More

    ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ

    ವಾಷಿಂಗ್ಟನ್​: ದೀಪಾವಳಿಯ ಹಬ್ಬಕ್ಕೆ ಭಾರತದಾದ್ಯಂತ ಮತ್ತು ಭಾರತೀಯರಿರುವೆಡೆಯೆಲ್ಲಾ ದೀಪ ಬೆಳಗಿಸುವ ಸಂಪ್ರದಾಯ ಹರಡಿದೆ. ಈ ಬಾರಿಯ ವಿಶೇಷವೆಂದರೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್​ ಕೂಡ ತಮ್ಮ ಭವ್ಯ ನಿವಾಸದಲ್ಲಿ ಜ್ಯೋತಿ ಬೆಳಗಿ ದೀಪಾವಳಿಯ ಶುಭಾಶಯ ಕೋರಿದ್ದಾರೆ.

    “ದೀವಾಲಿಯ ಬೆಳಕು ನಮಗೆ ಕತ್ತಲಿನಿಂದ ಜ್ಞಾನ, ಬುದ್ಧಿ ಮತ್ತು ಸತ್ಯಗಳಿವೆ, ವಿಭಜನೆಯ ಜೊತೆಗೆ ಏಕತೆ ಇದೆ, ಹತಾಶೆಯ ನಡುವೆ ಆಶಾಭಾವವಿದೆ ಎಂದು ನೆನಪಿಸಲಿ” ಎಂದು ಬಿಡೆನ್​ ಗುರುವಾರದಂದು ಟ್ವೀಟ್ ಮಾಡಿ ಹಾರೈಸಿದ್ದಾರೆ. “ಅಮೆರಿಕ ಮತ್ತು ಜಗತ್ತಿನೆಲ್ಲೆಡೆ ಹಬ್ಬ ಆಚರಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧಧರ್ಮೀಯರಿಗೆ – ಪೀಪಲ್ಸ್​ ಹೌಸ್​ನಿಂದ ನಿಮ್ಮ ಮನೆಗೆ – ದೀಪಾವಳಿ ಶುಭಾಶಯಗಳು” ಎಂದು ಶುಭ ಕೋರಿದ್ದಾರೆ.

    ಈ ಟ್ವಿಟರ್​ ಸಂದೇಶದೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾದ ಬಿಡೆನ್​, ತಾವು ಮತ್ತು ಪತ್ನಿ ಜಿಲ್​ ಬಿಡೆನ್​​ ತಮ್ಮ ಅಧಿಕೃತ ನಿವಾಸ ವೈಟ್​ ಹೌಸಿನಲ್ಲಿ ಹೂವಿನ ರಂಗೋಲಿ​ಯ ಮಧ್ಯದಲ್ಲಿರಿಸಿದ ದೀಪಗಳನ್ನು ಬೆಳಗಿಸುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಬಿಡೆನ್​​ರ ಈ ಪೋಸ್ಟ್​ಗೆ ಅದಾಗಲೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಲೈಕುಗಳು ಲಭಿಸಿವೆ. (ಏಜೆನ್ಸೀಸ್)

    ಹಾನಗಲ್​​ ಗೆಲುವು 2023ರ ಗೆಲುವಿನ ಪ್ರಾರಂಭ ಎಂದ ಡಿಕೆಶಿ

    ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts