More

    Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

    ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ Satish Jarakiholi ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ DK Shivakumar ಅಸಮಾಧಾನಗೊಂಡಿದ್ದು, ಆ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಜಾರಕಿಹೊಳಿಗೆ ಸೂಚನೆ ನೀಡುವುದಾಗಿಯೂ ಹೇಳಿದ್ದಾರೆ.

    ಹಿಂದೂ Hindu ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ Hindu ಎಂಬ ಪದ ಪರ್ಷಿಯನ್ ಪದವಾಗಿದ್ದು, ಭಾರತೀಯ ಪದವೇ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಅವರು ಈ ಮಾತನ್ನು ಹೇಳಿದ್ದರು.

    ಭಾರತಕ್ಕೂ-ಪರ್ಷಿಯನ್​ಗೂ ಏನೂ ಸಂಬಂಧವಿಲ್ಲದಿದ್ದರೂ, ಹಿಂದೂ Hindu ಪದ ನಮ್ಮದು ಹೇಗಾಯಿತು ಎಂಬುವುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಿಂದೂ Hindu ಪದದ ಅರ್ಥ ಅಶ್ಲೀಲವಾಗಿದ್ದು, ನಿಜಾರ್ಥ ತಿಳಿದರೆ ನಾಚಿಕೆ ಆಗುತ್ತದೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದರು.

    ಜಾರಕಿಹೊಳಿ Jarakiholi ಅವರ ಈ ವಿವಾದಾತ್ಮಕ ಹೇಳಿಕೆ ಕುರಿತಂತೆ ಇಂದು ಬೆಳಗಾವಿಯ ಕಿತ್ತೂರಿನಲ್ಲಿ ಡಿ.ಕೆ.ಶಿವಕುಮಾರ್ DK Shivakumar ಪ್ರತಿಕ್ರಿಯೆ ನೀಡಿದ್ದು, ಸತೀಶ್ ಜಾರಕಿಹೊಳಿ Satish Jarakiholi ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ಹಿಂದೂ Hindu ಧರ್ಮ ಮೂಲ ಧರ್ಮ. ಅವರು ಹಾಗೆ ಮಾತನಾಡಿರುವುದು ತಪ್ಪು, ಆ ಹೇಳಿಕೆ ಹಿಂಪಡೆಯುವಂತೆ ನಾನು ನಮ್ಮ Congress ಪಕ್ಷದಿಂದ ಅವರಿಗೆ ಸೂಚನೆ ನೀಡುತ್ತೇನೆ ಎಂದಿರುವ ಡಿ.ಕೆ.ಶಿವಕುಮಾರ್ DK Shivakumar, Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ ಎಂದೂ ಹೇಳಿದ್ದಾರೆ.

    Hindu ಧರ್ಮದ ಬಗ್ಗೆ ಮಾತನಾಡುವ ಹಕ್ಕು ನನಗೂ ಇಲ್ಲ, ಅವರಿಗೂ ಇಲ್ಲ: ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

    ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts