More

    ತಾಕತ್ತಿದ್ದರೆ ಸರ್ಕಾರ ಉರುಳಿಸಿ; ಸವಾಲು ಹಾಕಿದ್ದೇಕೆ ಉದ್ಧವ್​ ಠಾಕ್ರೆ?

    ಮುಂಬೈ: ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಭವಿಷ್ಯ ವಿರೋಧ ಪಕ್ಷದ ಕೈಯಲ್ಲಿಲ್ಲ ಎಂದು ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದಾರೆ.
    ಸಂಸದ ಸಂಜಯ್​ ರಾವುತ್​ ಶಿವಸೇನಾ ಮುಖವಾಣಿ ಸಾಮ್ನಾಗಾಗಿ ನಡೆಸಿದ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ತಾಕತ್ತಿದ್ದರೆ ಸರ್ಕಾರವನ್ನು ಉರುಳಿಸಲಿ ಎಂದು ಸವಾಲು ಹಾಕಿದ್ದಾರೆ.

    ಸರ್ಕಾರ ಮೂರು ಗಾಲಿಯ ಗಾಡಿಯಿದ್ದಂತೆ ಎಂಬ ವಿಪಕ್ಷದ ಆರೋಪಕ್ಕೆ ತೀಕ್ಷ್ಣ ಉತ್ತರ ನೀಡಿರುವ ಉದ್ಧವ್​, ಒಂದು ವೇಳೆ ಬುಲೆಟ್​ ಟ್ರೈನ್​ ಹಾಗೂ ತ್ರಿಚಕ್ರ ವಾಹನದ ಆಯ್ಕೆ ನೀಡಿದಲ್ಲಿ ನಾನು ಬಡವರು ಬಳಸುವ ತ್ರಿಚಕ್ರ ವಾಹನವನ್ನೇ ಆಯ್ದುಕೊಳ್ಳುತ್ತೇನೆ ಎಂದಿದ್ದಾರೆ. ಜತೆಗೆ ಬುಲೆಟ್​ ಟ್ರೇನ್​ ಯೋಜನೆ ಬೇಡ ಎಂದಿದ್ದಕ್ಕೂ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಇದೆಂಥ ಹಿನ್ನಡೆ? 

    ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ನ​ ಮೈತ್ರಿ ಸರ್ಕಾರ ಬಡವರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ಸುಭದ್ರವಾಗಿದ್ದು, ನಾನು ಚಾಲಕನಾಗಿದ್ದರೆ, ಇನ್ನಿಬ್ಬರು ಜತೆಗಿದ್ದಾರೆ. ಸರ್ಕಾರದ ವಿಷಯಗಳಲ್ಲಿ ಶರದ್​ ಪವಾರ್​ ಸಲಹೆ ಪಡೆಯುತ್ತೇನೆ. ಆಗಾಗ ಸೋನಿಯಾ ಗಾಂಧಿ ಜತೆಗೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ನಾನು ಈ ಹಿಂದೆ ಕೇಂದ್ರದ ಎನ್​ಡಿಎ ಸರ್ಕಾರದ ಸಭೆಗಳಲ್ಲಿ ಭಾಗವಹಿಸುತ್ತಿದೆ. ಅಲ್ಲಿ 30-35 ಪ್ರಾದೇಶಿಕ ಪಕ್ಷಗಳ ನಾಯಕರಿರುತ್ತಿದ್ದರು. ಹಾಗಾದರೆ ಕೇಂದ್ರ ಸರ್ಕಾರವನ್ನು ಟ್ರೇನ್​ ಸರ್ಕಾರ ಎಂದು ಕರೆಯಬೇಕೆ ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ; ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

    ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಯತ್ನ ನಡೆಸಿದೆ. ಆದರೆ, ಮಹಾರಾಷ್ಟ್ರದಲ್ಲಿ ಆಪರೇಷನ್​ ಕಮಲಕ್ಕೆ ಯಾವುದೇ ಯಶಸ್ಸು ದೊರೆಯುವುದಿಲ್ಲ ಎಂದು ಹೇಳಿದರು.

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts