ಸರ್ಕಾರಿ ಆಸ್ಪತ್ರೆ ವೈದ್ಯ ನಾಪತ್ತೆ

13KWR-Dr.H.T.umesh
Published on

ಕಾರವಾರ: ವೈದ್ಯ ನಾಪತ್ತೆಯಾದ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಎಚ್.ಟಿ.ಉಮೇಶ ಕಾಣೆಯಾದ ಬಗ್ಗೆ ಅವರ ಪತ್ನಿ ಡಾ.ಪೂಜಾ ಗುರುವಾರ ದೂರು ದಾಖಲಿಸಿದ್ದಾರೆ.
ಅ.10 ರಂದು ತಮ್ಮ ಮನೆಯಿಂದ ಆಸ್ಪತ್ರೆಗೆ ತೆರಳುವುದಾಗಿ ಹೋದವರು ಆಸ್ಪತ್ರೆಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಉಮೇಶ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಟ್ಟೂರಿನ ಮೂಲದವರಾಗಿದ್ದು, ಭಟ್ಕಳಡ ಡಿ.ಪಿ.ಕಾಲನಿಯಲ್ಲಿ ವಾಸವಿದ್ದರು. ಮೂರು ತಿಂಗಳಿ ಹಿಂದಷ್ಟೇ ಅವರಿಗೆ ವಿವಾಹವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net