More

    ಡಿಜೆ ಹಳ್ಳಿ ಗಲಭೆಯ ರೂವಾರಿ ಪತ್ತೆಗೆ ಸುಳಿವು ಕೊಟ್ಟ ಮೊಬೈಲ್​ ರಿಂಗ್​ಟೋನ್​!

    ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್​ಭೈರಸಂದ್ರ ಗಲಭೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ವಾಜಿದ್​ನನ್ನು ಬಂಧನಕ್ಕೆ ಸುಳಿವು ಕೊಟ್ಟದ್ದು ಮೊಬೈಲ್​ ರಿಂಗ್​ ಟೋನ್​!

    ಆರೋಪಿ ವಾಜೀದ್​ನನ್ನು ಬಂಧಿಸಲು ಮಂಗಳವಾರ ಆತನ ಮನೆಗೆ ಸಿಸಿಬಿ ಪೊಲೀಸರು ಹೋಗಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸಲು ಹೊರಗಡೆಯಿಂದ ಆರೋಪಿ ಬೀಗ ಹಾಕಿದ್ದ. ಮೊದಲು ಸುಮ್ಮನಾದ ಅಧಿಕಾರಿಗಳು, ಅನುಮಾನದ ಮೇರೆಗೆ ಆತನ ಮೊಬೈಲ್​ಗೆ ಕರೆ ಮಾಡಿದಾಗ ಮನೆಯೊಳಗೆ ಮೊಬೈಲ್​ ರಿಂಗ್​ ಆಗುವುದು ಕೇಳಿಸಿತ್ತು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆಯುವುದಾಗಿ ಪೊಲೀಸರು ಎಚ್ಚರಿಸಿದ್ದರು. ಆತಂಕಗೊಂಡ ವಾಜೀದ್​ ಬಾಗಿಲು ತೆಗೆದಿದ್ದಾನೆ ಎನ್ನಲಾಗಿದೆ. ವಾಜೀದ್​ನನ್ನು ಬಂಧಿಸಿದ ಬೆನ್ನಲ್ಲೇ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ ಆತನ ನಾಲ್ವರು ಸಹಚರರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿರಿ ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

    ಸಿಸಿಬಿ ಬಲೆಗೆ ಬಿದ್ದಿದ್ದ ವಾಜೀದ್​ನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ ಡಿಜೆ ಹಳ್ಳಿ ಗಲಭೆಯ ರೂವಾರಿ ಪತ್ತೆಗೆ ಸುಳಿವು ಕೊಟ್ಟ ಮೊಬೈಲ್​ ರಿಂಗ್​ಟೋನ್​!ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ತೌಸಿಫ್​​, ಫಾಜಿಲ್​, ಅಫ್ಜಲ್​ ಹಾಗೂ ಪಾಷಾ ಎಂಬುವವರನ್ನು ಪತ್ತೆಹಚ್ಚಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿಯ ಒಂದು ತಂಡ ವಾಜಿದ್​ನನ್ನು ವಿಚಾರಣೆ ನಡೆಸಿ ಗಲಭೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ವಿಚಾರಣೆ ವೇಳೆ ಗಲಭೆಯಲ್ಲಿ ಭಾಗಿಯಾದ ಒಟ್ಟು 10 ಪ್ರಮುಖ ಆರೋಪಿಗಳ ವಿವರಗಳನ್ನು ಈತ ನೀಡಿದ್ದ. ಈ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದ 6 ಮಂದಿ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

    ವಾಜೀದ್​ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂಧಿತ ನಾಲ್ವರು ಆರೋಪಿಗಳು ನಗರದ ವಿವಿಧೆಡೆಯಿಂದ ಗಲಭೆ ನಡೆಸಲು ಹಲವು ಜನರನ್ನು ಕರೆ ತಂದಿದ್ದರು. ಒಂದೇ ಸಮುದಾಯದ ನೂರಾರು ಜನರನ್ನು ಸಂಪರ್ಕಿಸಿ ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್​ಭೈರಸದಂದ್ರದ ಬಳಿ ಬರುವಂತೆ ಸೂಚಿಸಿದ್ದರು. ಗಲಭೆಯಲ್ಲಿ ಭಾಗಿಯಾದರೆ ಆಥಿರ್ಕ ನೆರವು ನೀಡಿ, ಪೊಲೀಸರಿಂದ ಬಂಧನಕ್ಕೊಳಗಾದರೆ ಜಾಮೀನು ಕೊಡಿಸುವುದಾಗಿ ಇವರಿಗೆ ಭರವಸೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    https://app.bitly.com/Bk52bwjriNH/bitlinks/31VzNc0?offset=60

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts