More

    ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

    ಕಿಬ್ಬೊಟ್ಟೆ ಮತ್ತು ಬೆನ್ನಿಗೆ ಉತ್ತಮ ವ್ಯಾಯಾಮ ನೀಡುವ ಆಸನವೆಂದರೆ ಮರೀಚ್ಯಾಸನ. ಈ ಯೋಗಾಸನಕ್ಕೆ ಮರೀಚಿ ಋಷಿಯ ಹೆಸರನ್ನು ಇಡಲಾಗಿದೆ. ದೇಹವನ್ನು ತಿರುಚಿ ಮಾಡುವ ಈ ಆಸನವನ್ನು ಹಲವು ಪ್ರಕಾರಗಳಲ್ಲಿ ಅಭ್ಯಾಸ ಮಾಡುತ್ತಾರೆ.

    ಮರೀಚ್ಯಾಸನದ ಪ್ರಯೋಜನಗಳು: ಕಿಬ್ಬೊಟ್ಟೆಯ ಭಾಗಕ್ಕೆ, ಬೆನ್ನಿನ ಭಾಗಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಪಿತ್ತಕೋಶದ ಕಾರ್ಯ ಸಮರ್ಪಕವಾಗುತ್ತದೆ. ಸೊಂಟದ ಸುತ್ತ ರಕ್ತ ಪರಿಚಲನೆ ಚೆನ್ನಾಗಿ ನಡೆದು, ದೇಹದ ತೂಕ ಕಡಿಮೆ ಆಗಲು ಸಹಕಾರಿಯಾಗುತ್ತದೆ. ತೋಳುಗಳಿಗೆ ಮತ್ತು ಭುಜಗಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ. ಮುಖ್ಯವಾಗಿ ಬೆನ್ನೆಲುಬಿಗೆ ಬಲ ದೊರಕುತ್ತದೆ.

    ಇದನ್ನೂ ಓದಿ: ಶೇ.100 ಲಸಿಕೀಕರಣದತ್ತ ಕರ್ನಾಟಕ; ಆಗಸ್ಟ್‌ನಲ್ಲಿ ದಾಖಲೆ ಪ್ರಮಾಣದ ವ್ಯಾಕ್ಸಿನ್ ನೀಡಿಕೆ!

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಕುಳಿತುಕೊಂಡು ಕಾಲನ್ನು ಚಾಚಬೇಕು. ಬಲಗಾಲನ್ನು ಮಡಿಸಿ ಎಡತೊಡೆಯ ಪಕ್ಕಕ್ಕೆ, ಕಿಬ್ಬೊಟ್ಟೆಗೆ ತಾಗುವಂತೆ ಇಡಬೇಕು. ಬಲಹಿಮ್ಮಡಿಯನ್ನು ನೆಲಕ್ಕೆ ಒತ್ತಿರಬೇಕು. ಎಡಗಾಲನ್ನು ನೇರವಾಗಿಸಿ. ಉಸಿರನ್ನು ಬಿಡುತ್ತಾ ಸೊಂಟ, ಬೆನ್ನು, ಕುತ್ತಿಗೆಯನ್ನು ಎಡಬದಿಗೆ ತಿರುಗಿಸಿ, ಎರಡೂ ಕೈಗಳನ್ನು ಹಿಂದಕ್ಕೆ ತಂದು ಬೆರಳುಗಳನ್ನು ಪರಸ್ಪರ ಹೆಣೆದು ಜೋಡಿಸಿರಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ನಿಧಾನವಾಗಿ ಮೂಲಸ್ಥಿತಿಗೆ ವಾಪಸಾಗಬೇಕು. ಇನ್ನೊಂದು ಬದಿಗೂ ಎಡಗಾಲನ್ನು ಮಡಿಸಿ ಈ ಆಸನವನ್ನು ಅಭ್ಯಾಸ ಮಾಡಬೇಕು.

    ತೀವ್ರ ಸೊಂಟ ನೋವು ಅಥವಾ ಸ್ಲಿಪ್​ ಡಿಸ್ಕ್​ ಸಮಸ್ಯೆ ಇರುವವರು ಈ ಆಸನ ಮಾಡಬಾರದು.

    ಗೂನು ಬೆನ್ನು ನಿವಾರಣೆಗೆ ಈ ಯೋಗಾಸನ ಸಹಕಾರಿ

    ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​

    ಬೆನ್ನುನೋವು ನಿಯಂತ್ರಣಕ್ಕೆ ಮಗುವಿನಂತೆ ಮಲಗುವ ಈ ಸರಳ ಯೋಗಾಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts