More

    ವೈದ್ಯರ ಸಲಹೆ ಇಲ್ಲದೆ ರೋಗ ನಿರೋಧಕ ಔಷಧ ಸೇವಿಸಬೇಡಿ

    ಬಳ್ಳಾರಿ : ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಚಾಲ್ತಿಯಲ್ಲಿರುವ ರೋಗ ನಿರೋಧಕ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹೇಳಿದರು.

    ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಆಂಟಿಮೈಕ್ರೋಬಿಯಲ್ ಜಾಗೃತಿ ಸಪ್ತಾಹ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಗಂಭೀರ ಕಾಯಿಲೆಗಳ ರೋಗ ನಿಯಂತ್ರಣಕ್ಕಾಗಿ ಬ್ಯಾಕ್ಟೀರಿಯ ವೈರಸ್‌ಗಳು, ಶೀಲಿಂಧ್ರಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ. ಕೆಲವು ಬಾರಿ ಅಗತ್ಯವಿಲ್ಲದ ಔಷಧಗಳನ್ನು ಬಳಸಿದಾಗ ಅಥವಾ ಹೆಚ್ಚು ಡೋಸ್ ಬಳಸಿದಾಗ ಔಷಧಗಳು ದುಷ್ಪರಿಣಾಮಕಾರಿಯಾಗಿ ಬದಲಾವಣೆಯಾಗುವ ಸಂಭವ ಇರುತ್ತದೆ ಎಂದು ತಿಳಿಸಿದರು.

    ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಮತ್ತು ಸುತ್ತಲಿನ ಪರಿಸರಕ್ಕೂ ಇದರ ಪ್ರಭಾವ ಉಂಟಾಗಿ ಹಾನಿಕಾರಕವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದೇ ಔಷಧಗಳನ್ನು ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸಬೇಕು ಎಂದು ಅವರು ವಿನಂತಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಮಾತನಾಡಿ, ಇತ್ತೀಚಿಗೆ ಕೋವಿಡ್ ಸನ್ನಿವೇಶದಲ್ಲಿ ಚಿಕಿತ್ಸೆ ಪಡೆಯುವ ಕ್ಷಯರೋಗಿಗಳು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಔಷಧವನ್ನು ಮಧ್ಯದಲ್ಲಿ ನಿಲ್ಲಿಸಿದಾಗ ರೋಗಿಗೆ ಪುನಃ ಕ್ಷಯರೋಗ ಬಂದಲ್ಲಿ ಬಹು ನಿರೋಧಕ ಔಷಧವನ್ನು ಬಳಸಿದಾಗ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು.

    ಬಹು ನಿರೋಧಕ ಔಷಧಗಳ ಉತ್ಪತ್ತಿ ಮಾಡುವಾಗಲೂ ಸಹ ಪರಿಸರ ಮೇಲೆ ಹಾನಿಕಾರಕವಾಗುವ ಸಾಧ್ಯತೆಗಳಿರುವುದರಿಂದ ದಯವಿಟ್ಟು ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಸೇವಿಸಬಾರದು.ರೋಗಗಳು ಬರದಂತೆ ತಡೆಯಲು ಮುಂಜಾಗ್ರತೆ ವಹಿಸಬೇಕು. ಆಗಾಗ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು.ಜನಸಾಂದ್ರತೆಯಲ್ಲಿ ಮಾಸ್ಕ್ ಧರಿಸಿರಿ, ವಯೋವೃದ್ಧರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

    ವಿಎಸ್‌ಕೆ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಯೋಗಾನಂದ ರೆಡ್ಡಿ, ಡಾ.ಸಂಗೀತಾ, ಡಾ.ಬಾಲ ವೆಂಕಟೇಶ್, ಡಾ.ವಿಶಾಲಾಕ್ಷಿ, ಡಾ.ಸುನಿಲ್, ಡಾ.ಶ್ರೀಧರ್, ಡಾ.ವಿಜಯಲಕ್ಷ್ಮಿ, ಡಾ.ಭಾವನಾ, ಡಾ.ಬಸವಪ್ರಭು, ಡಾ.ಪ್ರಶಾಂತ್, ಡಾ.ವಿಶಾಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಆಡಳಿತ ಅಧಿಕಾರಿ ಮೆಹಬೂಬ್‌ಖಾನ್, ಅಧೀಕ್ಷಕ ರವಿಚಂದ್ರನ್, ವಿಜಯಕುಮಾರ್, ಸೇಲಿನಾ, ಚಿತ್ರಶೇಖರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts