More

    ಇವೆರಡು ಕಡೆಯ ಸಲಹೆ-ಸೂಚನೆಗಳನ್ನು ನಿರ್ಲಕ್ಷಿಸಬೇಡಿ ಎಂದು ಎಲ್ಲ ಸಚಿವರಿಗೂ ಕಿವಿಮಾತು ಹೇಳಿದ ಮೋದಿ

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ತನ್ನ ಎಲ್ಲ ಸಚಿವರು ಹಾಗೂ ಸಚಿವಾಲಯಗಳಿಗೆ ಸೂಚನೆಯೊಂದನ್ನು ನೀಡಿದ್ದಾರೆ. ಅಲ್ಲದೆ ನಿರ್ದಿಷ್ಟ ಎರಡು ಕಡೆಯಿಂದ ಬರುವ ಸಲಹೆ-ಸೂಚನೆಗಳನ್ನು ನಿರ್ಲಕ್ಷಿಸಬೇಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.

    ಸಚಿವರು ಹಾಗೂ ಕೇಂದ್ರ ಸಚಿವಾಲಯದ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ್ದ ಸುದೀರ್ಘ ಸಭೆಯೊಂದರಲ್ಲಿ ಮಾತುಕತೆ ನಡೆಸಿದ ಮೋದಿ ಈ ಸೂಚನೆಯನ್ನು ನೀಡಿದ್ದಾರೆ ಎಂಬದಾಗಿ ಮೂಲಗಳು ರವಿವಾರ ತಿಳಿಸಿವೆ.

    ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್​ ಸೆಕ್ರೆಟರಿಯಟ್​ (ಎನ್​ಎಸ್​ಸಿಎಸ್​) ಮತ್ತು ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್​ (ಎನ್​ಎಸ್​ಎ) ಕಡೆಯಿಂದ ನೀಡಲಾಗುವ ಯಾವುದೇ ಸೂಚನೆಯನ್ನು ನಿರ್ಲಕ್ಷಿಸಬೇಡಿ, ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಎಂಬುದಾಗಿ ಪ್ರಧಾನಿ ಸೂಚನೆ ನೀಡಿದ್ದಾರೆ.

    ಯಾವುದೇ ನೀತಿಯನ್ನು ರೂಪಿಸುವಾಗ ಅದನ್ನು ಭಾರತದ ತಂತ್ರಾತ್ಮಕ ದೃಷ್ಟಿಕೋನದಲ್ಲೂ ನೋಡಬೇಕಾಗುತ್ತದೆ. ಆದರೆ ಎನ್​ಎಸ್​ಸಿಎಸ್​ ಮತ್ತು ಎನ್​ಎಸ್​ಎ ಸೂಚನೆಗಳಿಗೆ ಆದ್ಯತೆ ತೋರದ ಪ್ರಕರಣಗಳು ಈ ಹಿಂದೆ ಕಂಡುಬಂದಿದ್ದವು ಎಂದಿರುವ ಅವರು ಇದೇ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ನೀಡಿದ್ದಾರೆ. –ಏಜೆನ್ಸೀಸ್

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts