More

    ಮುಟ್ಟಿನ ದೋಷಗಳ ನಿವಾರಣೆಗೆ ಈ ಸರಳ ಯೋಗಾಸನ ಮಾಡಿ!

    ಸ್ತ್ರೀಯರಿಗೆ ಉಂಟಾಗುವ ಮುಟ್ಟಿನ ದೋಷಗಳನ್ನು ನಿವಾರಣೆ ಮಾಡುವಂತಹ ಯೋಗಾಸನವೆಂದರೆ ‘ಬದ್ಧ ಕೋನಾಸನ’. ಮಹಿಳೆಯರಿಗೆ ವರದಾನ ಎಂಬಂತಿರುವ ಆಸನವಿದು. ಒಟ್ಟಾರೆಯಾಗಿ, ದೇಹದ ರಕ್ತ ಪರಿಚಲನೆಯನ್ನು ಚುರುಕುಗೊಳಿಸಿ ಹೊಟ್ಟೆಯ, ಕಿಬ್ಬೊಟ್ಟೆಯ ಭಾಗದ ಎಲ್ಲಾ ಅಂಗಗಳಿಗೂ ಆರೋಗ್ಯ ನೀಡುವ ಆಸನ ಕೂಡ.

    ಪ್ರಯೋಜನಗಳು: ಬದ್ಧ ಕೋನಾಸನದ ಅಭ್ಯಾಸದಿಂದ ಹೊಟ್ಟೆಯ ಒಳಗಿನ ಅಂಗಗಳಿಗೆ ವ್ಯಾಯಾಮ ಲಭಿಸುತ್ತದೆ. ಓವರೀಸ್​, ಪ್ರಾಸ್ಟೇಟ್​ ಗ್ಲ್ಯಾಂಡ್​, ಬ್ಲ್ಯಾಡರ್​ ಮತ್ತು ಕಿಡ್ನಿ ಅಂಗಗಳು ಪುನಶ್ಚೇತನಗೊಳ್ಳುತ್ತವೆ. ಕಿಬ್ಬೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಸಾಕಷ್ಟು ರಕ್ತ ಪರಿಚಲನೆಯಾಗುತ್ತದೆ. ಮೂತ್ರಪಿಂಡಗಳು, ಮೂತ್ರಕೋಶ ಸುಸ್ಥಿತಿಯಲ್ಲಿರುತ್ತವೆ. ಕಾಲಿನ ನರಗಳ ಸೆಳೆತ ಮತ್ತು ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ತೊಡೆಯ ಮತ್ತು ಮೊಣಕಾಲುಗಳ ನೋವಿಗೆ ಪರಿಹಾರ ಸಿಗುತ್ತದೆ. ಸೊಂಟದ ಭಾಗ ಬಲಗೊಳ್ಳುತ್ತದೆ. ದೇಹದ ರಕ್ತ ಪರಿಚಲನೆ ಚುರುಕುಗೊಳ್ಳುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ಸಹಕಾರಿ

    ಮಾಡುವ ವಿಧಾನ: ಜಮಖಾನದ ಮೇಲೆ ಕೂತು, ಕಾಲುಗಳನ್ನು ಒಳಗೆ ತರುವುದು. ಹಿಮ್ಮಡಿಗಳನ್ನು ಒಟ್ಟಿಗೆ ಅಳವಡಿಸಿ, ಪಾದದ ಮುಂಭಾಗವನ್ನು ಕೈಬೆರಳುಗಳಿಂದ ಹಿಡಿದುಕೊಳ್ಳುವುದು. ಚಿಟ್ಟೆ ರೆಕ್ಕೆ ಆಡಿಸುವ ರೀತಿಯಲ್ಲಿ ಮೊಣಕಾಲುಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸುವುದು. ಸಹಜ ಉಸಿರಾಟ ನಡೆಸುತ್ತಿರಬೇಕು.

    ಈ ಬದ್ಧಕೋನಾಸನ ಮಾಡಿದ ಮೇಲೆ ಉಸಿರನ್ನು ತೆಗೆದುಕೊಂಡು, ನಂತರ ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಬೇಕು. ಗಲ್ಲ, ಹಣೆ ನೆಲಕ್ಕೆ ತಾಗಿಸಿ ಕಣ್ಣು ಮುಚ್ಚಿರಬೇಕು. ಸ್ವಲ್ಪ ಹೊತ್ತು ಹಾಯಾಗಿರಬೇಕು.

    ತೀರಾ ಬೆನ್ನು ಅಥವಾ ಸೊಂಟ ನೋವು ಇದ್ದವರು ಈ ಆಸನವನ್ನು ಮಾಡಬಾರದು. ಸಯಾಟಿಕಾ ಅಥವಾ ಮುಟ್ಟಿನ ಅವಧಿಯಲ್ಲಿ ಅತಿಯಾದ ಬ್ಲೀಡಿಂಗ್​ ಇದ್ದವರೂ ಮಾಡಬಾರದು.

    ಒಂದೇ ಆಟದಲ್ಲಿ ಭಾರತಕ್ಕೆ ಎರಡು ಪದಕ! ಚಿನ್ನ ಗೆದ್ದ ಪ್ರಮೋದ್​ ಭಗತ್​​… ಕಂಚು ಗೆದ್ದ ಮನೋಜ್​ ಸರ್ಕಾರ್​!​

    ಸೆ.30ಕ್ಕೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧರಿಸೋ ಚುನಾವಣೆ!

    ಸೊಂಟ ಮತ್ತು ಬೆನ್ನು ನೋವಿಗೆ ರಾಮಬಾಣ, ಈ ಯೋಗಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts