ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗಲೇ ನವಜಾತ ಶಿಶು ಸಾವು!; ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ-ಆಕ್ರೋಶ..

ಚಿಕ್ಕಬಳ್ಳಾಫುರ: ತಾಯಿ-ಮಗು ಸಾವಿಗೀಡಾದ ಪ್ರಕರಣದ ಬೆನ್ನಿಗೇ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಎಡವಟ್ಟಾಗಿದೆ. ವೈದ್ಯಕೀಯ ಪರೀಕ್ಷೆಗೆಂದು ನವಜಾತ ಶಿಶುವಿನ ಬ್ಲಡ್​ ಡ್ರಾ ಮಾಡುತ್ತಿರುವಾಗಲೇ ಅದು ಸಾವಿಗೀಡಾಗಿದೆ. ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಪ್ರಕರಣ ಸಂಭವಿಸಿದೆ. ಸಾವಿಗೀಡಾದ ನವಜಾತ ಶಿಶು ಚಿಕ್ಕಬಳ್ಳಾಫುರ ತಾಲೂಕಿನ ಕೊರೇನಹಳ್ಳಿ ನಿವಾಸಿಗಳಾದ ಸಂಧ್ಯಾ-ಗಂಗರಾಜು ಎಂಬ ದಂಪತಿಯದ್ದು. ವಾಂತಿ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಈ ನವಜಾತ ಶಿಶುವಿನ ಬ್ಲಡ್ ಡ್ರಾ ಮಾಡುತ್ತಿದ್ದಾಗ ಮಗು ಸಾವಿಗೀಡಾಗಿದೆ ಎನ್ನಲಾಗಿದೆ. ಆಸ್ಪತ್ರೆಯ ದಾದಿಯ ವಿರುದ್ಧ ನಿರ್ಲಕ್ಷ್ಯ ಆರೋಪ ಹೊರಿಸಿರುವ ಶಿಶುವಿನ … Continue reading ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗಲೇ ನವಜಾತ ಶಿಶು ಸಾವು!; ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ-ಆಕ್ರೋಶ..