More

    ಆರೋಗ್ಯಕ್ಕಾಗಿ ಇಷ್ಟಲಿಂಗ ದೃಷ್ಟಿಯೋಗ ಮಾಡಿ

    ಇಳಕಲ್ಲ (ಗ್ರಾ) : ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ತಿಳಿದು ಜೀವನ ಸಾಗಿಸಬೇಕು. ಅಂಗದ ಮೇಲೆ ಇಷ್ಟಲಿಂಗ ಇದ್ದಾಗ ಮಾತ್ರ ವ್ಯಕ್ತಿಯಲ್ಲಿ ಶಕ್ತಿ ಮೂಡುತ್ತದೆ ಎಂದು ಗಡಿಗೌಡಗಾಂವ ಹಾವಲಿಂಗೇಶ್ವರ ಸಂಸ್ಥಾನ ಮಠದ ಡಾ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

    ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಕನಕಗಿರಿ- ಸುವರ್ಣಗಿರಿ ಸಂಸ್ಥಾನ ಮಠದ ಕಂದಗಲ್ಲಿನ ರುದ್ರಸ್ವಾಮಿ ಹೊರಗಿನ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ಆಯೋಜಿಸಿದ್ದ ಮಹಾದಾಸೋಹಿ ಶರಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಕುಂಭೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗದೀಕ್ಷೆ ಹಾಗೂ ಅಯ್ಯಚಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಲಿಂಗದೀಕ್ಷೆ ಹೊಂದಿದವರೆಲ್ಲರೂ ತಮಗೆ ಕೊಟ್ಟ ಇಷ್ಟಲಿಂಗದ ಮೂಲಕ ದೃಷ್ಟಿಯೋಗ ಮಾಡಿದಲ್ಲಿ ಸದಾ ಆರೋಗ್ಯವಂತರಾಗಿ ಬಾಳುವ ಜತೆಗೆ ಬದುಕಿನಲ್ಲಿ ಸಾರ್ಥಕತೆ ಪಡೆಯಬಹುದು ಎಂದರು.

    ಶ್ರೀಮಠದ ಡಾ. ಚನ್ನಮಲ್ಲ ಶ್ರೀಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆ ಹಾಗೂ ಅಯ್ಯಚಾರ ಕಾರ್ಯಕ್ರಮ ನಡೆಯಿತು. 328 ಜನರಿಗೆ ಲಿಂಗದೀಕ್ಷೆ ಹಾಗೂ 12 ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts