ವೈದ್ಯರು ಪಟ್ಟು ಹಿಡಿದಿದ್ದಾರೆ.

    ಇದನ್ನೂ ಓದಿ: ಜೂ.13ರ ರಾತ್ರಿ ನಡೆದ ಒಂದು ಘಟನೆಯನ್ನು ಈಗ ಬಿಚ್ಚಿಟ್ಟ ಸುಶಾಂತ್​ ಸಿಂಗ್​ ನೆರೆಮನೆಯವರು…

    ಘಟನೆ ಹಿನ್ನೆಲೆ ಏನು?
    ನಂಜನಗೂಡು ಟಿಎಚ್‌ಒ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ​ ವಿರುದ್ಧ ಕೆಲಸದ ಒತ್ತಡವೇರಿ ಸಾವಿಗೆ ಕಾರಣವಾಗಿರುವ ಆರೋಪ ಎದುರಾಗಿದೆ. ಹೀಗಾಗಿ ಮಿಶ್ರಾ ಅವರ ಅಮಾನತ್ತಿಗಾಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದರೂ ಅಮಾನತ್ತಿಗಾಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹಳಿಯ ಮೇಲೆ ಮೇಯುತ್ತಿದ್ದ 14 ಹಸುಗಳ ಮೇಲೆ ಹರಿದ ಗೂಡ್ಸ್​ ರೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts