More

    ‘ನಾವಿಬ್ಬರು ಶತ್ರುಗಳಲ್ಲ’ ಎನ್ನುತ್ತಲೇ ಖರ್ಗೆ ಬಗ್ಗೆ ಶಶಿ ತರೂರ್​ ಹೀಗಂದಿದ್ದೇಕೆ?

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಪಕ್ಷದೊಳಗೆ ಇದೀಗ ಸಂಚಲನ ಸೃಷ್ಟಿಸಿದೆ. ಪಕ್ಷದ ವರಿಷ್ಠರ ಸ್ಥಾನಕ್ಕಾಗಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಭ್ಯರ್ಥಿಗಳಾಗಿದ್ದು, ಇಬ್ಬರ ಮಧ್ಯೆ ಪೈಪೋಟಿ ಆರಂಭವಾಗಿದೆ. ಈ ಮಧ್ಯೆ ನಾವು ಶತ್ರುಗಳಲ್ಲ ಎಂದಿರುವ ತರೂರ್, ಖರ್ಗೆ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದಾರೆ.

    ನಾಗ್ಪುರ ಮಹಾತ್ಮ ಗಾಂಧಿ ಸ್ಮಾರಕದಲ್ಲಿ ಇಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಖರ್ಗೆ ಈಗಿನ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ, ಅವರಿಂದಾಗ ಬದಲಾವಣೆಯನ್ನು ನಾನು ತರಬಲ್ಲೆ ಎಂಬುದಾಗಿ ಹೇಳಿದ್ದಾರೆ.

    ಇದು ಯುದ್ಧವಲ್ಲ, ನಾವು ಶತ್ರುಗಳೂ ಅಲ್ಲ. ಆದರೆ ಇದು ನಮ್ಮ ಪಕ್ಷದ ಭವಿಷ್ಯದ ವಿಚಾರ. ಖರ್ಗೆಯವರು ಪಕ್ಷದ ಮೂರು ಅತ್ಯುನ್ನತ ನಾಯಕರ ಸಾಲಿನಲ್ಲಿ ಬರುತ್ತಾರೆ. ಆದರೆ ಅವರಂಥ ನಾಯಕರು ಬದಲಾವಣೆ ತರಲು ಸಾಧ್ಯವಿಲ್ಲ. ನಾನು ಆಯ್ಕೆಯಾದರೆ ಪಕ್ಷದ ಕಾರ್ಯಕರ್ತರು ಬಯಸುವಂಥ ಬದಲಾವಣೆ ತರಬಲ್ಲೆ ಎಂಬುದಾಗಿ ಶಶಿ ಹೇಳಿದ್ದಾರೆ.

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts