More

  Weekend with Ramesh; ಸಾಧಕರ ಕುರ್ಚಿ ಏರಲಿದ್ದಾರಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌!

  ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ವಿಕೇಂಡ್​ ವಿತ್​ ರಮೇಶ್​​ ಕಾರ್ಯಕ್ರಮವು ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸ್ಟಾರ್​​ ನಟ-ನಟಿಯರು, ರಾಜಕಾರಣಿಗಳು, ಉದ್ಯಮಿಗಳು, ರಂಗಭೂಮಿ ಕಲಾವಿಧರು ಹೀಗೆ ಹಲವು ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಾಧನೆ ಮಾಡುವ ಮೂಲಕವಾಗಿ ಸಮಾಜವೇ ಒಮ್ಮೆ ಇವರ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸವನ್ನು ಈ ಕಾರ್ಯಕ್ರಮ ಮಾಡುತ್ತಿದೆ. ಈಗಾಗಲೇ ನೂರಾರು ಸಾಧಕರ ವೈಯಕ್ತಿಕ ಜೀವನ ಹಾಗೂ ಅವರು ನಡೆದು ಬಂದ ಹಾದಿಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ ಕಾರ್ಯಕ್ರಮ ಇದಾಗಿದೆ.

  ಸೀಸನ್‌ 5ರಲ್ಲಿ ಮೋಹಕ ತಾರೆ ರಮ್ಯಾ ಅವರಿಂದ ಆರಂಭವಾದ ಈ ಶೋಗೆ ಇದೀಗ ಈ ವಾರ ಟ್ರಬಲ್‌ ಶೂಟರ್‌, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಾಧಕರ ಕುರ್ಚಿಯಲ್ಲಿ ಆಸಿನರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತಾಗಿ ಸಖತ್​​ ಚರ್ಚೆಯಾಗುತ್ತದೆ.

   ಇದನ್ನೂ ಓದಿ:  ಟರ್ಕಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ ವಿಜಯ್ ದೇವರಕೊಂಡ; ರಶ್ಮಿಕಾ ಎಲ್ಲಿ ಎಂದ ನೆಟ್ಟಿಗರು!

  ಈ ವಾರದ ಅತಿಥಿ ಯಾರೆಂಬುದನ್ನು ಜೀ ಕನ್ನಡದವರು ಇನ್ನೂ ಬಹಿರಂಗಗೊಳಿಸಿಲ್ಲ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್​ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಹಂಚಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

  ಇದನ್ನೂ ಓದಿ:  ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ

  ಘಟಾನುಘಟಿ ನಾಯಕನ ನೈಜ ಜೀವನ ವೀಕೆಂಡ್‌ ವಿಥ್‌ ರಮೇಶ್‌ ಶೋದಲ್ಲಿ ಅನಾವರಣಗೊಳ್ಳಲಿದೆ. ರಾಜಕೀಯ ಮಾತ್ರವಲ್ಲದೆ, ವೈಯಕ್ತಿಕ ಜೀವನ, ಉದ್ಯಮ, ಅನುಭವಿಸಿದ ಯಾತನೆ ಎಲ್ಲವನ್ನೂ ವೀಕೆಂಡ್‌ ಶೋದಲ್ಲಿ ಅನಾವರಣ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  ಆದರೆ ಕಾರ್ಯಕ್ರಮವನ್ನು ಪ್ರಸಾರಮಾಡುವ ಚಾನೆಲ್​ ಕಡೆಯಿಂದ ಡಿಕೆ ಶಿವಕುಮಾರ್ ಏಪಿಸೋಡ್‌ ಯಾವಾಗ ಶುರು? ನಿಜಕ್ಕೂ ಚಿತ್ರೀಕರಣವಾಗಿದ್ಯಾ? ಇದು ಗಾಳಿ ಸುದ್ದಿನಾ ಹೀಗೆ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕು ಎಂದಾದರೆ ನಾವು ವೀಕೆಂಡ್‌ ಶೋ ಪ್ರಸಾರವಾಗುವವರೆಗೂ ಕಾಯುವುದು ಅವಶ್ಯಕವಾಗಿದೆ.

  ಭೋಗಾಪುರದಲ್ಲಿ ಜೆಟ್ ವಿಮಾನ ಪತನ; ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts