More

    ದೀಪಾವಳಿ, ಲಕ್ಷ್ಮೀ ಪೂಜೆ ಸಡಗರ

    ರಾಣೆಬೆನ್ನೂರ: ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

    ಹಬ್ಬದ 2ನೇ ದಿನ ಸೋಮವಾರ ಅಮಾವಾಸ್ಯೆ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಅಂಗಡಿ-ಮುಂಗಟ್ಟುಗಳನ್ನು ಸಿಂಗರಿಸಿ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿದರು. ಕಾರು, ಬೈಕ್​ಗಳಿಗೂ ಪೂಜೆ ಸಲ್ಲಿಸಿದರು.

    ಮಾರುಕಟ್ಟೆಯಲ್ಲಿ ಸೋಮವಾರವೂ ಜನಸಂದಣಿ ಹೆಚ್ಚಿದ್ದು, ಜನರು ಅಗತ್ಯವಸ್ತುಗಳನ್ನು ಖರೀದಿಸಿ, ಅಂಗಡಿಯಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಂಗಡಿಗಳ ಮುಂದೆ ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಹಣತೆ, ಮೊಂಬತ್ತಿಗಳನ್ನು ಸಾಲು ಸಾಲಾಗಿ ಹಚ್ಚಿ, ಪಟಾಕಿ ಸಿಡಿಸಿ ಲಕ್ಷ್ಮೀ ಪೂಜೆ ನೆರವೇರಿಸಿದರು.

    ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಕಂಡುಬಂತು.

    ಇಂದು ಬಲಿಪಾಡ್ಯಮಿ ಪೂಜೆ

    ನ. 14ರಂದು ಬಲಿಪಾಡ್ಯಮಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಮನೆ ಮುಂದೆ ಹಟ್ಟಿಲಕ್ಕವ್ವನನ್ನು ಪ್ರತಿಷ್ಠಾಪನೆ ಮಾಡಲು ತಯಾರಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts