More

    ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!

    ಬೆಂಗಳೂರು: ಆಕೆ ವಿವಾಹಿತೆ, ಆದರೆ ಹತ್ತು ವರ್ಷಗಳ ಬಳಿಕ ವಿಚ್ಛೇದನ ಪಡೆದ ಅವಳು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರಕರಣ ಒಂದು ಎಸ್​ಎಂಎಸ್​​ನಿಂದಾಗಿ ಬಟಾಬಯಲಾಗಿದೆ. ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವನ್ನು ಭೇದಿಸಿದ ಪೊಲೀಸರಿಂದಾಗಿ ಆಕೆಯ ಅಸಲಿಯತ್ತು ಬಹಿರಂಗಗೊಂಡಿದೆ.

    ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚಂದ್ರಾ ಲೇಔಟ್ ನಿವಾಸಿ ಅರುಣ್ ನಾಯ್ಡು, ಆರ್.ಆರ್. ನಗರದ ರೌಡಿ ಕಾರ್ತಿಕ್ ಅಲಿಯಾಸ್ ಅರ್ನಾಲ್ಡ್, ಸಹಚರರಾದ ಯಶವಂತ್, ವಿಶಾಲ್ ಮತ್ತು ಸಂಜಯ್​ ಎಂಬವರನ್ನು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಇತ್ತೀಚಿಗೆ ನಾಗರಬಾವಿಯ ತನ್ನ ಪ್ರೇಯಸಿಗೆ ಮೆಸೇಜ್​ ಮಾಡಿದ ಎಂದು ಶ್ರೀಕಾಂತ್​ನನ್ನು ಆರೋಪಿಗಳು ಅಪಹರಿಸಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶ್ರೀಕಾಂತ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ ಎಸಿಪಿ ಎಚ್.ಎನ್. ಧಮೇಂದ್ರಯ್ಯ ನೇತೃತ್ವದ ತಂಡ, ಮೊಬೈಲ್​ಫೋನ್​​ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಚಂದ್ರಾ ಬಡಾವಣೆಯ ಮಹಿಳೆ 14 ವರ್ಷಗಳ ಹಿಂದೆ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ 10 ವರ್ಷಗಳ ಹಿಂದೆ ಲೋಕೇಶ್​ಗೆ ವಿಚ್ಛೇದನ ನೀಡಿದ ಮಹಿಳೆ, ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ಜತೆ ಸ್ನೇಹ ಬೆಳೆಸಿ ಲಿವಿಂಗ್ ಟುಗೆದರ್​ನಲ್ಲಿದ್ದಳು.

    ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!
    ಬಂಧಿತ ಆರೋಪಿಗಳು

    ಮೂರು ವರ್ಷಗಳ ಹಿಂದೆ ಆತನಿಂದಲೂ ದೂರವಾಗಿ ಅರುಣ್ ನಾಯ್ಡುವಿನ ಸ್ನೇಹ ಬೆಳೆಸಿದ್ದಳು. ಆದರೆ ಶ್ರೀಕಾಂತ್ ಇತ್ತೀಚಿಗೆ ಮಾಜಿ ಗೆಳತಿಗೆ ವಾಟ್ಸ್​ಆ್ಯಪ್​ನಲ್ಲಿ ಮೇಸೆಜ್ ಮಾಡಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದ. ಅದಕ್ಕೆ ಈಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಆದರೂ ಶ್ರೀಕಾಂತ್ ಮೆಸೇಜ್ ಮಾಡುತ್ತಿದ್ದ. ಇದು ಅರುಣ್​ಗೆ ತಿಳಿದು ಶ್ರೀಕಾಂತ್​​ನನ್ನು ಕೊಲೆ ಮಾಡಲು ನಿರ್ಧರಿಸಿದ್ದ.

    ಅದಕ್ಕಾಗಿ ಅರುಣ್​ ರೌಡಿ ಕಾರ್ತಿಕ್ ಸಹಾಯ ಪಡೆದಿದ್ದ. ನಾಗರಬಾವಿ ಸಮೀಪ ಶ್ರೀಕಾಂತ್​ನನ್ನು ಅಪಹರಿಸಿದ ಆರೋಪಿಗಳು, ಕೆಂಗೇರಿ ಸಮೀಪದ ಗ್ಯಾರೇಜ್​ಗೆ ಕರೆದೊಯ್ದು ಕೂಡಿಹಾಕಿ ಥಳಿಸಿದ್ದರು. ಅರುಣ್ ಕಾಲಿಗೆ ಬಿದ್ದ ಶ್ರೀಕಾಂತ್​ನನ್ನು ಬಿಟ್ಟು ಕಳುಹಿಸಿದ್ದರು. ಬಳಿಕ ಈ ಸಂಬಂಧ ಚಂದ್ರಾ ಲೇಔಟ್ ಠಾಣೆಯಲ್ಲಿ ಶ್ರೀಕಾಂತ್​ ದೂರು ಸಲ್ಲಿಸಿದ್ದ. ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದ್ದು, ಬಳಿಕ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts