More

    ಫೋನ್ ಟ್ಯಾಪಿಂಗ್‌ನಂತಹ ನೀಚ ಕೆಲಸ ಮಾಡಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದಲ್ಲಿ ಪ್ರತಿಪಕ್ಷದ ಮುಖಂಡರು ಸೇರಿ ಹಲವುರ ವಿರುದ್ಧ ಸರ್ಕಾರ ಫೋನ್ ಟ್ಯಾಪಿಂಗ್ ಮಾಡುತ್ತಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪವನ್ನು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ತಳ್ಳಿಹಾಕಿದ್ದಾರೆ.

    ದೂರವಾಣಿ ಕದ್ದಾಳಿಕೆಯಂತಹ ನೀಚ ಕೆಲಸವನ್ನು ಮಾಡುವುದಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಪ್ರಜ್ವಲ್ ರೇವಣ್ಣ ಪೆನ್‌ಡ್ರೈನ್ ಪ್ರಕರಣವನ್ನು ನಾಗರಿಕರಿಂದ ಮರೆಮಾಚಲು ಕುಮಾರಸ್ವಾಮಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬುಧವಾರ ಪ್ರತಿಕ್ರಿಯಿಸಿದರು.

    ಸುಳ್ಳು ಹೇಳೋದೆ ಅಶೋಕ್ ಕೆಲ್ಸ:

    ಮಳೆಹಾನಿ ಪ್ರದೇಶ ವೀಕ್ಷಣೆ ನೆಪದಲ್ಲಿ ಸಿಎಂ ಹಾಗೂ ಡಿಸಿಎಂ ಫೋಟೋ ಶೂಟ್‌ಗೆ ಹೋಗಿ ಬಂದಿದ್ದಾರೆ. ಅವರಿಬ್ಬರಿಗೂ ನಗರ ಅಭಿವೃದ್ಧಿಯ ಕಾಳಜಿ ಇಲ್ಲವೆಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ, ಎಲ್ಲ ವಿಚಾರದಲ್ಲೂ ಅಶೋಕ್ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ನಾವೇನು ಫೋಟೋ ಶೂಟ್‌ಗೆ ನಿಂತು ಫೋಸು ಕೊಟ್ಟಿದ್ದೇವೆಯೆ. ಮಳೆಹಾನಿ ಪ್ರದೇಶ ವೀಕ್ಷಣೆ ಮಾಡಿದ್ದೇವಷ್ಟೇ. ಇದನ್ನೇ ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎಂದರು.

    ಪ್ರತಿಪಕ್ಷ ನಾಯಕರು ಬೆಂಗಳೂರಿನ ಶಾಸಕರೂ ಆಗಿದ್ದಾರೆ. ಅವರ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ರಾಜಕಾಲುವೆಗಳ ಒತ್ತುವರಿ ತೆರವಿನಲ್ಲೂ ಮೈಮರೆತು ಈಗ ನಮ್ಮ ಸರ್ಕಾರವನ್ನು ಟೀಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಎದಿರೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts